ವಿದೇಶಾಂಗ ಸಚಿವ ಜೈಶಂಕರ್. 
ವಿದೇಶ

ರಷ್ಯಾದಿಂದ ಯುರೋಪ್ ನ ತೈಲ ಆಮದು ಭಾರತಕ್ಕಿಂತ 6 ಪಟ್ಟು ಹೆಚ್ಚು: ವಿದೇಶಾಂಗ ಸಚಿವ ಜೈಶಂಕರ್ 

2022 ರ ಫೆಬ್ರವರಿಯಲ್ಲಿ ಉಕ್ರೇನ್ ಯುದ್ಧ ಘೋಷಣೆ ಮಾಡಿದಾಗಿನಿಂದ ರಷ್ಯಾದಿಂದ ಯುರೋಪ್ ಭಾರತಕ್ಕಿಂತಲೂ 6 ಪಟ್ಟು ಹೆಚ್ಚು ತೈಲ ಆಮದು ಮಾಡಿಕೊಂಡಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ವಿಯೆನ್ನಾ: 2022 ರ ಫೆಬ್ರವರಿಯಲ್ಲಿ ಉಕ್ರೇನ್ ಯುದ್ಧ ಘೋಷಣೆ ಮಾಡಿದಾಗಿನಿಂದ ರಷ್ಯಾದಿಂದ ಯುರೋಪ್ ಭಾರತಕ್ಕಿಂತಲೂ 6 ಪಟ್ಟು ಹೆಚ್ಚು ತೈಲ ಆಮದು ಮಾಡಿಕೊಂಡಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
 
ಪಶ್ಚಿಮ ದೇಶಗಳ ವಿರೋಧದ ನಡುವೆಯೂ ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಂಡಿದ್ದನ್ನು ಸಮರ್ಥಿಸಿಕೊಂಡಿರುವ ಜೈಶಂಕರ್, ಸೈಪ್ರಸ್ ನಿಂದ ವಿಯೆನ್ನಾಗೆ ಆಗಮಿಸಿದ ಜೈಶಂಕರ್, ಯುರೋಪ್ ನ ರಾಜಕೀಯ ನಾಯಕತ್ವ ತನ್ನ ಜನರಿಗಾಗಿ ರಷ್ಯಾ- ಉಕ್ರೇನ್ ಸಂಘರ್ಷದ ಪರಿಣಾಮವನ್ನು ಮೃದುಗೊಳಿಸುವುದಕ್ಕೆ ಬಯಸಿದರೆ, ಈ ಸವಲತ್ತನ್ನು ಬೇರೆ ನಾಯಕತ್ವಗಳಿಗೂ ವಿಸ್ತರಿಸಬೇಕು ಎಂದು ಜೈಶಂಕರ್ ಹೇಳಿದ್ದಾರೆ.

ಯುರೋಪ್ ತನಗೆ ಬೇಕಾದ ರೀತಿಯಲ್ಲಿ ಆಮದುಗಳನ್ನು ಕಡಿಮೆ ಮಾಡಿಕೊಂಡಿದೆ.  60,000 ಯುರೋಗಳ (ತಲಾದಾಯ) ನಿಮ್ಮ ಜನಸಂಖ್ಯೆ ಬಗ್ಗೆ ನೀವು ಅಷ್ಟೊಂದು ಕಾಳಜಿ ಹೊಂದಿದ್ದರೆ, ನಾವು 2,000 ಯುಎಸ್ ಡಿ ಜನಸಂಖ್ಯೆ ಹೊಂದಿದ್ದೆವೆ. ನಮಗೂ ಇಂಧನದ ಅವಶ್ಯಕತೆ ಇದೆ, ನಾವೂ ತೈಲಕ್ಕಾಗಿ ಹೆಚ್ಚು ಖರ್ಚು ಮಾಡುವ ಸ್ಥಿತಿಯಲ್ಲಿಲ್ಲ ಎಂದು ಜೈಶಂಕರ್ ಆಸ್ಟ್ರಿಯಾದ ರಾಷ್ಟ್ರೀಯ ಸಾರ್ವಜನಿಕ ಮಾಧ್ಯಮ ಒಆರ್ ಎಫ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

2022 ರ ಫೆಬ್ರವರಿಯಿಂದ ಭಾರತ ರಷ್ಯಾದಿಂದ ಎಷ್ಟು ಇಂಧನವನ್ನು ಆಮದು ಮಾಡಿಕೊಂಡಿದೆಯೋ ಅದರ 6 ಪಟ್ಟು ಹೆಚ್ಚಿನ ಇಂಧನವನ್ನು ಯುರೋಪ್ ಖರೀದಿಸಿದೆ ಒಂದು ವೇಳೆ ರಷ್ಯಾ-ಉಕ್ರೇನ್ ಯುದ್ಧ ತತ್ವಾದರ್ಶಗಳ ವಿಷಯವೇ ಆಗಿದ್ದಲ್ಲಿ, ಯುರೋಪ್ ಫೆಬ್ರವರಿ 25 ರಿಂದ ರಷ್ಯಾದಿಂದ ಏಕೆ ಇಂಧನ ಆಮದನ್ನು ಸ್ಥಗಿತಗೊಳಿಸಲಿಲ್ಲ ಎಂದು ಪ್ರಶ್ನಿಸುವ ಮೂಲಕ  ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಜೈಶಂಕರ್ ಪಶ್ಚಿಮದ ದೇಶಗಳಗಳನ್ನು ಬಯಲು ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

SCROLL FOR NEXT