ವಿದೇಶ

ಒಂದೇ ವಾರದಲ್ಲಿ ಪಾಕಿಸ್ತಾನದ ಹಣದುಬ್ಬರ ಶೇ.38.4 ಕ್ಕೆ ಏರಿಕೆ

Srinivas Rao BV

ಇಸ್ಲಾಮಾಬಾದ್: ತೀವ್ರ ಆರ್ಥಿಕ ಕುಸಿತ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಕಳೆದ ವಾರದ ಹಣದುಬ್ಬರ ಶೇ.38.4ಕ್ಕೆ ಏರಿಕೆಯಾಗಿದೆ. 

ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿರುವುದು ಮುಂದುವರೆದಿದ್ದು, ತತ್ಪರಿಣಾಮವಾಗಿ ಹಣದುಬ್ಬರ ಒಂದೇ ವಾರದಲ್ಲಿ ಶೇ.38.4 ಕ್ಕೆ ಏರಿಕೆ ಕಂಡಿದೆ 

ಐಎಂಎಫ್ ನಿಂದ 1.1 ಬಿಲಿಯನ್ ಡಾಲರ್ ಸಾಲ ಪಡೆಯುವುದಕ್ಕೆ ಅದರ ಸಲಹೆಗಳನ್ನು ಪಾಲಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಹೊಸ ತೆರಿಗೆಗಳನ್ನು ವಿಧಿಸಿರುವುದು ಹಾಗೂ ಪೆಟ್ರೋಲ್ ದರ ಏರಿಸಿರುವುದು ಹಣದುಬ್ಬರ ಏರಿಕೆಯಾಗುವುದಕ್ಕೆ ಕಾರಣವಾಗಿದೆ. 

ಅಲ್ಪಾವಧಿಯ ಹಣದುಬ್ಬರ ಮಾಪಕವಾಗಿರುವ ಸೆನ್ಸಿಟೀವ್ ಪ್ರೈಸ್ ಇಂಡೆಕ್ಸ್ (ಎಸ್ ಪಿಐ) ವರ್ಷದಿಂದ ವರ್ಷದ ಆಧಾರದಲ್ಲಿ ಕಳೆದ ವಾರ ಶೇ.38.42 ರಷ್ಟು ಏರಿಕೆಯಾಗಿದೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ಪಾಕ್ ಅಂಕಿಅಂಶಗಳ ಬ್ಯೂರೋವನ್ನು ಉಲ್ಲೇಖಿಸಿ ವರದಿ ಪ್ರಕಟಿದೆ.

SCROLL FOR NEXT