ವಿದೇಶ

ರಷ್ಯಾ-ಉಕ್ರೇನ್ ಸಂಘರ್ಷ: ಉಕ್ರೇನ್‌ನ ಬಖ್‌ಮುಟ್‌ನಲ್ಲಿ ಏಳು ನಾಗರಿಕರ ಹತ್ಯೆಯಾಗಿದೆ ಎಂದ ಗವರ್ನರ್

Ramyashree GN

ಕೀವ್: ರಷ್ಯಾದ ದಾಳಿಯಿಂದಾಗಿ ಪೂರ್ವ ಡೊನೆಟ್ಸ್ಕ್ ಪ್ರದೇಶದ ಉಕ್ರೇನ್ ನಗರದ ಬಖ್‌ಮುಟ್‌ನಲ್ಲಿ ಏಳು ನಾಗರಿಕರು ಮೃತಪಟ್ಟಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಮಂಗಳವಾರ ತಿಳಿಸಿದ್ದಾರೆ.

ಈ ಪ್ರದೇಶದ ಪ್ರತ್ಯೇಕ ಎರಡು ಸ್ಥಳಗಳಲ್ಲಿ ಈ ಹಿಂದೆ ಕೊಲ್ಲಲ್ಪಟ್ಟ ಮೂವರು ನಾಗರಿಕರ ಮೃತದೇಹಗಳು ಸಹ ಪತ್ತೆಯಾಗಿವೆ. ತಿಂಗಳಿಂದ ಈ ಪ್ರದೇಶ ರಷ್ಯಾದ ಸೈನ್ಯದೊಂದಿಗೆ ತೀವ್ರ ಹೋರಾಟದ ಕೇಂದ್ರವಾಗಿದೆ ಎಂದು ಗವರ್ನರ್ ಪಾವ್ಲೊ ಕಿರಿಲೆಂಕೊ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ, ತಾನು ವಶಪಡಿಸಿಕೊಂಡಿದ್ದ ಪ್ರದೇಶವಾದ ರಷ್ಯಾಗೆ ಸಂಪರ್ಕ ಕಲ್ಪಿಸುವ ಕ್ರಿಮಿಯಾದ ಬೃಹತ್ ಸೇತುವೆಯ ಮೇಲೆ ನಡೆದ ಸ್ಫೋಟವನ್ನು ಉಕ್ರೇನ್ ವಿಶೇಷ ಪಡೆಗಳ ಮಾಸ್ಟರ್‌ಮೈಂಡ್ ಭಯೋತ್ಪಾದನಾ ಕೃತ್ಯ ಎಂದು ಪುಟಿನ್ ಬಣ್ಣಿಸಿದ್ದರು. ಅದಾದ ಒಂದು ದಿನದ ನಂತರ ರಷ್ಯಾ ಉಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ.

ಫೆ.24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳುವಂತೆ ಆದೇಶಿಸಿದ್ದರು. ಅಂದಿನಿಂದ ಇಂದಿನವರೆಗೂ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಾ ಬಂದಿದೆ.

ಪ್ರಮುಖ ನಗರಗಳ ಮೇಲೆ ನಿರಂತರವಾದ ದಾಳಿಯಿಂದಾಗಿ ವಸತಿ ಪ್ರದೇಶಗಳು ಮತ್ತು ನಿರ್ಣಾಯಕ ಮೂಲಸೌಕರ್ಯ ಸೌಲಭ್ಯಗಳು ಹಾನಿಗೊಳಲಾಗಿವೆ. ಇತ್ತೀಚಿನ ವಾರಗಳಲ್ಲಿ ರಷ್ಯಾದ ಪಡೆಯನ್ನು ಉಕ್ರೇನ್ ಪಡೆಗಳು ಸಮರ್ಥವಾಗಿ ಎದುರಿಸಿದ್ದು, ಇದೀಗ ಮತ್ತೆ ಯುದ್ಧ ಉಲ್ಬಣವಾಗಿದೆ.

SCROLL FOR NEXT