ವಿದೇಶ

ದುಬೈ: ವಸತಿ ಸಂಕೀರ್ಣದಲ್ಲಿ ಭೀಕರ ಅಗ್ನಿ ಅವಘಡ; 4 ಮಂದಿ ಭಾರತೀಯರು ಸೇರಿ 16 ಮಂದಿ ಸಾವು

Srinivasamurthy VN

ಅಬುದಾಬಿ: ದುಬೈನ ವಸತಿ ಸಂಕೀರ್ಣ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 4 ಮಂದಿ ಭಾರತೀಯರು ಸೇರಿದಂತೆ 16 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ದುಬೈನ ಹಳೆಯ ಪ್ರದೇಶವಾದ ಅಲ್ ರಾಸ್‌ನಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿ ಈ ದುರ್ಘಟನೆಯಲ್ಲಿ ಭಾರತದ ಕೇರಳ ಮೂಲದ ದಂಪತಿಗಳು ಸೇರಿದಂತೆ ಕನಿಷ್ಠ ನಾಲ್ವರು ಭಾರತೀಯರು ಸೇರಿ 16 ಜನರು ಸಾವನ್ನಪ್ಪಿದ್ದಾರೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

ಕಟ್ಟಡದಲ್ಲಿ ವಾಸಿಸುತ್ತಿದ್ದ ಜನರ ಸ್ಥಳಾಂತರ
ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಇತರ ಪ್ರದೇಶಗಳಿಗೆ ವ್ಯಾಪಿಸಿದೆ. ದುಬೈ ಸಿವಿಲ್ ಡಿಫೆನ್ಸ್ ಪ್ರಧಾನ ಕಚೇರಿಯ ತಂಡವು ಬೆಂಕಿಯ ಸ್ಥಳಕ್ಕೆ ಆಗಮಿಸಿ ಕಟ್ಟಡದ ನಿವಾಸಿಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿತು. ಪೋರ್ಟ್ ಸೈದ್ ಅಗ್ನಿಶಾಮಕ ಠಾಣೆ ಮತ್ತು ಹಮ್ರಿಯಾ ಅಗ್ನಿಶಾಮಕ ಠಾಣೆಯಿಂದಲೂ ತಂಡಗಳನ್ನು ಕರೆದು ಕಾರ್ಯಾಚರಣೆ ನಡೆಸಲಾಯಿತು. ಬಳಿಕ ಮಧ್ಯಾಹ್ನ 2:42ಕ್ಕೆ (ಸ್ಥಳೀಯ ಕಾಲಮಾನ) ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ವರದಿ ತಿಳಿಸಿದೆ. 

ಮೃತ ನಾಲ್ಕು ಭಾರತೀಯರ ಗುರುತು ಪತ್ತೆ
ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ದಂಪತಿಗಳು ಮತ್ತು ತಮಿಳುನಾಡಿನ ಇಬ್ಬರು ಪುರುಷರು, 3 ಪಾಕಿಸ್ತಾನಿ ಸೋದರಸಂಬಂಧಿಗಳು ಮತ್ತು ನೈಜೀರಿಯಾದ ಮಹಿಳೆ ಸೇರಿದಂತೆ ಅಗ್ನಿ ಅವಘಡದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. 

SCROLL FOR NEXT