ವಿದೇಶ

ನ್ಯಾಟೋದ ಪರಮಾಣು ಸಾಮರ್ಥ್ಯ ನಿರ್ಲಕ್ಷಿಸುವಂತಿಲ್ಲ; ಮತ್ತೆ ಬೆದರಿಕೆ ಹಾಕಿದ ರಷ್ಯಾ ಅಧ್ಯಕ್ಷ ಪುಟಿನ್

Srinivasamurthy VN

ಮಾಸ್ಕೋ: ಉಕ್ರೇನ್ ಗೆ ನೆರವು ನೀಡುತ್ತಿರುವ ನ್ಯಾಟೋದ ಪರಮಾಣು ಸಾಮರ್ಥ್ಯ ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೆ ಪರಮಾಣು ಬೆದರಿಕೆ ಹಾಕಿದ್ದಾರೆ.

ಉಕ್ರೇನ್ ಶಸ್ತ್ರಾಸ್ತ್ರ ನೆರವು ನೀಡುತ್ತಿರುವ ಅಮೆರಿಕ ಪರಮಾಣು ಶಸ್ತ್ರಾಸ್ತ್ರ ಸಾಮಥ್ರ್ಯಗಳನ್ನು ರಷ್ಯಾ ಗಣನೆಗೆ ತೆಗೆದುಕೊಳ್ಳುತ್ತದೆ. ನಮ್ಮ ದೇಶವನ್ನು ಸಂರಕ್ಷಿಸಲು, ಭದ್ರತೆ ಮತ್ತು ಕಾರ್ಯತಂತ್ರದ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಉಕ್ರೇನ್ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ರಷ್ಯಾ ಸರ್ಕಾರಿ ಸ್ವಾಮ್ಯದ ವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಪುಟಿನ್, 'ರಷ್ಯಾವನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಹಣಿಯಲು ನ್ಯಾಟೋ ಮತ್ತು ಅಮೆರಿಕ ಸೇರಿಕೊಂಡಿವೆ. ಇಂದಿನ ಪರಿಸ್ಥಿತಿಗಳಲ್ಲಿ, ಎಲ್ಲಾ ಪ್ರಮುಖ ನ್ಯಾಟೋ ದೇಶಗಳು ನಮ್ಮ ಮೇಲೆ ಕಾರ್ಯತಂತ್ರದ ಸೋಲನ್ನು ಉಂಟು ಮಾಡಲು ,ನಮ್ಮ ದೇಶದ ಜನರನ್ನು ಬಳಲುವಂತೆ ಮಾಡುವುದು ತಮ್ಮ ಮುಖ್ಯ ಗುರಿಯಾಗಿಸಿಕೊಂಡಿವೆ. ಹೀಗಾಗಿ ನಾವೇಕೆ ಅವರ ಪರಮಾಣು ಸಾಮರ್ಥ್ಯಗಳನ್ನು ಏಕೆ ಗಣನೆಗೆ ತೆಗೆದುಕೊಳ್ಳಬಾರದು? ಎಂದು ಪುಟಿನ್ ಪ್ರಶ್ನಿಸಿದ್ದಾರೆ.

ಉಕ್ರೇನ್‍ಗೆ ಹತ್ತಾರು ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾರೆ. ಪಾಶ್ಚಾತ್ಯರು ರಷ್ಯಾವನ್ನು ನಾಶಮಾಡಲು ಮುಂದಾಗಿದ್ದಾರೆ. ಉಕ್ರೇನ್‍ನಲ್ಲಿ ಒಂದು ವರ್ಷದಿಂದ ನಡೆಯುತ್ತಿರುವ ಯುದ್ದ ರಷ್ಯಾದ ಉಳಿವಿಗಾಗಿ ನಡೆದ ಹೋರಾಟದ ಭಾಗವಾಗಿದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಸಮರ್ಥವಾಗಿ ಬಳಸುವುದಕ್ಕೆ ರಷ್ಯಾ ಹಿಜರಿಯುವುದಿಲ್ಲ ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ.

SCROLL FOR NEXT