ವಿದೇಶ

ಚೀನಾ ಬದಲಾಗುತ್ತಿದೆ, ನನ್ನೊಂದಿಗೆ ಮಾತನಾಡಲು ಬಯಸುತ್ತಿದೆ: ದಲೈಲಾಮಾ

Manjula VN

ಧರ್ಮಶಾಲಾ (ಹಿಮಾಚಲ ಪ್ರದೇಶ): ಚೀನಾ ಬದಲಾಗುತ್ತಿದ್ದು, ನನ್ನೊಂದಿಗೆ ಮಾತನಾಡಲು ಬಯಸುತ್ತಿದೆ ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಹೇಳಿದ್ದಾರೆ.

ಕಾಂಗ್ರಾ ವಿಮಾನ ನಿಲ್ದಾಣಕ್ಕೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಬದಲಾಗುತ್ತಿದ್ದು, ಟಿಬೆಟಿಯನ್ ಜನರು ತುಂಬಾ ಪ್ರಬಲರಾಗಿದ್ದಾರೆ. ಟಿಬೆಟಿಯನ್ ಸಮಸ್ಯೆ ಪರಿಹರಿಸುವ ಸಲುವಾಗಿ ನನ್ನೊಂದಿಗೆ ಮಾತನಾಡಲು ಬಯಸುತ್ತಿದ್ದಾರೆ. ಅದಕ್ಕೆ ನಾನೂ ಸಿದ್ಧನಿದ್ದೇನೆ. ಆದರೆ, ಟಿಬೆಟ್‌'ಗೆ ಸ್ವಾತಂತ್ರ್ಯ ನೀಡುವಂತೆ ಚೀನಾ ಬಳಿ ಕೇಳುವುದಿಲ್ಲ ಎಂದು ಹೇಳಿದ್ದಾರೆ.

ಚೀನಾದೊಂದಿಗೆ ಮಾತುಕತೆ ನಡೆಸಲು ಮುಕ್ತನಾಗಿದ್ದೇನೆ. ಟಿಬೆಟ್‌'ಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಬಯಸುತ್ತಿಲ್ಲ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (PRC) ಭಾಗವಾಗಿ ಉಳಿಯುತ್ತೇವೆ ಎಂದು ವರ್ಷಗಳ ಹಿಂದೆಯೇ ಸ್ಪಷ್ಟಪಡಿಸಿದ್ದೇನೆಂದು ತಿಳಿಸಿದರು.

ಇದೇ ವೇಳೆ ಲಡಾಖ್‌ಗೆ ತೆರಳುವ ಮೊದಲು ಎರಡು ದಿನಗಳ ಕಾಲ ದೆಹಲಿಯಲ್ಲಿ ಇರಲು ನಿರ್ಧರಿಸಿದ್ದೇನೆಂದು ಹೇಳಿದರು.

ತಮ್ಮ ಜನ್ಮದಿನ ಹಿನ್ನೆಲೆಯಲ್ಲಿ ಜುಲೈ 6 ರಂದು ನಾಲ್ಕು ನಿಮಿಷಗಳ ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದ ಅವರು, ಈ ಜೀವನದಲ್ಲಿ ಮಿತಿಯಿಲ್ಲದಷ್ಟು ಜನರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಲು ಬಯಸಿದ್ದಾನೆ. ಇತರರಿಗೆ ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಲು ನಿರ್ಧರಿಸಿದ್ದೇನೆಂದು ಹೇಳಿದ್ದರು.

SCROLL FOR NEXT