ಶೆಹಬಾಜ್‌ ಷರೀಫ್‌ 
ವಿದೇಶ

ಆಗಸ್ಟ್‌ 9 ರಂದು ಪಾಕಿಸ್ತಾನ ಸಂಸತ್‌ ವಿಸರ್ಜನೆ: ಪ್ರಧಾನಿ ಶೆಹಬಾಜ್‌ ಷರೀಫ್ ಘೋಷಣೆ

ಆಗಸ್ಟ್‌ 9 ರಂದು ಸಂಸತ್‌ ವಿಸರ್ಜನೆ ಮಾಡುವುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ. ಸಂಸತ್ತಿನ ಕೆಳಮನೆಯ ಅವಧಿ ಮುಕ್ತಾಯಕ್ಕೆ ಇನ್ನೂ ಮೂರು ವರ್ಷ ಇದ್ದು ಅದಕ್ಕೂ ಮುನ್ನ ವಿಸರ್ಜನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಇಸ್ಲಾಮಾಬಾದ್‌: ಆಗಸ್ಟ್‌ 9 ರಂದು ಸಂಸತ್‌ ವಿಸರ್ಜನೆ ಮಾಡುವುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ. ಸಂಸತ್ತಿನ ಕೆಳಮನೆಯ ಅವಧಿ ಮುಕ್ತಾಯಕ್ಕೆ ಇನ್ನೂ ಮೂರು ವರ್ಷ ಇದ್ದು ಅದಕ್ಕೂ ಮುನ್ನ ವಿಸರ್ಜನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ವಿಸರ್ಜನೆ ಮಾಡಿದ 90 ದಿನದೊಳಗೆ ಚುನಾವಣೆ ನಡೆಯಲಿದೆ. ಪ್ರಧಾನ ಮಂತ್ರಿಗಳ ನಿವಾಸದಲ್ಲಿ ಸರ್ಕಾರದ ಭಾ‌ಗವಾಗಿರುವ ಮಿತ್ರಪಕ್ಷಗಳಿಗೆ ಆಯೋಜಿಸಿದ್ದ ಭೋಜನ ಕೂಟದಲ್ಲಿ ಶೆಹಬಾಜ್‌ ಈ ಘೋಷಣೆ ಮಾಡಿದ್ದಾರೆ ಎಂದು ‘ಡಾನ್‌’ ಪತ್ರಿಕೆ ವರದಿ ಮಾಡಿದೆ.

ಸಂಸತ್‌ ವಿಸರ್ಜನೆ ಮಾಡುವ ಬಗ್ಗೆ ಪ್ರಧಾನ ಮಂತ್ರಿಗಳು ಅಧ್ಯಕ್ಷ ಆರೀಫ್ ಅಲವಿ ಅವರಿಗೆ ಆಗಸ್ಟ್‌ 9ರಂದು ಅಧಿಸೂಚನೆ ಕಳುಹಿಸಲಿದ್ದಾರೆ ಎಂದು ‘ದಿ ಎಕ್ಸ್‌ಪ್ರೆಸ್‌ ಟಿಬ್ಯುನ್‌’ ವರದಿ ಮಾಡಿದೆ. ಸಂವಿಧಾನದ ಪ್ರಕಾರ ಪ್ರಧಾನಿಗಳು ಕಳುಹಿಸಿದ ಅಧಿಸೂಚನೆಗೆ ರಾಷ್ಟ್ರಪತಿಗಳ ಮುದ್ರೆ ಬಿದ್ದ ಕೂಡಲೇ ಸಂಸತ್‌ ವಿಸರ್ಜನೆಯಾಗಲಿದೆ. ಪಾಕಿಸ್ತಾನದ ಸಂವಿಧಾನದ ಪ್ರಕಾರ, ಒಂದು ವೇಳೆ ಸರ್ಕಾರ ಅವಧಿ ಪೂರೈಸಿದರೆ 60 ದಿನಗಳಲ್ಲಿ ಚುನಾವಣೆ ನಡೆಸಬೇಕು. ಅವಧಿಗೂ ಮುನ್ನ ವಿಸರ್ಜನೆ ಮಾಡಿದರೆ 90 ದಿನಗಳ ಕಾಲಾವಕಾಶ ಇರಲಿದೆ.

ಆಗಸ್ಟ್ 9 ರಂದು, ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ರಾಷ್ಟ್ರೀಯ ಅಸೆಂಬ್ಲಿಯ ವಿಸರ್ಜನೆಗೆ ರಾಷ್ಟ್ರಪತಿಗಳಿಗೆ ಔಪಚಾರಿಕ ಸಲಹೆ ಕಳುಹಿಸುತ್ತಾರೆ. ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ವಿಸರ್ಜನೆಯನ್ನು ಜಾರಿಗೆ ತರಲು ಅಧ್ಯಕ್ಷರು 48 ಗಂಟೆಗಳ ಒಳಗೆ ಸಲಹೆಗೆ ಸಹಿ ಹಾಕಬೇಕು. ಯಾವುದೇ ಕಾರಣಕ್ಕೂ ರಾಷ್ಟ್ರಪತಿಗಳು ಸಲಹೆಗೆ ಸಹಿ ಹಾಕದಿದ್ದರೆ, ವಿಧಾನಸಭೆಯನ್ನು ಸ್ವಯಂಚಾಲಿತವಾಗಿ ವಿಸರ್ಜನೆ ಮಾಡಲಾಗುತ್ತದೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್