ವಿದೇಶ

ಮತ್ತೊಂದು ಯುದ್ಧದ ಛಾಯೆ; ಚೀನಾದೊಂದಿಗೆ ಸಮರಕ್ಕೆ ಸಜ್ಜಾಗುತ್ತಿದೆ ತೈವಾನ್! 

Srinivas Rao BV

ಬೀಜಿಂಗ್: ರಷ್ಯಾ-ಉಕ್ರೇನ್ ಸಮರವೇ ಇನ್ನೂ ಕೊನೆತಲುಪಿಲ್ಲ ಅದಾಗಲೇ ಜಗತ್ತಿಗೆ ಮತ್ತೊಂದು ಯುದ್ಧದ ಛಾಯೆ ಆವರಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ದಿ ಸಿಂಗಪೂರ್ ವರದಿಯ ಪ್ರಕಾರ, ಚೀನಾ ತೈವಾನ್ ಬಳಿ ಸೇನಾ ಚಟುವಟಿಕೆಗಳನ್ನು ಹೆಚ್ಚಿಸಿದ್ದು, ಅದನ್ನು ತನ್ನ ದೇಶದೊಂದಿಗೆ ವಿಲೀನಗೊಳಿಸಲು ಯತ್ನಿಸುತ್ತಿದೆ. ಇತ್ತ ತೈವಾನ್ ಸಹ ಯುದ್ಧ ಸನ್ನದ್ಧವಾಗುತ್ತಿದ್ದು ತನ್ನನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಇದನ್ನೂ ಓದಿ: ಯುದ್ಧಕ್ಕೆ ಸಿದ್ಧರಾಗಿ, ಹೋರಾಡಿ ಮತ್ತು ಗೆಲ್ಲಿ: ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ
 
ಚೀನಾದ ನೈಜ ಉದ್ದೇಶಗಳನ್ನು ಅರಿತಿರುವ ತೈವಾನ್, ತನ್ನ ಸೇನಾ ಸಿದ್ಧತೆಗಳನ್ನು ಚುರುಕುಗೊಳಿಸಿಕೊಳ್ಳುತ್ತಿದ್ದು, ಕಳೆದ ಭಾನುವಾರ ಮಾತನಾಡಿದ್ದ ತೈವಾನ್ ಅಧ್ಯಕ್ಷರಾದ ತ್ಸೈ ಇಂಗ್-ವೆನ್ ಚೀನಾಗೆ ಎಚ್ಚರಿಕೆ ನೀಡಿ, ಈ ದ್ವೀಪ ರಾಷ್ಟ್ರ ತನ್ನ ಜನರಿಗೆ ಸೇರಿದ್ದಾಗಿದ್ದು, ತೈವಾನ್ ಅಸ್ತಿತ್ವ ಯಾರನ್ನೂ ಪ್ರಚೋದನೆ ನೀಡುವುದಿಲ್ಲ ಎಂದು ಹೇಳಿದ್ದರು.
 
ತೈವಾನ್ ಇತ್ತೀಚಿನ ದಿನಗಳಲ್ಲಿ ಫೈಟರ್ ಜೆಟ್, ನೌಕಾ ಹಡಗುಗಳಿಂದ ಹಿಡಿದು, ಹಡಗು ನಿಗ್ರಹ ಮತ್ತು ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳು ಸೇರಿದಂತೆ ಪ್ರಮಾಣದ ಮಿಲಿಟರಿ ವೇದಿಕೆಗಳು ಮತ್ತು ವ್ಯವಸ್ಥೆಗಳತ್ತ ಹೆಚ್ಚು ಗಮನ ಹರಿಸುತ್ತಿದೆ ಎಂದು ಸಿಂಗಪೂರ್ ಪೋಸ್ಟ್ ವರದಿ ಪ್ರಕಟಿಸಿದೆ.

ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ತನ್ನ ಸೇನೆಗೆ ಯುದ್ಧದ ಸಿದ್ಧತೆಗಳ ಬಗ್ಗೆ ಗಮನ ಹರಿಸುವಂತೆ ಕರೆ ನೀಡಿದ್ದ ಬೆನ್ನಲ್ಲೇ ತೈವಾನ್ ಅಧ್ಯಕ್ಷರು ತಾವು ಷಿ ಪ್ರಸ್ತಾಪಿಸಿದ್ದ ಒಂದು ರಾಷ್ಟ್ರ ಎರಡು ವ್ಯವಸ್ಥೆ (ಚೀನಾ ಸಾರ್ವಭೌಮತ್ವದಡಿಯಲ್ಲೇ ತೈವಾನ್ ಗೆ ಸ್ವಾಯತ್ತತೆ) ವಿಷಯಕ್ಕೆ ಶರಣಾಗಿಲ್ಲ ಎಂದು ಹೇಳಿದ್ದು ತಮ್ಮ ಜೀವನದ ಗುರಿ ಈ ದ್ವೀಪ ರಾಷ್ಟ್ರವನ್ನು ತನ್ನ ಜನರಿಗೆ ಸೇರುವಂತೆ ಮುಂದುವರೆಸುವುದಾಗಿದೆ ಎಂದು ಹೇಳಿದ್ದರು. 

SCROLL FOR NEXT