ಸಂಗ್ರಹ ಚಿತ್ರ 
ವಿದೇಶ

NATO ಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಅಫ್ಘಾನಿಸ್ತಾನ ಕೈಬಿಟ್ಟ ಅಮೆರಿಕ!

ಮಹತ್ವದ ಬೆಳವಣಿಗೆಯಲ್ಲಿ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರಕ್ಕೆ ಶಾಕ್ ನೀಡಿರುವ ಅಮೆರಿಕ ಸರ್ಕಾರ, NATOಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಅಫ್ಘಾನಿಸ್ತಾನವನ್ನು ಕೈ ಬಿಟ್ಟಿದೆ.

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರಕ್ಕೆ ಶಾಕ್ ನೀಡಿರುವ ಅಮೆರಿಕ ಸರ್ಕಾರ, NATOಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಅಫ್ಘಾನಿಸ್ತಾನವನ್ನು ಕೈ ಬಿಟ್ಟಿದೆ.

ಕಾಬೂಲ್‌ನಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ಒಂದು ವರ್ಷದ ನಂತರ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಫ್ಘಾನಿಸ್ತಾನದ ಪ್ರಮುಖ NATO ಅಲ್ಲದ ಮಿತ್ರರಾಷ್ಟ್ರ ಎಂಬ ಸ್ಥಾನವನ್ನು ಕೊನೆಗೊಳಿಸಿದ್ದಾರೆ.

2012 ರಲ್ಲಿ, ಅಮೆರಿಕ ಅಫ್ಘಾನಿಸ್ತಾನವನ್ನು ಪ್ರಮುಖ NATO ಅಲ್ಲದ (MNNA) ಮಿತ್ರ ಎಂದು ಹೆಸರಿಸಿತ್ತು. ಇದು ರಕ್ಷಣಾ ಮತ್ತು ಆರ್ಥಿಕ ಸಂಬಂಧವನ್ನು ಕಾಪಾಡಿಕೊಳ್ಳಲು ಉಭಯ ದೇಶಗಳಿಗೆ ಮಾರ್ಗವನ್ನು ಸೃಷ್ಟಿಸಿತು. ಈ ಸ್ಥಾನವು ಅಫ್ಘಾನಿಸ್ತಾನಕ್ಕೆ ರಕ್ಷಣೆ ಮತ್ತು ಭದ್ರತೆ-ಸಂಬಂಧಿತ ನೆರವು ಮತ್ತು ಸಲಕರಣೆಗಳ ವಿಷಯದಲ್ಲಿ ಹಲವಾರು ಸೌಲಭ್ಯಗಳು ಮತ್ತು ರಿಯಾಯಿತಿಗಳನ್ನು ನೀಡಲು ನೆರವಾಗಿತ್ತು.

"1961ರ ವಿದೇಶಿ ಸಹಾಯ ಕಾಯಿದೆಯ ಸೆಕ್ಷನ್ 517 ಸೇರಿದಂತೆ, ಅಮೇರಿಕ ಸಂವಿಧಾನ ಮತ್ತು ಕಾನೂನುಗಳಿಂದ ನನಗಿರುವ ಅಧ್ಯಕ್ಷರ ಅಧಿಕಾರದ ಮೂಲಕ... ನಾನು ಅಫ್ಘಾನಿಸ್ತಾನವನ್ನು ಪ್ರಮುಖ NATO ಅಲ್ಲದ ಮಿತ್ರ ರಾಷ್ಟ್ರ ಸ್ಥಾನಮಾನವನ್ನು ಈ ಮೂಲಕ ಕೊನೆಗೊಳಿಸುತ್ತೇನೆ ಎಂದು ಬೈಡನ್ ಹೇಳಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್‌ ಮಾಹಿತಿ ನೀಡಿದ್ದಾರೆ.

non-NATO allyಯನ್ನು ಮೊದಲ ಬಾರಿಗೆ 1987 ರಲ್ಲಿ ರಚಿಸಲಾಯಿತು. ಅಂದಿನಿಂದ ಇಲ್ಲಿವಯವರೆಗೂ ಈ ಪಟ್ಟಿಯಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬಹ್ರೇನ್, ಬ್ರೆಜಿಲ್, ಕೊಲಂಬಿಯಾ, ಈಜಿಪ್ಟ್, ಇಸ್ರೇಲ್, ಜಪಾನ್, ಜೋರ್ಡಾನ್, ಕುವೈತ್, ಮೊರಾಕೊ, ನ್ಯೂಜಿಲೆಂಡ್, ಪಾಕಿಸ್ತಾನ, ಫಿಲಿಪೈನ್ಸ್, ಕತಾರ್, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಟುನೀಶಿಯಾ ಸೇರಿದಂತೆ ಒಟ್ಟು 19 ರಾಷ್ಟ್ರಗಳಿದ್ದವು. ಇದೀಗ ಈ ಪಟ್ಟಿಯಿಂದ ಆಫ್ಘಾನಿಸ್ತಾನವನ್ನು ಕೈ ಬಿಡಲಾಗಿತ್ತು ಇದರೊಂದಿಗೆ ಈ ಪಟ್ಟಿಯಲ್ಲಿನ ರಾಷ್ಟ್ರಗಳ ಸಂಖ್ಯೆ 18ಕ್ಕೆ ಕುಸಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT