ವಿದೇಶ

ಉಕ್ರೇನ್ ಮೇಲೆ ಆಕ್ರಮಣ: ರಷ್ಯಾದ ಎಫ್ಎಟಿಎಫ್ ಸದಸ್ಯತ್ವ ಅಮಾನತು

Nagaraja AB

ಪ್ಯಾರಿಸ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣದಿಂದಾಗಿ ಅದರ ಸದಸ್ಯತ್ವವನ್ನು ಅಮಾನತುಗೊಳಿಸಿರುವುದಾಗಿ ಜಾಗತಿಕ ಹಣ ವರ್ಗಾವಣೆ ವಿರೋಧಿ ನಿಗಾ ಸಂಸ್ಥೆ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಶುಕ್ರವಾರ ಹೇಳಿದೆ. ಸಂಘಟನೆಯ ತತ್ವಗಳನ್ನು ಉಲ್ಲಂಘಿಸಿರುವುದರಿಂದ ರಷ್ಯಾದ ಸದಸ್ಯತ್ವವನ್ನು ಅಮಾನತುಗೊಳಿಸಲು ನಿರ್ಧರಿಸಿರುವುದಾಗಿ ಅದು ತಿಳಿಸಿದೆ. 

ಎಫ್ ಐಟಿಎಫ್  200 ಕ್ಕೂ ಹೆಚ್ಚು ದೇಶಗಳಿಗೆ ಮಾನದಂಡಗಳನ್ನು ನಿಗದಿಪಡಿಸುತ್ತದೆ ಮತ್ತು ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಮತ್ತು ಭಯೋತ್ಪಾದನೆ ಸೇರಿದಂತೆ ಗಂಭೀರ ಅಪರಾಧಗಳನ್ನು ನಿಭಾಯಿಸಲು ಅಧಿಕಾರಿಗಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತದೆ.

ರಷ್ಯಾದ ಒಕ್ಕೂಟದ ಕ್ರಮಗಳು ಭದ್ರತೆ, ಸುರಕ್ಷತೆ ಮತ್ತು ಜಾಗತಿಕ ಹಣಕಾಸು ವ್ಯವಸ್ಥೆಯ ಸಮಗ್ರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಎಫ್ ಎಟಿಎಫ್ ಮೂಲ ತತ್ವಗಳಿಗೆ ವಿರುದ್ಧವಾಗಿದ್ದು ಸ್ವೀಕಾರಾರ್ಹವಲ್ಲ ಎಂದು ಗುಂಪು ಹೇಳಿದೆ.
ಎಫ್ಎಟಿಎಫ್ ಮಾನದಂಡಗಳನ್ನು ಜಾರಿಗೆ ತರಲು ರಷ್ಯಾ ಇನ್ನೂ ಜವಾಬ್ದಾರಯುತವಾಗಿರುವುದಾಗಿ ತಿಳಿಸಿದೆ. 

ಪ್ಯಾರಿಸ್‌ನಲ್ಲಿ ನಡೆದ ಐದು ದಿನಗಳ ಸಭೆಯ ನಂತರ ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾವನ್ನು ತನ್ನ ಹೆಚ್ಚಿನ ಮೇಲ್ವಿಚಾರಣೆಗೆ ಒಳಪಟ್ಟಿರುವ ದೇಶಗಳ ಪಟ್ಟಿಗೆ ಹಣಕಾಸು ಕ್ರಿಯಾ ಕಾರ್ಯ ಪಡೆ ಸೇರಿಸಿಕೊಂಡಿದ್ದು,  ಆ ವರ್ಗದಿಂದ ಕಾಂಬೋಡಿಯಾ ಮತ್ತು ಮೊರಾಕೊವನ್ನು ತೆಗೆದುಹಾಕಿದೆ.

SCROLL FOR NEXT