ಸಾಂದರ್ಭಿಕ ಚಿತ್ರ 
ವಿದೇಶ

ಜಗತ್ತಿನ ಜನಸಂಖ್ಯೆ ಈಗ 8 ಶತಕೋಟಿ, ಶೀಘ್ರದಲ್ಲೇ ಚೀನಾವನ್ನು ಹಿಂದಿಕ್ಕಲಿದೆ ಭಾರತ!

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಜಾಗತಿಕ ಜನಸಂಖ್ಯೆಯು ನವೆಂಬರ್ ಮಧ್ಯದ ವೇಳೆಗೆ ಎಂಟು ಶತಕೋಟಿ ತಲುಪುತ್ತಿದೆ ಮತ್ತು ಮುಂಬರುವ ದಶಕಗಳಲ್ಲಿ ನಿಧಾನ ಗತಿಯಲ್ಲಿ ಮತ್ತು ಪ್ರಾದೇಶಿಕ ಅಸಮಾನತೆಗಳೊಂದಿಗೆ...

ಯುನೈಟೆಡ್ ನೇಷನ್ಸ್: ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಜಾಗತಿಕ ಜನಸಂಖ್ಯೆಯು ನವೆಂಬರ್ ಮಧ್ಯದ ವೇಳೆಗೆ ಎಂಟು ಶತಕೋಟಿ ತಲುಪುತ್ತಿದೆ ಮತ್ತು ಮುಂಬರುವ ದಶಕಗಳಲ್ಲಿ ನಿಧಾನ ಗತಿಯಲ್ಲಿ ಮತ್ತು ಪ್ರಾದೇಶಿಕ ಅಸಮಾನತೆಗಳೊಂದಿಗೆ ಬೆಳೆಯುತ್ತಲೇ ಇರುತ್ತದೆ.

ನವೆಂಬರ್ 15 ರಂದು ಭೂಮಿಯ ಮೇಲಿನ ಮಾನವರ ಸಂಖ್ಯೆ ಎಂಟು ಶತಕೋಟಿಗೆ ತಲುಪಲಿದೆ. ಇದು 1950 ರಲ್ಲಿ ಇದ್ದ 2.5 ಶತಕೋಟಿ ಜಾಗತಿಕ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ಆದಾಗ್ಯೂ, 1960 ರ ದಶಕದ ಆರಂಭದಲ್ಲಿ ಒಂದು ಉತ್ತುಂಗದ ನಂತರ, ವಿಶ್ವದ ಜನಸಂಖ್ಯೆ ಬೆಳವಣಿಗೆಯ ದರವು ದಿಢೀರ್ ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ರಾಚೆಲ್ ಸ್ನೋ ಅವರು ಎಎಫ್ ಪಿಗೆ ತಿಳಿಸಿದ್ದಾರೆ.

ವಾರ್ಷಿಕ ಜನಸಂಖ್ಯೆ ಬೆಳವಣಿಗೆ ದರ 1962 ರಿಂದ 1965ರ ವರೆಗೆ ಗರಿಷ್ಠ ಶೇ. 2.1 ಇತ್ತು. ಅದು 2020 ರಲ್ಲಿ ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ.

2050ರ ವೇಳೆಗೆ ಆ ಅಂಕಿಅಂಶವು ಸುಮಾರು ಶೇ. 0.5ಕ್ಕೆ ಕುಸಿಯಬಹುದು. ಏಕೆಂದರೆ ಫಲವತ್ತತೆ ದರಗಳಲ್ಲಿನ ನಿರಂತರ ಕುಸಿತ ಜನಸಂಖ್ಯೆ ಬೆಳವಣಿಗೆ ದರ ಕಡಿಮೆಯಾಗಲು ಕಾರಣ ಎಂದು ವಿಶ್ವಸಂಸ್ಥೆ ಹೇಳಿದೆ.

ಚೀನಾವನ್ನು ಹಿಂದಿಕ್ಕಲಿದೆ ಭಾರತ
ವಿಶ್ವಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳಾದ ಚೀನಾ ಮತ್ತು ಭಾರತ 2023ರ ಹೊತ್ತಿಗೆ ತಮ್ಮ ತಮ್ಮ ಸ್ಥಾನಗಳನ್ನು ಬದಲಾಯಿಸಿಕೊಳ್ಳಲಿವೆ.

1.4 ಶತಕೋಟಿ ಜನಸಂಖ್ಯೆ ಹೊಂದಿರುವ ಚೀನಾ ಅಂತಿಮವಾಗಿ 2050ರ ವೇಳೆಗೆ 1.3 ಶತಕೋಟಿಗೆ ಕುಸಿಯಲು ಪ್ರಾರಂಭಿಸುತ್ತದೆ ಮತ್ತು ಶತಮಾನದ ಅಂತ್ಯದ ವೇಳೆಗೆ, ಚೀನಿ ಜನಸಂಖ್ಯೆಯು ಕೇವಲ 800 ದಶಲಕ್ಷಕ್ಕೆ ಇಳಿಯಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ಭಾರತದ ಜನಸಂಖ್ಯೆಯು ಪ್ರಸ್ತುತ ಚೀನಾಕ್ಕಿಂತ ಸ್ವಲ್ಪ ಕಡಿಮೆ ಇದ್ದು, 2023ರಲ್ಲಿ ಅದರ ಉತ್ತರದ ನೆರೆಯ ದೇಶವನ್ನು ಮೀರಿಸುತ್ತದೆ ಮತ್ತು 2050ರ ವೇಳೆಗೆ 1.7 ಶತಕೋಟಿ ತಲುಪುವ ನಿರೀಕ್ಷೆ ಇದೆ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವಸಂಸ್ಥೆಯ ಪ್ರಕಾರ, ಅಮೆರಿಕ 2050ರ ವೇಳೆಗೆ ಜಗತ್ತಿನ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಬೆಳೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT