ವಿದೇಶ

ಉಕ್ರೇನ್‌ ಅಪಾರ್ಟ್'ಮೆಂಟ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 12 ಮಂದಿ ಸಾವು

Manjula VN

ಕೀವ್‌: ಉಕ್ರೇನ್ ಮೇಲಿನ ತನ್ನ ದಾಳಿಯನ್ನು ರಷ್ಯಾ ಮುಂದುವರೆಸಿದ್ದು, ಶನಿವಾರ ರಾತ್ರಿ ಉಕ್ರೇನ್'ನ ಡಿನಿಪ್ರೊ ನಗರದ ವಸತಿ ಸಮುಚ್ಚಯವೊಂದರ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.

ಒಂಬತ್ತು ಅಂತಸ್ತಿನ ಡಿನಿಪ್ರೊ ಪ್ರದೇಶದ ಅಪಾರ್ಟ್ಮೆಂಟ್ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ದಾಳಿಯಿಂದ ಇಂಧನ ಸೌಲಭ್ಯ ಘಟಕಗಳಿಗೂ ಹಾನಿಯಾಗಿದ್ದು, ಇದರಿಂದ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿ ತಿಳಿಸಿದೆ.

ದಾಳಿಯಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ 6 ಮಕ್ಕಳು ಸೇರಿವೆ ಎಂದು ಸ್ಥಳೀಯ ಗವರ್ನರ್‌ ವಾಲೆಂಟೈನ್‌ ರೆಝ್ನಿಚೆಂಕೊ ಹೇಳಿದ್ದಾರೆ.

ನಿಪ್ರೊವ್‌ಸ್ಕೀ, ಹೊಲೊಸೀವ್‌ಸ್ಕೀ, ಡಿನಿಪ್ರೊ ಪ್ರದೇಶಗಳ ಮೇಲೆ ರಷ್ಯಾ ವಾಯು ದಾಳಿಯನ್ನು ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಜನರು ಆಶ್ರಯ ತಾಣಗಳಲ್ಲಿ ಉಳಿಯುವಂತೆ ನಗರದ ನಿವಾಸಿಗಳಿಗೆ ಕೀವ್‌ ಮೇಯರ್‌ ವಿತಾಲಿ ಕ್ಲಿಸ್‌ಚ್ಕೊ ತಿಳಿಸಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಉಕ್ರೇನ್‌ ಹೇಳಿದೆ.

SCROLL FOR NEXT