ಪಾಕಿಸ್ತಾನ ಪ್ರಧಾನಿ ಶಬಾಶ್ ಷರೀಫ್ 
ವಿದೇಶ

ಆರ್ಥಿಕ ಸಂಕಷ್ಟ: ಸಾಲ ಕೊಡಲು ಸಿದ್ಧ... ಆದರೆ ಕಠಿಣ ಷರತ್ತು ಅನ್ವಯ..!: ಪಾಕ್ ಗೆ IMF

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಶತಕೋಟಿ ಡಾಲರ್‌ಗಳ ಸಹಾಯ ನೀಡಲು ಮುಂದಾಗಿದ್ದು, ಇದಕ್ಕಾಗಿ "ಕಠಿಣ ಷರತ್ತುಗಳನ್ನು" ಪಟ್ಟಿ ಮಾಡಿದೆ.

ನವದೆಹಲಿ: ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಶತಕೋಟಿ ಡಾಲರ್‌ಗಳ ಸಹಾಯ ನೀಡಲು ಮುಂದಾಗಿದ್ದು, ಇದಕ್ಕಾಗಿ "ಕಠಿಣ ಷರತ್ತುಗಳನ್ನು" ಪಟ್ಟಿ ಮಾಡಿದೆ.

ಹೌದು.. ಈ ಬಗ್ಗೆ ಸ್ವತಃ ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಮಾಹಿತಿ ನೀಡಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ IMF ಶತಕೋಟಿ ಡಾಲರ್ ನೆರವು ನೀಡಲು "ಕಠಿಣ" ಷರತ್ತುಗಳನ್ನು ಹೇರಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಆರ್ಥಿಕತೆಯ ಒಂಬತ್ತನೇ ಪರಿಶೀಲನೆಯ ನಂತರ IMF $ 1.1 ಶತಕೋಟಿಯನ್ನು ನೀಡಲು ಮುಂದಾಗಿದ್ದು, ಇದು ಇತರ ರಾಷ್ಟ್ರಗಳು ಮತ್ತು ಸಂಸ್ಥೆಗಳಿಂದ ದ್ವಿಪಕ್ಷೀಯ ಸಾಲಗಳಿಗೆ ದಾರಿ ಮಾಡಿಕೊಡುತ್ತದೆ. ಸರ್ಕಾರದ ಆದಾಯವನ್ನು ಹೆಚ್ಚಿಸಲು ಪಾಕಿಸ್ತಾನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು IMF ಬಯಸಿದೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ IMF ಸ್ಥೂಲ ಆರ್ಥಿಕ ಮತ್ತು ಹಣಕಾಸಿನ ಚೌಕಟ್ಟುಗಳ ಮೇಲೆ ಒಂಬತ್ತು ಕೋಷ್ಟಕಗಳನ್ನು ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದು, ಫೆಬ್ರವರಿ 9 ರೊಳಗೆ ಅವರು ಒಪ್ಪಂದಕ್ಕೆ ಬಂದರೆ, ಅವರು ಸಿಬ್ಬಂದಿ ಮಟ್ಟದ ಒಪ್ಪಂದಕ್ಕೆ ಸಹಿ ಹಾಕಬೇಕಿದೆ. ಐಎಂಎಫ್ ಹಣವನ್ನು ಕಳುಹಿಸಲು ಆರಾಮದಾಯಕವಾಗುವ ಮೊದಲು ಆರ್ಥಿಕ ಬಿಕ್ಕಟ್ಟಿನ ದೇಶದ ನಿರ್ವಹಣೆಯಲ್ಲಿ ಪಾಕಿಸ್ತಾನ ದೃಢವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪಾಕಿಸ್ತಾನವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಬೃಹತ್ ಹಣಕಾಸಿನ ಅಂತರವನ್ನು ತುಂಬಲು ಪಾಕಿಸ್ತಾನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು IMF ನಿರೀಕ್ಷಿಸುತ್ತಿದ್ದು, ಮುಖ್ಯವಾಗಿ  ಪೆಟ್ರೋಲಿಯಂ ತೆರಿಗೆಯನ್ನು ಲೀಟರ್‌ಗೆ 20-30 ರೂಪಾಯಿಗಳಷ್ಟು ಹೆಚ್ಚಿಸುವುದು ಷರತ್ತಿನ ಒಂದು ಪ್ರಸ್ತಾಪವಾಗಿದೆ. ಈಗಾಗಲೇ ಪಾಕಿಸ್ತಾನದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರಗಳು ಗಗನಕ್ಕೇರಿದ್ದು, ಐಎಂಎಫ್ ಪ್ರಸ್ತಾವನೆಯಿಂದ ಪೆಟ್ರೋಲ್ ದರ ಮತ್ತೆ ಗಗನಕ್ಕೇರುವ ಸಾಧ್ಯತೆ ಇದೆ. ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕಂಟ್ (ಪಿಒಎಲ್) ಉತ್ಪನ್ನಗಳ ಮೇಲೆ ಶೇಕಡಾ 17 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವುದು ಷರತ್ತುಗಳ ಮತ್ತೊಂದು ಪರಿಗಣನೆಯಾಗಿದೆ. 

ಇದಕ್ಕಾಗಿ ರಾಷ್ಟ್ರಪತಿಗಳ ಸುಗ್ರೀವಾಜ್ಞೆಯ ಮೂಲಕ ಜಿಎಸ್‌ಟಿ ದರವನ್ನು ಶೇಕಡಾ 17 ರಿಂದ 18 ಕ್ಕೆ ಹೆಚ್ಚಿಸಬೇಕು. ಮಿನಿ-ಬಜೆಟ್ ಮೂಲಕ ಸಕ್ಕರೆ ಪಾನೀಯಗಳ ಮೇಲಿನ ಫೆಡರಲ್ ಅಬಕಾರಿ ಸುಂಕ ದರವನ್ನು 13 ಪ್ರತಿಶತದಿಂದ 17 ಪ್ರತಿಶತಕ್ಕೆ ಏರಿಸಲು ಪಾಕಿಸ್ತಾನ ಪರಿಗಣಿಸಬಹುದು. ಇದಲ್ಲದೆ ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ಸಿಗರೇಟ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಲು ಸಲಹೆ ನೀಡಿದೆ ಎಂದು ಹೇಳಲಾಗಿದೆ.

ಅಂತೆಯೇ ಅಧಿಕ ವೇತನ ಪಡೆಯುವ ಪೌರಕಾರ್ಮಿಕರ ಆಸ್ತಿಗಳ ಬಗ್ಗೆ ಕಂದಾಯ ಮಂಡಳಿ ಮಾಹಿತಿ ಕೇಳಿದ್ದು, ಈ ಮಾಹಿತಿಯನ್ನು ಫೆಡರಲ್ ಬೋರ್ಡ್ ಆಫ್ ರೆವಿನ್ಯೂ ಮತ್ತು ಬ್ಯಾಂಕ್‌ಗಳ ನಡುವೆ ಹಂಚಿಕೊಳ್ಳಲಾಗುತ್ತದೆ. ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಶುಕ್ರವಾರ ತನ್ನ ವಿದೇಶಿ ವಿನಿಮಯ ಮೀಸಲು ಶೇಕಡಾ 16.1 ರಷ್ಟು ಕುಸಿದಿದ್ದು, ಕಳೆದ ಆರ್ಥಿಕ ವಾರದ ಕೊನೆಯಲ್ಲಿ $3.09 ಶತಕೋಟಿಗೆ ತಲುಪಿದೆ, ಇದು ಸುಮಾರು 10 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT