ವಿದೇಶ

ರಾಸಾಯನ ವಿಜ್ಞಾನ ವಿಭಾಗದಲ್ಲಿ ಮೂವರಿಗೆ ನೊಬೆಲ್ ಪ್ರಶಸ್ತಿ

Srinivas Rao BV

ನವದೆಹಲಿ: ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ರಾಸಾಯನ ವಿಜ್ಞಾನ ವಿಭಾಗದಲ್ಲಿ ಮೂವರಿಗೆ ನೊಬೆಲ್ ಪ್ರಶಸ್ತಿ ನೀಡಿದೆ. 

ಕ್ಯಾರೊಲಿನ್ ಆರ್ ಬರ್ಟೊಝಿ, ಮಾರ್ಟೆನ್ ಮೆಲ್ಡಾಲ್ ಮತ್ತು ಕೆ ಬ್ಯಾರಿ ಶಾರ್ಪ್ಲೆಸ್ ರಾಸಾಯನ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿಗಳಾಗಿದ್ದು, ಕ್ಲಿಕ್ ಕೆಮಿಸ್ಟ್ರಿ ಹಾಗೂ ಬಯೋಆರ್ಥೋಗನಲ್ ಕೆಮಿಸ್ಟ್ರಿಯ ಅಭಿವೃದ್ಧಿಗಾಗಿ ಈ ಗೌರವಕ್ಕೆ ಭಾಜನರಾಗಿದ್ದಾರೆ. 

ಎರಡು ನೊಬೆಲ್ ಪ್ರಶಸ್ತಿಗಳನ್ನು ಪಡೆದ 5 ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬ್ಯಾರಿ ಶಾರ್ಪ್ಲೆಸ್ ಭಾಜನರಾಗಿದ್ದಾರೆ. ಜಾನ್ ಬಾರ್ಡೀನ್, ಮೇರಿ ಸ್ಕ್ಲೋಡೋವ್ಸ್ಕಾ ಕ್ಯೂರಿ, ಲಿನಸ್ ಪಾಲಿಂಗ್ ಮತ್ತು ಫ್ರೆಡೆರಿಕ್ ಸ್ಯಾಂಗರ್ ಈ ಹಿಂದೆ ಎರಡು ಬಾರಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು. ಶಾರ್ಪೆಲ್ಸ್ ಅವರಿಗೆ 2001 ರಲ್ಲಿ ಮತ್ತು 2022 ರಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಬಂದಿತ್ತು.
 

SCROLL FOR NEXT