ವಿದೇಶ

ಪುಟಿನ್ ಮಹಿಳೆಯಾಗಿದ್ದರೆ ಉಕ್ರೇನ್ ಯುದ್ಧ ನಡೆಯುತ್ತಿರಲಿಲ್ಲ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

Srinivasamurthy VN

ಬರ್ಲಿನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಹಿಳೆಯಾಗಿದಿದ್ದರೆ ಉಕ್ರೇನ್‌ನಲ್ಲಿ ಯುದ್ಧವನ್ನು ಪ್ರಾರಂಭಿಸುತ್ತಿರಲಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಮಂಗಳವಾರ ಸಂಜೆ ಜರ್ಮನ್ ಬ್ರಾಡ್‌ಕಾಸ್ಟರ್ ZDFನ ಸಂದರ್ಶನದಲ್ಲಿ ಉಕ್ರೇನ್ ಯುದ್ಧದ ವಿಚಾರವಾಗಿ ಮಾತನಾಡಿರುವ ಬೋರಿಸ್ ಜಾನ್ಸನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಬ್ಬ ಮಹಿಳೆಯಾಗಿದ್ದರೆ.. ಉಕ್ರೇನ್ ಮೇಲೆ ಯುದ್ಧ ಸಾರುತ್ತಿರಲಿಲ್ಲ. ಅವರು ಈ ರೀತಿಯ ಆಕ್ರಮಣ ಶೀಲತೆ ಮತ್ತು ಹಿಂಸಾಚಾರದ ಹುಚ್ಚುತನದ ಯುದ್ಧವನ್ನು ಪ್ರಾರಂಭಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಜಾನ್ಸನ್ ಹೇಳಿದ್ದಾರೆ.  

ಉಕ್ರೇನ್‌ನ ಮೇಲೆ ಪುಟಿನ್ ಅವರ ಆಕ್ರಮಣವು "ವಿಷಕಾರಿ ಪುರುಷತ್ವದ ಪರಿಪೂರ್ಣ ಉದಾಹರಣೆಯಾಗಿದೆ.. ಸಹಜವಾಗಿ ಜನರು ಯುದ್ಧವು ಕೊನೆಗೊಳ್ಳಬೇಕೆಂದು ಬಯಸುತ್ತಾರೆ.. ಆದರೆ ಸದ್ಯಕ್ಕೆ ಯಾವುದೇ ಒಪ್ಪಂದ ಲಭ್ಯವಿಲ್ಲ. ಪುಟಿನ್ ಶಾಂತಿಯ ಪ್ರಸ್ತಾಪವನ್ನು ಮಾಡುತ್ತಿಲ್ಲ. ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್ ಅನ್ನು ಬೆಂಬಲಿಸಬೇಕು, ಮಾಸ್ಕೋದೊಂದಿಗೆ ಶಾಂತಿ ಮಾತುಕತೆಗಳು ಸಾಧ್ಯವಾದರೆ ಅದು ಸಾಧ್ಯವಾದಷ್ಟು ಉತ್ತಮವಾದ ಕಾರ್ಯತಂತ್ರದ ಸ್ಥಾನದಲ್ಲಿರಲು ಅನುವು ಮಾಡಿಕೊಡುತ್ತದೆ ಎಂದು ಜಾನ್ಸನ್ ಹೇಳಿದರು. 

ಇದೇ ವೇಳೆ ಮಹಿಳಾ ಶಿಕ್ಷಣದ ಪ್ರಾಮುಖ್ಯತೆ ಕುರಿತು ಮಾತನಾಡಿದ ಅವರು, 'ಪ್ರಪಂಚದಾದ್ಯಂತದ ಹುಡುಗಿಯರಿಗೆ ಉತ್ತಮ ಶಿಕ್ಷಣಕ್ಕಾಗಿ ಮತ್ತು "ಅಧಿಕಾರದ ಸ್ಥಾನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಕರೆ ನೀಡಿದರು.

SCROLL FOR NEXT