ಅದಾನಿ ಸಮೂಹ 
ವಿದೇಶ

1.2 ಬಿಲಿಯನ್ ಡಾಲರ್ ವ್ಯವಹಾರ: ಅದಾನಿ ಸಮೂಹದ ತೆಕ್ಕೆಗೆ ಹೈಫಾ ಪೋರ್ಟ್; ಮೈಲಿಗಲ್ಲು ಎಂದ ಇಸ್ರೇಲ್ ಪ್ರಧಾನಿ

ಇಸ್ರೇಲಿನ ಆಯಕಟ್ಟಿನ ಹೈಫಾ ಪೋರ್ಟ್ ಪೋರ್ಟ್ ನ್ನು ಅದಾನಿ ಸಮೂಹ 1.2 ಬಿಲಿಯನ್ ಡಾಲರ್ ಗೆ ಪಡೆದಿದೆ.

ಹೈಫಾ: ಇಸ್ರೇಲಿನ ಆಯಕಟ್ಟಿನ ಹೈಫಾ ಪೋರ್ಟ್ ಪೋರ್ಟ್ ನ್ನು ಅದಾನಿ ಸಮೂಹ 1.2 ಬಿಲಿಯನ್ ಡಾಲರ್ ಗೆ ಪಡೆದಿದೆ.
 
ಟೆಲ್ ಅವೀವ್ ನಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯವೂ ಸೇರಿದಂತೆ ಇಸ್ರೇಲ್ ನಲ್ಲಿನ ಹೂಡಿಕೆಯ ನಿರ್ಧಾರ ಭಾಗವಾಗಿ ಅದಾನಿ ಸಮೂಹ ಈ ಹೈಫಾ ಪೋರ್ಟ್ ನ ಒಪ್ಪಂದಕ್ಕೆ ಮುಂದಾಗಿದೆ. 

ಇತ್ತೀಚೆಗೆ ಅಮೇರಿಕಾದ ಶಾರ್ಟ್ ಸೆಲ್ಲರ್ ಹಿಂಡನ್ ಬರ್ಗ್ ರಿಸರ್ಚ್ ನ ವರದಿಯಲ್ಲಿ ಅದಾನಿ ಸಮೂಹದ ಬಗ್ಗೆ ಅಕ್ರಮಗಳ ಆರೋಪ ಕೇಳಿಬಂದಿತ್ತು. 

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ- ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಇಬ್ಬರೂ ಹೈಫಾ ಪೋರ್ಟ್ ಒಪ್ಪಂದಕ್ಕೆ ಸಹಿ ಮಾಡಿದ್ದು, ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ. 

ಹೈಫಾ ಪೋರ್ಟ್ ಒಪ್ಪಂದದ ಬಗ್ಗೆ ಮಾತನಾಡಿರುವ ನೇತನ್ಯಾಹು ಅದಾನಿ ಸಮೂಹದ ಜೊತೆಗಿನ ಒಪ್ಪಂದವನ್ನು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದು, ಹಲವು ವಿಧಗಳಲ್ಲಿ ಈ ಒಪ್ಪಂದ ಉಭಯ ರಾಷ್ಟ್ರಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಪಕ್ಷಗಳ ಗದ್ದಲದ ನಡುವೆ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ!

ಬೆಂಗಳೂರಿನ ORRಗೆ ಹೈಟೆಕ್ ಟಚ್; ಬಸ್, ಸೈಕಲ್ ಟ್ರ್ಯಾಕ್, ಡೆಲಿವರಿ ಬಾಯ್ಸ್‌ಗೆ ಅತ್ಯಾಧುನಿಕ 'ಗಿಗ್ ಹಬ್ಸ್‌' ನಿರ್ಮಾಣ!

ವಂದೇ ಮಾತರಂ ಅವಮಾನಿಸುವುದು ಶಿಕ್ಷಾರ್ಹ ಅಪರಾಧ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ!

ಬಾಂಗ್ಲಾದವರ ಬಗ್ಗೆ ಮಾಹಿತಿ ಕೊಟ್ಟ 15 ನಿಮಿಷದಲ್ಲೇ ಭಾರತೀಯನ ವಿರುದ್ಧವೇ ಹಲ್ಲೆ ಕೇಸ್: ನಿಮ್ಮ ಓಲೈಕೆ ನಿಲ್ಲಿಸಿ, ಸರ್ಕಾರಕ್ಕೆ ಹೈಕೋರ್ಟ್ ಚಾಟಿ!

ಪಂಜಾಬ್ ವಿವಿಯಲ್ಲಿ ಘೋರ ದುರಂತ: ಕ್ಯಾಂಪಸ್‌ನಲ್ಲೇ ವಿದ್ಯುತ್ ತಗುಲಿ ಪಿಎಚ್‌ಡಿ ವಿದ್ಯಾರ್ಥಿನಿ ಸಾವು; ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