ವಿದೇಶ

ಪಾಕ್‌ನಲ್ಲಿ ಕಂಡು ಕೇಳರಿಯದ ಪ್ರವಾಹ: ಕಳವಳ ವ್ಯಕ್ತಪಡಿಸಿದ ಪಿಎಂ  ಮೋದಿಗೆ ಪ್ರಧಾನಿ ಶೆಹಬಾಜ್ ಷರೀಫ್ ಧನ್ಯವಾದ!

Vishwanath S

ಇಸ್ಲಾಮಾಬಾದ್: ಭೀಕರ ಪ್ರವಾಹದಿಂದ ಉಂಟಾದ ಮಾನವ ಮತ್ತು ವಸ್ತು ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಧನ್ಯವಾದ ಸಲ್ಲಿಸಿದ್ದು, ತಮ್ಮ ದೇಶವು ನೈಸರ್ಗಿಕ ವಿಕೋಪದ ದುಷ್ಪರಿಣಾಮಗಳನ್ನು ಎದುರಿಸಲಿದೆ ಎಂದು ಹೇಳಿದ್ದಾರೆ.

ಮಾನ್ಸೂನ್ ಮಳೆಯಿಂದ ಉಂಟಾದ ಪ್ರವಾಹದಿಂದ ಪಾಕಿಸ್ತಾನದಾದ್ಯಂತ ವ್ಯಾಪಕ ಹಾನಿಯುಂಟಾಗಿದೆ. 1,100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ದೇಶದ ಜನಸಂಖ್ಯೆಯ ಏಳನೇ ಒಂದು ಭಾಗದಷ್ಟು ಜನರನ್ನು ಸ್ಥಳಾಂತರಿಸಲಾಗಿದೆ.

'ಪ್ರವಾಹದಿಂದ ಉಂಟಾದ ಮಾನವ ಮತ್ತು ವಸ್ತು ನಷ್ಟದ ಬಗ್ಗೆ ಸಂತಾಪ ಸೂಚಿಸಿದ್ದಕ್ಕಾಗಿ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪಾಕಿಸ್ತಾನದ ಜನರು ದೇವರ ಕೃಪೆಯಿಂದ ನೈಸರ್ಗಿಕ ವಿಕೋಪದ ದುಷ್ಪರಿಣಾಮಗಳನ್ನು ನಿವಾರಿಸಿಕೊಳ್ಳುತ್ತಾರೆ ಮತ್ತು ಜೀವನ ಮತ್ತು ಸಮುದಾಯಗಳನ್ನು ಪುನರ್ನಿರ್ಮಿಸಿಕೊಳ್ಳುತ್ತಾರೆ' ಎಂದು ಷರೀಫ್ ಟ್ವೀಟ್ ಮೂಲಕ ಹೇಳಿದರು.

ಪ್ರಧಾನಿ ಮೋದಿ ಸೋಮವಾರ ಪಾಕಿಸ್ತಾನದಲ್ಲಿ ಪ್ರವಾಹದಿಂದ ಉಂಟಾದ ವಿನಾಶವನ್ನು ನೋಡಿ ದುಃಖಿತನಾಗಿದ್ದೇನೆ ಮತ್ತು ಶೀಘ್ರದಲ್ಲೇ ಸಹಜ ಸ್ಥಿತಿಯ ಮರುಸ್ಥಾಪನೆಯಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಪ್ರವಾಹದಿಂದ ಉಂಟಾದ ವಿನಾಶವನ್ನು ನೋಡಿ ದುಃಖವಾಗಿದೆ. ಸಂತ್ರಸ್ತರ ಕುಟುಂಬಗಳು, ಗಾಯಾಳುಗಳು ಮತ್ತು ಈ ನೈಸರ್ಗಿಕ ವಿಕೋಪ ಸಂತ್ರಸ್ತರ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಮತ್ತು ಶೀಘ್ರವಾಗಿ ಸಹಜ ಸ್ಥಿತಿಗೆ ಮರಳುವ ಭರವಸೆಯನ್ನು ನೀಡುತ್ತೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

SCROLL FOR NEXT