ವಿದೇಶ

ಪಾಕಿಸ್ತಾನದ ಹಲವು ಪತ್ರಕರ್ತರು, ರಾಯಭಾರಿ ಮಿಷನ್ ನ ಟ್ವಿಟರ್ ಖಾತೆಗಳನ್ನು ನಿಷೇಧಿಸಿದ ಭಾರತ!

Srinivas Rao BV

ಇಸ್ಲಾಮಾಬಾದ್: ಭಾರತ ಪಾಕಿಸ್ತಾನದ ರಾಯಭಾರಿ ಮಿಷನ್ ಹಾಗೂ ಅಲ್ಲಿನ ಹಲವು ಪತ್ರಕರ್ತರು, ಪ್ರಮುಖ ವ್ಯಕ್ತಿಗಳ ಟ್ವೀಟರ್ ಖಾತೆಗಳನ್ನು ನಿಷೇಧಿಸಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಅಡಿಯಲ್ಲಿ ಟ್ವಿಟರ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಇಸ್ಲಾಮಾಬಾದ್ ನಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರೋಪಿಸಿದೆ.

ಭಾರತ, ಅಲ್ಲಿನ ಟ್ವಿಟರ್ ಗೆ ಪಾಕಿಸ್ತಾನದ ಕೆಲವು ಅಧಿಕೃತ ಖಾತೆಗಳಿಂದ ಬರುವ ಮಾಹಿತಿಯ ಹರಿವನ್ನು ನಿರ್ಬಂಧಿಸಿರುವುದು ಅತ್ಯಂತ ಆತಂಕಕಾರಿ ಸಂಗತಿ ಎಂದು ಅಲ್ಲಿನ ಸಚಿವಾಲಯ ಹೇಳಿರುವುದನ್ನು ಜಿಯೋ ನ್ಯೂಸ್ ವರದಿ ಪ್ರಕಟಿಸಿದ್ದು ನಿಷೇಧಕ್ಕೊಳಗಾದ ಟ್ವೀಟ್ ಖಾತೆಗಳ ಪಟ್ಟಿಯನ್ನೂ ನೀಡಿದೆ.

ಬ್ರಿಟನ್, ಟರ್ಕಿ, ಇರಾನ್, ಈಜಿಪ್ಟ್ ನಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿ ಖಾತೆಗಳು ನಿಷೇಧಕ್ಕೊಳಗಾಗಿದ್ದು,  ಭಾರತದಲ್ಲಿ ಬಹುತ್ವದ ಧ್ವನಿಗೆ ಮತ್ತು ಮಾಹಿತಿಗೆ ಪ್ರವೇಶ ನಿರ್ಬಂಧಿಸುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ ಎಂದು ಪಾಕ್ ಹೇಳಿದೆ. 

ಇದೇ ವೇಳೆ ಪಾಕ್ ನ ಸಚಿವಾಲಯ ಟ್ವಿಟರ್ ಗೆ ಸಲಹೆ ನೀಡಿದ್ದು ಸಾಮಾಜಿಕ ಜಾಲತಾಣದ ವೇದಿಕೆಗಳು ಅಂತಾರಾಷ್ಟ್ರೀಯ ನಿಮಗಳಿಗೆ ಅನುಗುಣವಾಗಿರಬೇಕು. ಈ ಟ್ವೀಟ್ ಖಾತೆಗಳಿಗೆ ಪ್ರವೇಶವನ್ನು ಮರುಕಲ್ಪಿಸಬೇಕು ಎಂದು ಸರ್ಕಾರ ಒತ್ತಾಯಿಸಿರುವುದಾಗಿ ಹೇಳಿದೆ. 

ಭಾರತದ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಅಡಿಯಲ್ಲಿ ಲಂಡನ್ ನಲ್ಲಿರುವ ದಿ ನ್ಯೂಸ್ ಹಾಗೂ ಜಿಯೋ ನ ವರದಿಗಾರರು, ಮುರ್ತಾಜ ಅಲಿ ಶಾ ಹಾಗೂ ಸಿಜೆ ವರ್ಲೆಮನ್ ಅವರ ಟ್ವಿಟರ್ ಹ್ಯಾಂಡಲ್ ಗಳನ್ನು ತಡೆಹಿಡಿಯಲಾಗಿದೆ. 

SCROLL FOR NEXT