ವಿದೇಶ

ಕಠ್ಮಂಡು ಕಣಿವೆಯಲ್ಲಿ ಪಾನಿ ಪುರಿ ಮಾರಾಟ ನಿರ್ಬಂಧ: ಕಾರಣ ಏನು ಗೊತ್ತೇ?

Srinivas Rao BV

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪಾನಿಪುರಿ ಮಾರಾಟವನ್ನು ನಿರ್ಬಂಧಿಸಲಾಗಿದೆ. 

ಕಣಿವೆಯ ಲಲಿತ್ ಪುರ್ ಮೆಟ್ರೋಪಾಲಿಟನ್ ಸಿಟಿಯಲ್ಲಿ ಕಾಲರಾ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.  ಈ ವರೆಗೂ ಈ ಪ್ರದೇಶದಲ್ಲಿ 12 ಮಂದಿಗೆ ಕಾಲರಾ ದೃಢಪಟ್ಟಿದೆ. 

ಪಾನಿಪುರಿ ತಯಾರಿಸುತ್ತಿದ್ದ ನೀರಿನಲ್ಲಿ ಕಾಲರಾ ಬ್ಯಾಕ್ಟೀರಿಯಾಗಳು ಪತ್ತೆಯಾದ ಹಿನ್ನೆಲೆಯಲ್ಲಿ ಲಲಿತ್ ಪುರ್ ಮೆಟ್ರೋಪಾಲಿಟನ್ ಸಿಟಿ (ಎಲ್ಎಂಸಿ) ಪಾನಿಪುರಿ ಮಾರಾಟವನ್ನು ನಿರ್ಬಂಧಿಸುವಂತೆ ಸೂಚನೆ ನೀಡಿದೆ.

ಕಾರಿಡಾರ್ ಪ್ರದೇಶಗಳಲ್ಲಿ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಪಾನಿಪುರಿ ನಿರ್ಬಂಧಕ್ಕೆ ತಯಾರಿ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಮುಖ್ಯಸ್ಥ ಸೀತಾರಾಮ್ ಹಚೇತು ಹೇಳಿದ್ದಾರೆ. 

ಕಾಲರ ಹೆಚ್ಚು ಹರಡುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಅಲ್ಲಿನ ಆರೋಗ್ಯ ಸಚಿವಾಲಯ ಜನತೆಗೆ ಮನವಿ ಮಾಡಿದೆ. 

SCROLL FOR NEXT