ವಿದೇಶ

ಮೆಕ್ಸಿಕೊ: ಬೆಟ್ಟದಿಂದ ಕಂದಕಕ್ಕೆ ಉರುಳಿದ ಬಸ್; ಆರು ಮಂದಿ ಭಾರತೀಯರು ಸೇರಿದಂತೆ 17 ಪ್ರಯಾಣಿಕರ ಸಾವು

Shilpa D

ಮೆಕ್ಸಿಕೊ: ಗುರುವಾರ ಮುಂಜಾನೆ ಮೆಕ್ಸಿಕೊದ ಪೆಸಿಫಿಕ್ ಕರಾವಳಿ ರಾಜ್ಯವಾದ ನಯರಿತ್‌ನಲ್ಲಿ ಬಸ್‌ ಒಂದು ಹೆದ್ದಾರಿ ಬಿಟ್ಟು ಕಡಿದಾದ ಬೆಟ್ಟದಿಂದ ಉರುಳಿ ಬಿದ್ದ ಪರಿಣಾಮ ಕನಿಷ್ಠ 17 ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರು ಮಂದಿ ಭಾರತೀಯರು ಸೇರಿದಂತೆ 40 ಮಂದಿ ಪ್ರಯಾಣಿಸುತ್ತಿದ್ದರು, ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದಾರೆ.  ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಮೆಕ್ಸಿಕೊದ ನಯಾರಿತ್ ರಾಜ್ಯದಲ್ಲಿ ಈ ದುರ್ಘಟನೆ ನಡೆದಿದ್ದು, ಪರಿಹಾರ ಕಾರ್ಯಾಚರಣೆ ತೀರಾ ಕಷ್ಟಕರವಾಗಿದೆ ಎಂದು ಭದ್ರತಾ ಮತ್ತು ನಾಗರಿಕ ಸುರಕ್ಷಾ ಕಾರ್ಯದರ್ಶಿ ಜಾರ್ಜ್ ಬೆನಿಟೊ ರಾಡ್ರಿಗಸ್ ಹೇಳಿದ್ದಾರೆ. 14 ಮಂದಿ ಮಕ್ಕಳು ಹಾಗೂ ಮೂವರು ದುರಂತದಲ್ಲಿ ಮೃತಪಟ್ಟಿದ್ದು, ತಿಜುನಾ ನಗರಕ್ಕೆ ಹೊರಟಿದ್ದ ಬಸ್ ರಸ್ತೆಯಿಂದಾಚೆ ಚಲಿಸಿ ಕಂದಕಕ್ಕೆ ಉರುಳಲು ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ನಯಾರಿತ್ ನಾಗರಿಕ ಸುರಕ್ಷೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಘಟನೆಯ ಫೋಟೊ ಶೇರ್ ಮಾಡಿದ್ದು, ಹೆದ್ದಾರಿಯಲ್ಲಿ ಸಾಲು ಸಾಲಾಗಿ ಆ್ಯಂಬುಲೆನ್ಸ್ ನಿಂತಿರುವುದು ಮತ್ತು ಸಮವಸ್ತ್ರ ಧರಿಸಿದ ಅಧಿಕಾರಿಗಳು ಕಂದಕದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿರುವುದು ಕಾಣಿಸುತ್ತಿದೆ. ಕಂದಕದಿಂದ ಪ್ರಯಾಣಿಕರನ್ನು ಮೇಲೆತ್ತುವ ಪ್ರಯತ್ನ ನಡೆದಿದೆ. ಬಸ್, ಮೆಕ್ಸಿಕೊ ನಗರದಿಂದ ಗಡಿ ನಗರವಾದ ಟಿಜುವಾನಾಗೆ ಪ್ರಯಾಣಿಸುತ್ತಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

SCROLL FOR NEXT