ಕಾರು ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ 
ವಿದೇಶ

ಸೊಮಾಲಿಯಾದಲ್ಲಿ ಭೀಕರ ಕಾರು ಬಾಂಬ್ ಸ್ಫೋಟ: ಕನಿಷ್ಠ 100 ಸಾವು, 300 ಜನರಿಗೆ ಗಾಯ

ಸೊಮಾಲಿಯಾದ ರಾಜಧಾನಿಯ ಜನನಿಬಿಡ ಜಂಕ್ಷನ್‌ನಲ್ಲಿ ಶನಿವಾರ ನಡೆದ ಎರಡು ಕಾರು ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 100 ಜನರು ಮೃತಪಟ್ಟಿದ್ದಾರೆ. ಭೀಕರ ದಾಳಿಯಿಂದಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೊಮಾಲಿಯಾದ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ತಿಳಿಸಿದ್ದಾರೆ.

ಮೊಗದಿಶು: ಸೊಮಾಲಿಯಾದ ರಾಜಧಾನಿಯ ಜನನಿಬಿಡ ಜಂಕ್ಷನ್‌ನಲ್ಲಿ ಶನಿವಾರ ನಡೆದ ಎರಡು ಕಾರು ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 100 ಜನರು ಮೃತಪಟ್ಟಿದ್ದಾರೆ. ಭೀಕರ ದಾಳಿಯಿಂದಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೊಮಾಲಿಯಾದ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ತಿಳಿಸಿದ್ದಾರೆ.

ಐದು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಟ್ರಕ್ ಬಾಂಬ್ ಸ್ಫೋಟದಲ್ಲಿ 500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಆದಾದ ಬಳಿಕ ನಡೆದ ಭೀಕರ ದಾಳಿ ಇದಾಗಿದೆ.

'ಸ್ಫೋಟಗಳಿಂದಾಗಿ ಸ್ಥಳದಲ್ಲಿ ಸುಮಾರು 300 ಜನರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ದೇಶದ ಹೊರಗೆ ಕಳುಹಿಸಲು ಸಾಧ್ಯವಿಲ್ಲದ ಕಾರಣ ನಮ್ಮ ಅಂತರರಾಷ್ಟ್ರೀಯ ಪಾಲುದಾರರು ಮತ್ತು ಪ್ರಪಂಚದಾದ್ಯಂತ ಇರುವ ಮುಸ್ಲಿಮರು ಅವರ ವೈದ್ಯರನ್ನು ಇಲ್ಲಿಗೆ ಕಳುಹಿಸಲು ನಾವು ಕೇಳುತ್ತೇವೆ' ಎಂದು ಅವರು ಹೇಳಿದರು.

ಅಲ್-ಖೈದಾ-ಸಂಯೋಜಿತ ಅಲ್-ಶಬಾಬ್ ಉಗ್ರಗಾಮಿ ಗುಂಪು, ಆಗಾಗ್ಗೆ ರಾಜಧಾನಿಯನ್ನು ಗುರಿಯಾಗಿಸಿಕೊಳ್ಳತ್ತಿದೆ ಮತ್ತು ದೇಶದ ಹೆಚ್ಚಿನ ಭಾಗಗಳನ್ನು ನಿಯಂತ್ರಿಸುತ್ತಿದೆ. ಇದು ಶಿಕ್ಷಣ ಸಚಿವಾಲಯವನ್ನು ಗುರಿಯಾಗಿಸಿದೆ ಎಂದು ಹೇಳುತ್ತದೆ. ಸಚಿವಾಲಯವು ಮುಸ್ಲಿಮೇತರ ದೇಶಗಳಿಂದ ಬೆಂಬಲವನ್ನು ಪಡೆಯುವ "ಶತ್ರು ನೆಲೆ" ಮತ್ತು 'ಸೊಮಾಲಿ ಮಕ್ಕಳನ್ನು ಇಸ್ಲಾಮಿಕ್ ನಂಬಿಕೆಯಿಂದ ತೆಗೆದುಹಾಕಲು ಬದ್ಧವಾಗಿದೆ ಎಂದು ಅದು ಹೇಳಿಕೊಂಡಿದೆ.

2017ರ ಸ್ಫೋಟದಂತೆ ಹೆಚ್ಚಿನ ಸಂಖ್ಯೆಯ ನಾಗರಿಕರು ಕೊಲ್ಲಲ್ಪಟ್ಟಾಗ ಈ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಳ್ಳುವುದಿಲ್ಲ. ಆದರೆ, ತನ್ನ ಹಣಕಾಸಿನ ಜಾಲವನ್ನು ಮುಚ್ಚುವ ಗುರಿಯನ್ನು ಹೊಂದಿರುವ ಸರ್ಕಾರದ ಉನ್ನತ ಮಟ್ಟದ ಹೊಸ ಆಕ್ರಮಣದಿಂದ ಕೋಪಗೊಂಡಿದೆ.

