ವಿದೇಶ

ಯುಕೆ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್‌ಮನ್ ರಾಜೀನಾಮೆ 

Nagaraja AB

ಲಂಡನ್: ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್‌ಮನ್ ಅವರು ಯುನೈಟೆಡ್ ಕಿಂಗ್‌ಡಂ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಲಂಡನ್‌ನಲ್ಲಿರುವ ಅವರ ಕಚೇರಿಯಿಂದ ಬುಧವಾರ ವರದಿಯಾಗಿದೆ.

ಗೋವಾ ಮೂಲದ ತಂದೆ ಮತ್ತು ತಮಿಳು ಮೂಲದ ತಾಯಿಯ ಮಗಳಾದ ಬ್ರಾವರ್ ಮನ್ , 43 ದಿನಗಳ ಹಿಂದೆ ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ಅಧಿಕಾರ ವಹಿಸಿಕೊಂಡಾಗ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಬುಧವಾರ ಟ್ರಸ್‌ ಜೊತೆಗೆ  ಮುಖಾಮುಖಿ ಸಭೆ ನಂತರ ಅವರು  ಗೃಹ ಕಾರ್ಯದರ್ಶಿ ಹುದ್ದೆ ತೊರೆದಿದ್ದಾರೆ. ಸರ್ಕಾರದ ನೀತಿಯಲ್ಲಿನ ಭಿನ್ನಾಭಿಪ್ರಾಯದಿಂದಾಗಿ ರಾಜೀನಾಮೆ ನೀಡಿರುವಂತೆ ಕಂಡುಬರುತ್ತಿಲ್ಲ.

ಕಳೆದ ಶುಕ್ರವಾರ ವಜಾಗೊಂಡ ಕ್ವಾಸಿ ಕ್ವಾರ್ಟೆಂಗ್ ಅವರ ಸ್ಥಾನಕ್ಕೆ ಬಂದ ನೂತನ ಹಣಕಾಸು ಮುಖ್ಯಸ್ಥ ಜೆರೆಮಿ ಹಂಟ್ ಹೊಸ ಮಾರುಕಟ್ಟೆಯ ಅವ್ಯವಸ್ಥೆಯನ್ನು ತಪ್ಪಿಸಲು ಕಳೆದ ತಿಂಗಳು ಘೋಷಿಸಲಾಗಿದ್ದ ತನ್ನ ಎಲ್ಲಾ ಸಾಲ-ಇಂಧನ ತೆರಿಗೆ ಕಡಿತಗಳನ್ನು ರದ್ದುಗೊಳಿಸಿದರು. ಈ ಕ್ರಮವು ಟ್ರಸ್‌ನ ಇಕ್ಕಟ್ಟಿನ ನಾಯಕತ್ವವನ್ನು ಮತ್ತಷ್ಟು ಬುಡಮೇಲು ಮಾಡುವ ನಿರೀಕ್ಷೆಯಿದೆ. 
 

SCROLL FOR NEXT