ವಿದೇಶ

ಪಾಕಿಸ್ತಾನ ಅಪಾಯಕಾರಿ ದೇಶ ಎಂದ ಬೈಡನ್: ಅಮೆರಿಕ ರಾಯಭಾರಿಗೆ ಸಮನ್ಸ್ ಜಾರಿ!

Srinivasamurthy VN

ಇಸ್ಲಾಮಾಬಾದ್: ಪಾಕಿಸ್ತಾನ ಅಪಾಯಕಾರಿ ದೇಶ ಎಂದ ಅಮೆರಿಕ ಅಧ್ಯಕ್ಷ ಬೈಡನ್ ಹೇಳಿಕೆ ವಿಚಾರವಾಗಿ ಗರಂ ಆಗಿರುವ ಪಾಕಿಸ್ತಾನ ಸರ್ಕಾರ ಅಲ್ಲಿನ ಅಮೆರಿಕ ರಾಯಭಾರಿಗೆ ಸಮನ್ಸ್ ಜಾರಿ ಮಾಡಲಿದೆ ಎಂದು ಹೇಳಲಾಗಿದೆ.

ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, 'ದೇಶದ ಪರಮಾಣು ಸಾಮರ್ಥ್ಯದ ಕುರಿತು ಅಮೆರಿಕದ ಅಧ್ಯಕ್ಷ ಜೋ ಬಿಡನ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಅಧಿಕೃತ ಪ್ರತಿಭಟನೆಗಾಗಿ ಪಾಕಿಸ್ತಾನ ಸರ್ಕಾರವು ಯುಎಸ್ ರಾಯಭಾರಿ ಡೊನಾಲ್ಡ್ ಬ್ಲೋಮ್ ಅವರನ್ನು ಕರೆಸಿ ವಿವರಣೆ ಕೇಳಲಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಲಾವಲ್, "ಪಾಕಿಸ್ತಾನದ ಪರಮಾಣು ಆಸ್ತಿಗಳು "ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಐಎಇಎ (ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ) ಗೆ ಅನುಗುಣವಾಗಿ ಪ್ರತಿಯೊಂದು ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸುತ್ತವೆ. ಅಧ್ಯಕ್ಷ ಬೈಡೆನ್ ಅವರ ಹೇಳಿಕೆ ನನಗೆ ಆಶ್ಚರ್ಯವಾಗಿದೆ. ಇದು ನಿಖರವಾಗಿ ತಪ್ಪು ತಿಳುವಳಿಕೆಯಾಗಿದೆ ಎಂದು ನಾನು ನಂಬುತ್ತೇನೆ. ನಾವು ಅವರ ರಾಯಭಾರಿಯನ್ನು ಕರೆದು ಬೈಡೆನ್ ಹೇಳಿಕೆ ಕುರಿತು ತಮ್ಮ ಪ್ರತಿಕ್ರಿಯೆ ನೀಡುತ್ತೇವೆ, ಆದರೆ ಇದು ಅಧಿಕೃತ ಕಾರ್ಯಕ್ರಮ ಎಂದು ನಾನು ಭಾವಿಸುವುದಿಲ್ಲ..ಇದು ಸಂಸತ್ತಿನ ಕಾರ್ಯಕ್ರಮ ಅಥವಾ ಸಂದರ್ಶನ ಅಲ್ಲ.. ಹೀಗಾಗಿ ಹೇಳಿಕೆಗೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಬಿಡೆನ್, ಡೆಮಾಕ್ರಟಿಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಸ್ವಾಗತ ಕಾರ್ಯಕ್ರಮದಲ್ಲಿ, ಪಾಕಿಸ್ತಾನವು "ಯಾವುದೇ ಒಗ್ಗಟ್ಟು ಇಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು" ಹೊಂದಿರುವುದರಿಂದ ಪಾಕಿಸ್ತಾನವು "ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ" ಎಂದು ಹೇಳಿದ್ದರು. 

SCROLL FOR NEXT