ಈ ವರ್ಷ ಚುನಾಯಿತರಾದ ಸೊಮಾಲಿಯಾ ಅಧ್ಯಕ್ಷರು, ದೇಶವು ಅಲ್-ಶಬಾಬ್‌ನೊಂದಿಗೆ ಯುದ್ಧವನ್ನು ಮಾಡುತ್ತಿದೆ ಮತ್ತು ನಾವು ಗೆಲ್ಲುತ್ತಿದ್ದೇವೆ ಎಂದು ಹೇಳಿದರು.

ಹಿಂಸಾತ್ಮಕ ಉಗ್ರವಾದವನ್ನು ಮತ್ತು ವಿಶೇಷವಾಗಿ ಅಲ್-ಶಬಾಬ್ ಸಂಘಟನೆಯನ್ನು ಎದುರಿಸಲು ಅಗತ್ಯವಿರುವ ಕ್ರಮಗಳ ಕುರಿತು ಚರ್ಚಿಸಲು ಅಧ್ಯಕ್ಷರು, ಪ್ರಧಾನ ಮಂತ್ರಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆ ನಡೆಸುತ್ತಿದ್ದ ದಿನದಂದೇ ಮೊಗಾದಿಶುನಲ್ಲಿ ದಾಳಿ ಸಂಭವಿಸಿದೆ.

ದಶಕಗಳ ಸಂಘರ್ಷದ ನಂತರ ವಿಶ್ವದ ದುರ್ಬಲ ಆರೋಗ್ಯ ವ್ಯವಸ್ಥೆಗಳಲ್ಲಿ ಒಂದಾಗಿರುವ ಸೊಮಾಲಿಯಾದಲ್ಲಿ ಈ ದಾಳಿಯು ಭಯವನ್ನು ಉಂಟುಮಾಡಿದೆ. ಸ್ಫೋಟದ ನಂತರ ಆಸ್ಪತ್ರೆಗಳಲ್ಲಿ ಮತ್ತು ಇತರೆಡೆಗಳಲ್ಲಿ ಸಂಬಂಧಿಕರು ಪ್ರೀತಿಪಾತ್ರರನ್ನು ಹುಡುಕುತ್ತಿದ್ದರು.

ಹಲೀಮಾ ದುವಾನೆ ತನ್ನ ಚಿಕ್ಕಪ್ಪ ಅಬ್ದುಲ್ಲಾಹಿ ಜಾಮಾಗಾಗಿ ಹುಡುಕುತ್ತಿದ್ದಳು. 'ಅವರು ಸತ್ತಿದ್ದಾರೆಯೇ ಅಥವಾ ಜೀವಂತವಾಗಿದ್ದಾರೆಯೇ ಎಂದು ನಮಗೆ ತಿಳಿದಿಲ್ಲ. ಆದರೆ, ಕೊನೆಯ ಬಾರಿಗೆ ನಾವು ಮಾತನಾಡಿದಾಗ ಅವರು ಇಲ್ಲಿಯೇ ಇದ್ದರು' ಎಂದು ಅಳುತ್ತಾ ಹೇಳಿದರು.

ಸಾವುಗಳ ಕಾರಣದಿಂದಾಗಿ ನಾನು ನೆಲದಲ್ಲಿರುವ ಶವಗಳನ್ನು ಎಣಿಸಲು ಸಾಧ್ಯವಾಗಲಿಲ್ಲ. ಮೊದಲ ಸ್ಫೋಟವು ಶಿಕ್ಷಣ ಸಚಿವಾಲಯದ ಸುತ್ತಳತೆಯ ಗೋಡೆಗೆ ಅಪ್ಪಳಿಸಿತು, ಅಲ್ಲಿ ಬೀದಿ ವ್ಯಾಪಾರಿಗಳು ಮತ್ತು ಹಣ ಬದಲಾಯಿಸುವವರು ಇದ್ದರು ಎಂದು ಪ್ರತ್ಯಕ್ಷದರ್ಶಿ ಅಬ್ದಿರಾಝಕ್ ಹಸನ್ ಹೇಳಿದರು.

ಘಟನಾ ಸ್ಥಳದಲ್ಲಿದ್ದ ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರೊಬ್ಬರು, ಊಟದ ಸಮಯದಲ್ಲಿ ಜನಜಂಗುಳಿಯಿಂದ ತುಂಬಿದ್ದ ರೆಸ್ಟೋರೆಂಟ್‌ನ ಮುಂದೆ ಎರಡನೇ ಸ್ಫೋಟ ಸಂಭವಿಸಿದೆ.

ಸ್ಫೋಟದಿಂದಾಗಿ ಅನೇಕ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳ ಪ್ರದೇಶದಲ್ಲಿ ನಿಂತಿದ್ದ ಆಟೋಗಳು ಮತ್ತು ಇತರ ವಾಹನಗಳಿಗೆ ಹಾನಿಯುಂಟುಮಾಡಿದವು ಎಂದು ಹೇಳಿದರು.

ಸ್ಫೋಟಕಗಳನ್ನು ತುಂಬಿದ ವಾಹನಗಳು ಮತ್ತೆ ಮೊಗಾದಿಶುದಲ್ಲಿನ ಹೈ ಪ್ರೊಫೈಲ್ ಸ್ಥಳಕ್ಕೆ ಹೇಗೆ ಬಂದವು ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT