ವಿದೇಶ

ವಿಶ್ವಸಂಸ್ಥೆಯಲ್ಲಿ ರಷ್ಯಾದಿಂದ ನಿರ್ಣಯ, ಮತದಾನದಿಂದ ದೂರ ಉಳಿದ ಭಾರತ

Nagaraja AB

ನ್ಯೂಯಾರ್ಕ್: ಉಕ್ರೇನ್‌ಗೆ ಸಂಬಂಧಿಸಿದ ಮತ್ತೊಂದು ನಿರ್ಣಯ ಕುರಿತ ಮತದಾನದಿಂದ ಭಾರತ ದೂರ ಉಳಿದಿದೆ. ಉಕ್ರೇನ್ ನಲ್ಲಿ ಅಮೆರಿಕ ಮತ್ತು ಉಕ್ರೇನ್ ಮಿಲಿಟರಿ ಚಟುವಟಿಕೆ ನಡೆಸುತ್ತಿರುವುದು  ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶದ ಉಲ್ಲಂಘನೆಯಾಗಿದೆ.  ಈ ಕುರಿತ ತನಿಖೆಗೆ ಆಯೋಗವೊಂದನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾನಿರ್ಣಯವನ್ನು ಮಂಡಿಸಿತು.

ರಷ್ಯಾ ಮತ್ತು ಚೀನಾದ ಸದಸ್ಯರು ಮತ್ತು ನಿರ್ಣಯ ಮೇಲೆ ಮತ ಹಾಕಿದರು. ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ನಿರ್ಣಯದ ವಿರುದ್ಧ ಮತದಾನ ಮಾಡಿದರು. ಭಾರತ ಸೇರಿದಂತೆ ಇತರ ರಾಷ್ಟ್ರಗಳ ಸದಸ್ಯರು ಮತದಾನದಿಂದ ದೂರ ಉಳಿದರು. ಇದರಿಂದಾಗಿ ನಿರ್ಣಯಕ್ಕೆ ಬುಧವಾರ ಸೋಲಾಯಿತು.

ಜೈವಿಕ ಶಸಾಸ್ತ್ರ ಸಮಾವೇಶಕ್ಕೆ ಭಾರತ ಹೆಚ್ಚಿನ ಒತ್ತು ನೀಡುತ್ತದೆ. ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಭಾರತ ಬದ್ಧವಾಗಿದೆ ಎಂದು  ಭಾರತದ ಖಾಯಂ ಪ್ರತಿನಿಧಿ ಎ.ಅಮರನಾಥ್ ತಿಳಿಸಿದರು. ಜೈವಿಕ ಶಸಾಸ್ತ್ರ ಸಮಾವೇಶದ ನಿರ್ಣಯಗಳನ್ನು ಅದರ ಸದಸ್ಯ ರಾಷ್ಟ್ರಗಳು ಅನುಷ್ಠಾನಗೊಳಿಸುವ ಮೂಲಕ ಅದನ್ನು ಬಲಪಡಿಸಬೇಕಾದ ಅಗತ್ಯವಿದೆ. ಹೀಗಾಗಿ ಭಾರತ ನಿರ್ಣಯದಿಂದ ದೂರ ಉಳಿಯಿತು ಎಂದು ಅವರು ಹೇಳಿದರು. 

SCROLL FOR NEXT