ಟೆಹ್ರಾನ್: ಹಲವು ದಶಕಗಳಿಂದ ಸ್ನಾನ ಮಾಡದಿದ್ದಕ್ಕಾಗಿ "ವಿಶ್ವದ ಅತ್ಯಂತ ಕೊಳಕು ಮನುಷ್ಯ" ಎಂಬ ಅಡ್ಡಹೆಸರು ಹೊಂದಿದ್ದ ಇರಾನ್ ನ 94 ವರ್ಷದ ಅಮೌ ಹಾಜಿ ಅವರು ನಿಧನರಾಗಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸ್ನಾನವನ್ನೇ ಮಾಡದೆ, ಒಂಟಿಯಾಗಿದ್ದ ಅಮೌ ಹಾಜಿ ಅವರು ದಕ್ಷಿಣ ಪ್ರಾಂತ್ಯದ ಫಾರ್ಸ್‌ನ ದೇಜ್ಗಾ ಗ್ರಾಮದಲ್ಲಿ ಭಾನುವಾರ ನಿಧನರಾಗಿದ್ದಾರೆಎಂದು ಐಆರ್‌ಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಾಜಿ ಅವರು ಸ್ನಾನ ಮಾಡಿದರೆ "ಅನಾರೋಗ್ಯಕ್ಕೆ ತುತ್ತಾಗಬಹುದು" ಎಂಬ ಭಯದಿಂದ ಸ್ನಾನ ಮಾಡುವುದನ್ನು ಬಿಟ್ಟಿದ್ದರು ಎಂದು ಸ್ಥಳೀಯ ಅಧಿಕಾರಿಯ ಹೇಳಿಕೆ ಉಲ್ಲೇಖಿಸಿ ಸಂಸ್ಥೆ ವರದಿ ಮಾಡಿದೆ.
ಇದನ್ನು ಓದಿ: ಹಿಜಾಬ್ ಧರಿಸದೆ ಸ್ಪರ್ಧಿಸಿದ ಅಥ್ಲೀಟ್ ಎಲ್ನಾಜ್ ರೆಕಾಬಿಗೆ ಇರಾನ್ನಲ್ಲಿ ಭವ್ಯ ಸ್ವಾಗತ, ವಿಡಿಯೋ ವೈರಲ್!
ಆದರೆ "ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ, ಗ್ರಾಮಸ್ಥರು ಆತನಿಗೆ ಸ್ನಾನ ಮಾಡಿಸಲು ಬಲವಂತವಾಗಿ ಸ್ನಾನಗೃಹಕ್ಕೆ ಕರೆದೊಯ್ದರು" ಎಂದು ಐಆರ್‌ಎನ್‌ಎ ವರದಿ ಮಾಡಿದೆ.
ಇರಾನಿನ ಮಾಧ್ಯಮಗಳ ಪ್ರಕಾರ 2013 ರಲ್ಲಿ ಅವರ ಜೀವನದ ಬಗ್ಗೆ "ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ" ಎಂಬ ಕಿರು ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ.