ವಿದೇಶ

ಬೂಕರ್ ಪ್ರಶಸ್ತಿ ಗೆದ್ದ ಶ್ರೀಲಂಕಾ ಲೇಖಕ ಶೇಹನ್ ಕರುಣಾತಿಲಕ

Srinivas Rao BV

ಲಂಕಾ: ಶ್ರೀಲಂಕಾದ ಬರಹಗಾರ ಶೇಹನ್ ಕರುಣಾತಿಲಕ ಕಾದಂಬರಿಯ ವಿಭಾಗದಲ್ಲಿ ಬ್ರಿಟನ್ ನ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ ಎಂಬ ಕೃತಿಗೆ  ಶೇಹನ್ ಕರುಣಾತಿಲಕ ಅವರಿಗೆ ಬೂಕರ್ ಪ್ರಶಸ್ತಿ ಒಲಿದಿದ್ದು, ಇದು ದೇಶದ ಮತೀಯ ಕಲಹಗಳ ನಡುವೆ ಪತ್ರಕರ್ತನೋರ್ವನ ಹತ್ಯೆಯ ಕಥಾವಸ್ತುವನ್ನೊಳಗೊಂಡ ಕಾದಂಬರಿಯಾಗಿದೆ. 

ಸೆವೆನ್ ಮೂನ್ಸ್ ಬಗ್ಗೆ ನನ್ನ ವಿಶ್ವಾಸವಿಷ್ಟೇ, "ಭ್ರಷ್ಟಾಚಾರದ ಮುಖವನ್ನು ಅರ್ಥ ಮಾಡಿಕೊಂಡಿರುವ ಲಂಕಾದಲ್ಲಿ, ಜಾತಿ-ಆಮಿಷ, ಯೋಗ್ಯರಲ್ಲದ ಆಪ್ತರಿಗೆ ಅಧಿಕಾರ ನೀಡುವುದು ಎಂದಿಗೂ ಕೆಲಸ ಮಾಡಿಲ್ಲ, ಮಾಡುವುದಿಲ್ಲ ಎಂಬುದನ್ನು ಅರ್ಥ ಮಾಡಿಸುವುದಾಗಿದೆ ಎಂದು ಹೇಳಿದ್ದಾರೆ.

ಕರುಣಾತಿಲಕ ಬೂಕರ್ ಪ್ರಶಸ್ತಿಯನ್ನು ಪಡೆಯುತ್ತಿರುವ ಲಂಕಾದ ಎರಡನೇ ಲೇಖಕರಾಗಿದ್ದು, ಈ ಹಿಂದೆ 1992 ರಲ್ಲಿ  ಮೈಕೆಲ್ ಒಂಡಾಟ್ಜೆಗೆ ಬೂಕರ್ ಪ್ರಶಸ್ತಿ ಒಲಿದಿತ್ತು. ಬೂಕರ್ ಪ್ರಶಸ್ತಿ ವಿಜೇತರಿಗೆ 56,000 ಡಾಲರ್ ಬಹುಮಾನದ ಜೊತೆಗೆ ಪುಸ್ತಕ ಮಾರಾಟದಲ್ಲಿ ಹೆಚ್ಚಳ, ಸಾರ್ವಜನಿಕ ಪ್ರೊಫೈಲ್ ಉತ್ತಮಗೊಳ್ಳುವ ಅವಕಾಶವಿರಲಿದೆ. 

SCROLL FOR NEXT