ವಿದೇಶ

ಉಕ್ರೇನ್ ಮೇಲಿನ ಯುದ್ಧಕ್ಕೆ 2 ದಿನಗಳ ಕದನ ವಿರಾಮ; ಮಾತುಕತೆಗೆ ಸಿದ್ಧ, ಆದರೆ ಷರತ್ತು ಅನ್ವಯ: ಪುಟಿನ್ ಘೋಷಣೆ

Srinivas Rao BV

ಮಾಸ್ಕೋ: ಆರ್ಥೋಡಾಕ್ಸ್ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಉಕ್ರೇನ್ ವಿರುದ್ಧದ ಯುದ್ಧಕ್ಕೆ 2 ದಿನಗಳ ಕದನ ವಿರಾಮ ಘೋಷಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ಜೊತೆಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದು ಷರತ್ತು ವಿಧಿಸಿದ್ದಾರೆ. 
 
ರಷ್ಯಾ ವಶಪಡಿಸಿಕೊಂಡಿರುವ ಪ್ರಾಂತ್ಯಗಳನ್ನು ಉಕ್ರೇನ್ ರಷ್ಯಾದ್ದು ಎಂದು ಒಪ್ಪಿಕೊಂಡಲ್ಲಿ ಉಕ್ರೇನ್ ಜೊತೆಗೆ ಮಾತುಕತೆಗೆ ಸಿದ್ಧ ಎಂದು ಪುಟಿನ್ ಟರ್ಕಿ ನಾಯಕ ರೆಸೆಪ್ ತಯ್ಯಿಪ್ ಗೆ ಹೇಳಿದ್ದಾರೆ. 

ಇನ್ನು ಉಭಯ ನಾಯಕರ ಸಂಭಾಷಣೆಯಲ್ಲಿ  ರಷ್ಯಾ ಅಧ್ಯಕ್ಷರು ಪಶ್ಚಿಮದ ದೇಶಗಳ ವಿನಾಶಕಾರಿ ಪಾತ್ರದ ಬಗ್ಗೆ ಮಾತನಾಡಿದ್ದು, ಉಕ್ರೇನ್ ಗೆ ಶಸ್ತ್ರಾಸ್ತ್ರ ಹಾಗೂ ಸೇನಾ, ಕಾರ್ಯಾಚರಣೆ ಹಾಗೂ ಟಾರ್ಗೆಟ್ ಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿತ್ತು ಎಂದು ಪುಟಿನ್ ಒತ್ತಿ ಹೇಳಿದ್ದಾರೆ. 

ಪುಟಿನ್ ಜತೆ ದೂರವಾಣಿ ಕರೆ ಮೂಲಕ ಮಾತನಾಡಿದ್ದ ಎರ್ಡೊಗನ್ ಉಕ್ರೇನ್ ಶಾಂತಿಯುತ ಮಾತುಕತೆ ನಡೆಸುವಂತೆ ಮನವಿ ಮಾಡಿದ್ದರು. ರಷ್ಯಾ ಸೇನಾ ಪಡೆ ಈಗಾಗಲೇ ಉಕ್ರೇನ್ ಪೂರ್ವ ಹಾಗೂ ದಕ್ಷಿಣದ ಪ್ರದೇಶಗಳನ್ನು ಆಕ್ರಮಿಸಿಕೊಂಡಿವೆ. ಉಕ್ರೇನ್ ವಿಷಯದ ಹೊರತಾಗಿ ದೂರವಾಣಿ ಮಾತುಕತೆಯಲ್ಲಿ ಉಭಯ ನಾಯಕರೂ ಧಾನ್ಯ ವ್ಯಾಪಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. 

SCROLL FOR NEXT