ನಿತ್ಯಾನಂದನ ಶಿಷ್ಯೆ ರಂಜಿತಾ 
ವಿದೇಶ

ನಿತ್ಯಾನಂದನ ಕೈಲಾಸ ದೇಶಕ್ಕೆ 'ಸ್ವಾಮಿ' ರಂಜಿತಾ ಪ್ರಧಾನಿ!

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ತನ್ನ ಆತ್ಮೀಯ ಶಿಷ್ಯೆಯನ್ನು ತನ್ನ ದೇಶದ ಪ್ರಧಾನಿಯನ್ನಾಗಿ  ಮಾಡಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ತನ್ನ ಆತ್ಮೀಯ ಶಿಷ್ಯೆಯನ್ನು ತನ್ನ ದೇಶದ ಪ್ರಧಾನಿಯನ್ನಾಗಿ  ಮಾಡಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೈಲಾಸ ದೇಶ ಎಂಬ ಹೊಸ ದೇಶವನ್ನೇ ಕಟ್ಟಿರುವ ನಿತ್ಯಾನಂದ ಹಲವು ವರ್ಷಗಳ ಕಾಲ ತನ್ನ ಶಿಷ್ಯರ ಜೊತೆ ಅಲ್ಲಿಯೇ ನೆಲೆಯೂರಿದ್ದಾನೆ. ಇದೀಗ ಆ ದೇಶಕ್ಕೆ ಪ್ರಧಾನಿಯನ್ನು ನೇಮಕ ಮಾಡಿದ್ದಾನೆ.

ದೇವರ ಹೆಸರಲ್ಲಿ ಹೊಸ ಸಾಮ್ರಾಜ್ಯ ಕಟ್ಟಿಕೊಂಡಿರುವ ನಿತ್ಯಾನಂದ ಈಕ್ವೆಡಾರ್‌ನ ಕರಾವಳಿಯಲ್ಲಿ ದ್ವೀಪವೊಂದನ್ನು ತನ್ನದೇ ಆದ ದೇಶವಾಗಿ ನಿರ್ಮಿಸಿಕೊಂಡು ತನ್ನ ಶಿಷ್ಯರ ಜೊತೆ ವಾಸಿಸುತ್ತಿದ್ದಾನೆ.

ನಟಿ ರಂಜಿತಾ ಕಾರಣದಿಂದಾಗಿಯೇ ನಿತ್ಯಾನಂದ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದು, ಇಬ್ಬರ ನಡುವಿನ ಖಾಸಗಿ ವಿಡಿಯೋ ವಿಚಾರವಾಗಿ ಕೋರ್ಟ್ ಮೆಟ್ಟಿಲು ಕೂಡ ಏರಿದ್ದ. ನಂತರ ದೇಶವನ್ನೇ ಬಿಡಬೇಕಾಗಿ ಬಂತು. ದೇಶವನ್ನು ತೊರೆಯುವಾಗ ತನ್ನ ಅಷ್ಟೂ ಶಿಷ್ಯರನ್ನು ಕರೆದೊಯ್ದು, ಹೊಸ ದೇಶ ಕಟ್ಟಿ ಮತ್ತೆ ಅಚ್ಚರಿ ಮೂಡಿಸಿದೆ. ಈ ದೇಶಕ್ಕೆ ರಂಜಿತಾ ಅವರನ್ನು ಪ್ರಧಾನಿ ಮಾಡಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.

ತಮ್ಮ ಪ್ರೀತಿಯ ಶಿಷ್ಯೆ ರಂಜಿತಾಳನ್ನು ಕೈಲಾಸದ ಪ್ರಧಾನ ಮಂತ್ರಿಯನ್ನಾಗಿ ನೇಮಿಸಿದ್ದಾರೆ. ಈ ಸಂಬಂಧ ಅಧಿಕೃತ ಘೋಷಣೆ ಮಾಡಲಾಗಿದೆ ಎಂದು ತಮಿಳು ನಿಯತಕಾಲಿಕವೊಂದು ವರದಿ ಮಾಡಿದೆ. ಇದಲ್ಲದೆ, ನಿತ್ಯಾನಂದನ ವೆಬ್‌ಸೈಟ್ ಕೂಡ ಈ ವಿಷಯವನ್ನು ಪ್ರಕಟಿಸಿದೆ ಎನ್ನಲಾಗಿದೆ . ಈ ಸುದ್ದಿ ಹೊರಬೀಳುತ್ತಿದ್ದಂತೆ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಸದ್ಯಕ್ಕೆ ನಿತ್ಯಾನಂದನ ವೆಬ್‌ಸೈಟ್‌ನಲ್ಲಿ ರಂಜಿತಾ ಮತ್ತು ನಿತ್ಯಾನಂದ ಇರುವ ಫೋಟೋಗಳು ಮಾತ್ರ ಕಾಣಿಸಿಕೊಳ್ಳುತ್ತಿವೆ. ರಂಜಿತಾ ಕೂಡ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದು ನಿತ್ಯಾನಂದಮಯಿ ರಂಜಿತ ಸ್ವತಃ ಸ್ವಾಮಿ ಎಂದು ಘೋಷಿಸಿಕೊಂಡಿದ್ದಾಳೆ. ಒಟ್ಟಾರೆಯಾಗಿ ಹಿಂದೂಗಳಿಗಾಗಿ ಸ್ಥಾಪಿತವಾದ ಕೈಲಾಸ ರಾಷ್ಟ್ರದ ಮೊದಲ ಪ್ರಧಾನ ಮಂತ್ರಿಯಾಗಿ ರಂಜಿತಾ ಅವರನ್ನು ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ತನ್ನ ದೇಶದ ಕರೆನ್ಸಿಯನ್ನು ನಿತ್ಯಾನಂದ ಬಿಡುಗಡೆ ಮಾಡಿದ್ದ. ತನ್ನ ದೇಶದ ವೀಸಾ ಕೂಡ ಘೋಷಿಸಿದ್ದ. ಕೈಲಾಸ ದೇಶಕ್ಕೆ ಬರುವವರು ಯಾವೆಲ್ಲ ನಿಯಮ ಪಾಲಿಸಬೇಕು ಎನ್ನುವ ಕುರಿತಾದ ವೆಬ್ ಸೈಟ್ ಕೂಡ ನಿತ್ಯಾನಂದ ಮಾಡಿಕೊಂಡಿದ್ದಾನೆ. ಯಾರಿಗೆಲ್ಲ ವೀಸಾ ಕೊಡಲಾಗುತ್ತದೆ ಎನ್ನುವ ವಿವರಣೆಯನ್ನು ಅದರಲ್ಲಿ ನೀಡಿದ್ದಾನೆ. ಇದೀಗ ತನ್ನ ದೇಶಕ್ಕೆ ನಟಿ ರಂಜಿತಾರನ್ನು ಪ್ರಧಾನಿಯನ್ನಾಗಿ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT