ವಿದೇಶ

200 ದಿನಗಳ ಯುದ್ಧ: ರಷ್ಯಾ ವಿರುದ್ಧ ಮತ್ತೆ ತಿರುಗಿಬಿದ್ದ ಉಕ್ರೇನ್

Srinivas Rao BV

ಉಕ್ರೇನ್: ರಷ್ಯಾ-ಉಕ್ರೇನ್ ಯುದ್ಧ 200 ದಿನ ಕಳೆದರೂ ಮುಂದುವರೆದಿದ್ದು, ಉಕ್ರೇನ್ ಪ್ರಬಲ ಪ್ರತಿದಾಳಿಗೆ ಮುಂದಾಗಿದೆ. 

ದೀರ್ಘಾವಧಿಯಿಂದ ನಿರೀಕ್ಷೆಯಲ್ಲಿದ್ದ ಪ್ರತಿದಾಳಿಯಲ್ಲಿ ಉಕ್ರೇನ್ ದಕ್ಷಿಣ ಮತ್ತು ಪೂರ್ವದ ವಿಶಾಲ ಪ್ರದೇಶಗಳನ್ನು ಮತ್ತೆ ಹಿಡಿತಕ್ಕೆ ತೆಗೆದುಕೊಂಡಿದ್ದು, ರಷ್ಯಾ ತೀವ್ರ ಹಿನ್ನೆಡೆ ಎದುರಿಸಿದೆ. 

ಆಗಸ್ಟ್ ನ ತಿಂಗಳಾಂತ್ಯಕ್ಕೆ ಪ್ರತಿದಾಳಿಯನ್ನು ಉಕ್ರೇನ್ ಪ್ರಾರಂಭಿಸಿದ್ದು, ಖೆರ್ಸನ್ ಪ್ರದೇಶದ ದಕ್ಷಿಣ ಪ್ರಾಂತ್ಯದಲ್ಲಿ ಉಕ್ರೇನ್ ತನ್ನ ಪ್ರತಿದಾಳಿಯನ್ನು ಕೇಂದ್ರೀಕರಿಸಿದೆ. ಈ ಪ್ರದೇಶದಲ್ಲಿ ಯುದ್ಧದ ಪ್ರಾರಂಭದಲ್ಲಿ ರಷ್ಯಾ ಹಿಡಿತ ಸಾಧಿಸಿತ್ತು. 

ದಕ್ಷಿಣ ಪ್ರದೇಶಕ್ಕೆ ರಷ್ಯಾ ಸೇನೆಯ ಸ್ಥಳಾಂತರವನ್ನೇ ಬಂಡವಾಳವಾಗಿಸಿಕೊಂಡ ಉಕ್ರೇನ್ ಸೇನೆ ಯುದ್ಧದ ಹಾದಿಯನ್ನು ಬದಲಿಸತೊಡಗಿದೆ ಎಂದು ಕೀವ್ ಮೂಲದ ಚಿಂತಕರ ಚಾವಡಿಯಾಗಿರುವ ರಝುಮ್ಕೋವ್ ಕೇಂದ್ರದ ಮಿಲಿಟರಿ ತಜ್ಞ ಮೈಕೋಲಾ ಸನ್ಹುರೊವ್ಸ್ಕಿ ಹೇಳಿದ್ದಾರೆ.

SCROLL FOR NEXT