ವಿದೇಶ

ಇಂದು ಕಿಂಗ್ ಚಾರ್ಲ್ಸ್ ಭೇಟಿ ಬಳಿಕ ಬ್ರಿಟನ್ ನೂತನ ಪ್ರಧಾನಿಯಾಗಿ ರಿಷಿ ಸುನಕ್ ಅಧಿಕಾರ ಸ್ವೀಕಾರ

Lingaraj Badiger

ಲಂಡನ್: ಐತಿಹಾಸಿಕ ನಾಯಕತ್ವ ಹೋರಾಟದಲ್ಲಿ ಕನ್ಸರ್ವೇಟಿವ್ ಪಕ್ಷದ ಹೊಸ ನಾಯಕರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಕ್ ಅವರು ಮಂಗಳವಾರ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿ ಮಾಡಿದ ನಂತರ ಬ್ರಿಟನ್‌ನ ನೂತನ ಪ್ರಧಾನಿಯಾದಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

73 ವರ್ಷದ ಲಿಜ್ ಟ್ರಸ್ ಅವರು ಮಂಗಳವಾರ ಬೆಳಗ್ಗೆ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ತಮ್ಮ ಕೊನೆಯ ಸಂಪುಟ ಸಭೆ ನಡೆಸಲಿದ್ದು, ಬಳಿಕ ಕಿಂಗ್ ಚಾರ್ಲ್ಸ್ III ಅವರಿಗೆ ಅಧಿಕೃತವಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ನಂತರ 42 ವರ್ಷದ ಸುನಕ್ ಅವರು ಕಿಂಗ್ ಚಾರ್ಲ್ಸ್ ಭೇಟಿಗಾಗಿ ಅರಮನೆಗೆ ಆಗಮಿಸಲಿದ್ದು, ಅವರನ್ನು ಯುನೈಟೆಡ್ ಕಿಂಗ್‌ಡಮ್‌ನ ಹೊಸ ಪ್ರಧಾನಿಯಾಗಿ ಅಧಿಕೃತವಾಗಿ ನೇಮಕ ಮಾಡಲಿದ್ದಾರೆ.

ನಂತರ ರಿಷಿ ಸುನಕ್ ಅವರು 10 ಡೌನಿಂಗ್ ಸ್ಟ್ರೀಟ್‌ನ ಮೆಟ್ಟಿಲುಗಳ ಮೇಲೆ ಪ್ರಧಾನಿಯಾಗಿ ತಮ್ಮ ಮೊದಲ ಭಾಷಣ ಮಾಡಲಿದ್ದಾರೆ. ಈ ವೇಳೆ ಪತ್ನಿ ಅಕ್ಷತಾ ಮೂರ್ತಿ ಮತ್ತು ಪುತ್ರಿಯರಾದ ಕೃಷ್ಣ ಮತ್ತು ಅನುಷ್ಕಾ ಅವರು ಉಪಸ್ಥಿತರಿರುವ ಸಾಧ್ಯತೆ ಇದೆ.

"ಬ್ರಿಟನ್ ಒಂದು ಉತ್ತಮ ದೇಶವಾಗಿದೆ. ಆದರೆ ನಾವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಸೋಮವಾರ ನೂತನ ಪ್ರಧಾನಿಯಾಗಿ ಆಯ್ಕೆಯಾದ ನಂತರ ಸುನಕ್ ಹೇಳಿದ್ದರು.

SCROLL FOR NEXT