ವಿದೇಶ

ಭಾರತ ಪ್ರತಿಭಾವಂತರ ಸಂಪದ್ಭರಿತ ರಾಷ್ಟ್ರ: ರಷ್ಯಾ ಅಧ್ಯಕ್ಷ ಪುಟಿನ್ ಮೆಚ್ಚುಗೆಯ ಸುರಿಮಳೆ

Nagaraja AB

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಭಾರತ ಪ್ರತಿಭಾವಂತರ ಸಂಪದ್ಬರಿತ ರಾಷ್ಟ್ರ ಎಂದು ಕರೆಯುವ ಮೂಲಕ ಮೆಚ್ಚುಗೆಯ ಸುರಿಮಳೆಗರೆದಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಭಾರತವು ಅತ್ಯುತ್ತಮ ಹಂತ ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ.

ರಷ್ಯಾ ಏಕತಾ ದಿನಾಚರಣೆ ಅಂಗವಾಗಿ  ಮಾತನಾಡಿದ ರಷ್ಯಾ ಅಧ್ಯಕ್ಷರು, ಭಾರತ ಹೆಚ್ಚು ಸಾಮರ್ಥ್ಯ ಹೊಂದಿರುವ ರಾಷ್ಟ್ರವಾಗಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ತನ್ನ ಅಭಿವೃದ್ಧಿಯ ವಿಷಯದಲ್ಲಿ ಉನ್ನತ ಮಟ್ಟ ತಲುಪಲಿದೆ. ಸುಮಾರು ಒಂದೂವರೆ ಶತಕೋಟಿ ಜನರಿರುವ ಭಾರತ, ಈಗ ಸಮರ್ಥ ರಾಷ್ಟ್ರವಾಗಿದೆ ಎಂದು ಅವರು ಭಾಷಣದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ರಷ್ಯಾದಿಂದ ನಿರ್ಣಯ, ಮತದಾನದಿಂದ ದೂರ ಉಳಿದ ಭಾರತ
 
ಆಫ್ರಿಕಾದ ವಸಾಹತುಷಾಹಿ, ಭಾರತದ ಸಾಮರ್ಥ್ಯ ಮತ್ತು ರಷ್ಯಾ ಹೇಗೆ ವಿಶಿಷ್ಟ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಹೊಂದಿದೆ ಎಂಬುದರ ಬಗ್ಗೆ ಮಾತನಾಡಿದ ಪುಟಿನ್, ಭಾರತದೊಂದಿಗೆ ಉತ್ತಮ ಸ್ನೇಹ ಹೊಂದಿರುವುದಾಗಿ ತಿಳಿಸಿದರು. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದ ವ್ಲಾಡಿಮಿರ್ ಪುಟಿನ್ ಅವರು, ಮೋದಿಯನ್ನು ನೈಜದೇಶ ಭಕ್ತ ಎಂದು ಕರೆದಿದ್ದರು.

SCROLL FOR NEXT