ವಿದೇಶ

ರಾಜಕೀಯ ರ್ಯಾಲಿ ವೇಳೆ ಈಕ್ವೆಡಾರ್ ಅಧ್ಯಕ್ಷೀಯ ಅಭ್ಯರ್ಥಿ ಫೆರ್ನಾಂಡೊ ವಿಲ್ಲಾವಿಸೆನ್ಸಿಯೊ ಗುಂಡಿಕ್ಕಿ ಹತ್ಯೆ

Sumana Upadhyaya

ಕ್ವಿಟೊ: ದಕ್ಷಿಣ ಅಮೆರಿಕಾದ ಪಶ್ಚಿಮ ತೀರದಲ್ಲಿರುವ ಈಕ್ವೆಡಾರ್ ದೇಶದ ಅಧ್ಯಕ್ಷೀಯ ಅಭ್ಯರ್ಥಿ ಫೆರ್ನಾಂಡೊ ವಿಲ್ಲಾವಿಸೆನ್ಸಿಯೊ ಅವರನ್ನು ನಿನ್ನೆ ಬುಧವಾರ ದೇಶದ ರಾಜಧಾನಿ ಕ್ವಿಟೊದಲ್ಲಿ ರಾಜಕೀಯ ರ್ಯಾಲಿಯೊಂದರಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಹೇಳಿದ್ದಾರೆ.

ಪ್ರಚಾರದ ವೇಳೆ ಗುಂಡಿನ ಸದ್ದು ಕೇಳುತ್ತಿದ್ದಂತೆ ಜನರು ಕಿರುಚುತ್ತಾ ಭೀತಿಯಿಂದ ತಮ್ಮನ್ನು ರಕ್ಷಣೆ  ಮಾಡಿಕೊಳ್ಳಲು ನೋಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಸ್ಮರಣೆ ಮತ್ತು ಅವರ ಹೋರಾಟಕ್ಕಾಗಿ, ಈ ಅಪರಾಧಕ್ಕೆ ಶಿಕ್ಷಿಸದೆ ಉಳಿಯುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

59 ವರ್ಷದ ವಿಲ್ಲಾವಿಸೆನ್ಸಿಯೊ ಅವರು ಬಿಲ್ಡ್ ಈಕ್ವೆಡಾರ್ ಚಳವಳಿಯ ಅಭ್ಯರ್ಥಿಯಾಗಿದ್ದರು. ಅವರು ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ದೇಶದ ಅಧ್ಯಕ್ಷೀಯ ಚುನಾವಣೆಯ 8 ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರು.

ಈ ಮಧ್ಯೆ, ಮತ್ತೊಬ್ಬ ಅಧ್ಯಕ್ಷೀಯ ಅಭ್ಯರ್ಥಿ ಲೂಯಿಸಾ ಗೊನ್ಜಾಲೆಸ್, ಇದು ನಮಗೆಲ್ಲ ದುಃಖವನ್ನುಂಟುಮಾಡುತ್ತದೆ, ಅವರ ಕುಟುಂಬಕ್ಕೆ ಸಂತಾಪಗಳು. ಮತ್ತೊಬ್ಬ ಅಭ್ಯರ್ಥಿ ಡೇನಿಯಲ್ ನೊಬೊ ಅಜಿನ್ ಪ್ರತಿಕ್ರಿಯಿಸಿ, ಇದು ದೇಶ, ಪ್ರಜಾಪ್ರಭುತ್ವ ಮತ್ತು ಎಲ್ಲಾ ಈಕ್ವೆಡಾರಿಯನ್ನರ ಶಾಂತಿಯ ವಿರುದ್ಧದ ದಾಳಿಯಾಗಿದೆ ಎಂದಿದ್ದಾರೆ. 

SCROLL FOR NEXT