ಜೋ ಬೈಡನ್ 
ವಿದೇಶ

ಅಪರಾಧ, ಭಯೋತ್ಪಾದಕ ದಾಳಿ ಭೀತಿ; ಭಾರತಕ್ಕೆ ಪ್ರಯಾಣಿಸುವಾಗ 'ಹೆಚ್ಚಿನ ಎಚ್ಚರಿಕೆ' ವಹಿಸಿ ಎಂದ ಅಮೆರಿಕ

‘ಅಪರಾಧ ಮತ್ತು ಭಯೋತ್ಪಾದನೆ’ದಾಳಿ ಭೀತಿ ಹಿನ್ನಲೆಯಲ್ಲಿ ಭಾರತಕ್ಕೆ ಪ್ರಯಾಣಿಸುವಾಗ ‘ಹೆಚ್ಚಿನ ಎಚ್ಚರಿಕೆ’ಯನ್ನು ವಹಿಸುವಂತೆ ಶುಕ್ರವಾರ ಅಮೆರಿಕ ತನ್ನ ನಾಗರಿಕರಿಗೆ ಸೂಚಿಸಿದ್ದು, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಯಾಣಿಸದಂತೆ ಸೂಚಿಸಿದೆ.

ವಾಷಿಂಗ್ಟನ್‌: ‘ಅಪರಾಧ ಮತ್ತು ಭಯೋತ್ಪಾದನೆ’ದಾಳಿ ಭೀತಿ ಹಿನ್ನಲೆಯಲ್ಲಿ ಭಾರತಕ್ಕೆ ಪ್ರಯಾಣಿಸುವಾಗ ‘ಹೆಚ್ಚಿನ ಎಚ್ಚರಿಕೆ’ಯನ್ನು ವಹಿಸುವಂತೆ ಶುಕ್ರವಾರ ಅಮೆರಿಕ ತನ್ನ ನಾಗರಿಕರಿಗೆ ಸೂಚಿಸಿದ್ದು, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಯಾಣಿಸದಂತೆ ಸೂಚಿಸಿದೆ.

ಶುಕ್ರವಾರ ಹೊರಡಿಸಲಾದ ಹೊಸ ಪ್ರಯಾಣ ಮಾರ್ಗದರ್ಶಿ ಸೂಚನೆಯಲ್ಲಿ, ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಭಾರತ ಪ್ರಯಾಣ ಸಲಹಾ ಮಟ್ಟವನ್ನು ಒಂದರಿಂದ 4ರ ಪ್ರಮಾಣದಲ್ಲಿ 2ಕ್ಕೆ ಇಳಿಸಿದೆ. ಈ ಪೈಕಿ ಎರಡನೇ ಮಟ್ಟ ಅತ್ಯಧಿಕವಾಗಿದೆ. ವಿದೇಶಾಂಗ ಇಲಾಖೆಯು ಪ್ರತ್ಯೇಕ ಸಲಹೆಯಲ್ಲಿ, ಒಂದು ದಿನದ ಹಿಂದೆ, ಪಾಕಿಸ್ತಾನವನ್ನು 3ನೇ ಹಂತದಲ್ಲಿ ಇರಿಸಿತ್ತು ಮತ್ತು ಭಯೋತ್ಪಾದನೆ ಮತ್ತು ಪಂಥೀಯ ಹಿಂಸಾಚಾರದ ಕಾರಣದಿಂದ ಅದರ ಪ್ರಕ್ಷುಬ್ಧ ಪ್ರಾಂತ್ಯಗಳ ಪ್ರಯಾಣವನ್ನು ಮರುಪರಿಶೀಲಿಸುವಂತೆ ಅದರ ನಾಗರಿಕರನ್ನು ಕೇಳಿದೆ.

"ಅಪರಾಧ ಮತ್ತು ಭಯೋತ್ಪಾದನೆಯಿಂದಾಗಿ ಭಾರತದಲ್ಲಿ ಹೆಚ್ಚಿನ ಎಚ್ಚರಿಕೆಯಿಂದಿರಿ. ಭಯೋತ್ಪಾದನೆ ಮತ್ತು ನಾಗರಿಕ ಅಶಾಂತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ (ಪೂರ್ವ ಲಡಾಖ್ ಪ್ರದೇಶ ಮತ್ತು ಅದರ ರಾಜಧಾನಿ, ಲೇಹ್ ಹೊರತುಪಡಿಸಿ)ಕ್ಕೆ ಪ್ರಯಾಣ ಮಾಡಬೇಡಿ.. ಎಂದು ಹೇಳಿದೆ. 

"ಭಾರತದಲ್ಲಿ ಅತ್ಯಾಚಾರವು ವೇಗವಾಗಿ ಬೆಳೆಯುತ್ತಿರುವ ಅಪರಾಧಗಳಲ್ಲಿ ಒಂದಾಗಿದೆ ಎಂದು ಭಾರತೀಯ ಅಧಿಕಾರಿಗಳು ವರದಿ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದಂತಹ ಹಿಂಸಾತ್ಮಕ ಅಪರಾಧಗಳು ಪ್ರವಾಸಿ ತಾಣಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಸಂಭವಿಸಿವೆ. ಪ್ರವಾಸಿ ಸ್ಥಳಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು/ಶಾಪಿಂಗ್ ಮಾಲ್‌ಗಳು ಮತ್ತು ಸರ್ಕಾರಿ ಸೌಲಭ್ಯಗಳನ್ನು ಗುರಿಯಾಗಿಟ್ಟುಕೊಂಡು ಭಯೋತ್ಪಾದಕರು ಕಡಿಮೆ ಅಥವಾ ಯಾವುದೇ ಎಚ್ಚರಿಕೆಯಿಲ್ಲದೆ ದಾಳಿ ಮಾಡಬಹುದು ಎಂದು ಸಲಹೆ ನೀಡಿದೆ.

"ಪೂರ್ವ ಮಹಾರಾಷ್ಟ್ರ ಮತ್ತು ಉತ್ತರ ತೆಲಂಗಾಣದಿಂದ ಪಶ್ಚಿಮ ಬಂಗಾಳದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ಅಮೆರಿಕ ನಾಗರಿಕರಿಗೆ ತುರ್ತು ಸೇವೆಗಳನ್ನು ಒದಗಿಸಲು ಅಮೆರಿಕ ಸರ್ಕಾರವು ಸೀಮಿತ ಸಾಮರ್ಥ್ಯವನ್ನು ಹೊಂದಿದೆ, ಏಕೆಂದರೆ ಅಮೆರಿಕ ಸರ್ಕಾರಿ ನೌಕರರು ಈ ಪ್ರದೇಶಗಳಿಗೆ ಪ್ರಯಾಣಿಸಲು ವಿಶೇಷ ಅಧಿಕಾರವನ್ನು ಪಡೆಯಬೇಕು ಎಂದು ಸಲಹೆ ಹೇಳಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT