ವಿದೇಶ

ಬ್ರಿಕ್ಸ್ ಬಳಿಕ ಜಿ-20 ಶೃಂಗಸಭೆಗೆಗೂ ಪುಟಿನ್ ಗೈರು!

Srinivas Rao BV

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನವದೆಹಲಿಯಲ್ಲಿ ಸೆ.09-10 ರಂದು ನಡೆಯಲಿರುವ ಜಿ-20 ಶೃಂಗಸಭೆಗೆ ಗೈರಾಗಲಿದ್ದಾರೆ. 

ರಷ್ಯಾ ಅಧ್ಯಕ್ಷರ ಕಚೇರಿಯ ವಕ್ತಾರರಾದ ಡೆಮಿಟ್ರಿ ಪೆಸ್ಕೋವ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಯೋಜನೆ ಅಧ್ಯಕ್ಷ್ಯರಿಗೆ ಇಲ್ಲ ಎಂದು ಡೆಮಿಟ್ರಿ ಪೆಸ್ಕೋವ್ ಹೇಳಿರುವುದು ಮಾಧ್ಯಮಗಳು ವರದಿ ಮಾಡಿವೆ.

ಪುಟಿನ್ ಯಾವ ಫಾರ್ಮ್ಯಾಟ್ ನಲ್ಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂಬುದನ್ನು ನಂತರ ನಿರ್ಧರಿಸಲಾಗುವುದು ಎಂದು ಪೆಸ್ಕೋವ್ ಹೇಳಿದ್ದಾರೆ. ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿಯೂ ಪುಟಿನ್ ವೈಯಕ್ತಿಕ ಭೇಟಿ ನೀಡಿ ಭಾಗಿಯಾಗಲಿಲ್ಲ. ಅವರ ಬದಲಿಗೆ ರಷ್ಯಾದ ವಿದೇಶಾಂಗ ಸಚಿವರು ಭಾಗಿಯಾಗಿದ್ದರು. ಉಕ್ರೇನಿಯನ್ ಮಕ್ಕಳನ್ನು ರಷ್ಯಾಕ್ಕೆ ಗಡೀಪಾರು ಮಾಡುವ ಆಪಾದಿತ ಯೋಜನೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಮಾರ್ಚ್‌ನಲ್ಲಿ ರಷ್ಯಾ ಅಧ್ಯಕ್ಷರಿಗೆ ಬಂಧನ ವಾರಂಟ್ ಹೊರಡಿಸಿದ್ದ ಹಿನ್ನೆಲೆಯಲ್ಲಿ ಪುಟಿನ್ ಕೋವಿಡ್ ನಂತರದ ಮೊದಲ ಬ್ರಿಕ್ಸ್ ಶೃಂಗಸಭೆಗೂ ಗೈರಾಗಿದ್ದರು

SCROLL FOR NEXT