ವಿದೇಶ

ಫ್ರಾನ್ಸ್ ನಲ್ಲಿ ಸಾಮೂಹಿಕ ಚೂರಿ ಇರಿತ; ನಾಲ್ಕು ಮಕ್ಕಳು ಸೇರಿ ಐವರಿಗೆ ಗಾಯ

Lingaraj Badiger

ಪ್ಯಾರಿಸ್: ಆಗ್ನೇಯ ಫ್ರಾನ್ಸ್‌ನ ಅನ್ನೆಸಿ ನಗರದಲ್ಲಿ ಗುರುವಾರ ನಡೆದ ಚೂರಿ ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವರದಿಗಳ ಪ್ರಕಾರ, ಸಿರಿಯಾದ ಆಶ್ರಯ ಕೋರಿರುವ ದಾಳಿಕೋರನನ್ನು ಸ್ವಲ್ಪ ಸಮಯದ ನಂತರ ಬಂಧಿಸಲಾಗಿದೆ.

ಫ್ರಾನ್ಸ್‌ನ ಅನ್ನೆಸಿ ನಗರದಲ್ಲಿ ನಡೆದ ಚಾಕು ದಾಳಿಯಲ್ಲಿ ಮಕ್ಕಳು ಸೇರಿದಂತೆ ಹಲವಾರು ಜನ ಗಾಯಗೊಂಡಿದ್ದಾರೆ. ದಾಳಿಕೋರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಫ್ರೆಂಚ್ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

"ಅನ್ನೆಸಿಯ ಚೌಕದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬರು ಚಾಕುವಿನಿಂದ ಮಕ್ಕಳು ಸೇರಿದಂತೆ ಹಲವಾರು ಜನರ ಮೇಲೆ ದಾಳಿ ನಡೆಸಿದ್ದಾರೆ. ತಕ್ಷಣ ದಾಳಿಕೋರನನ್ನು ಬಂಧಿಸಿದ ಪೊಲೀಸರಿಗೆ ಧನ್ಯವಾದಗಳು" ಎಂದು ಡರ್ಮಾನಿನ್ ಅವರು ಟ್ವೀಟ್ ಮಾಡಿದ್ದಾರೆ.

ಕಳೆದ ಜನವರಿಯಲ್ಲಿ, ಪ್ಯಾರಿಸ್ ನ ಜನನಿಬಿಡ ಗರೆಡು ನಾರ್ಡ್ ರೈಲು ನಿಲ್ದಾಣದಲ್ಲಿ ನಡೆದ ಚಾಕು ದಾಳಿಯಲ್ಲಿ ಹಲವಾರು ಜನ ಗಾಯಗೊಂಡಿದ್ದರು. ಇದೀಗ ಮತ್ತೊಂದು ಅಂತಹದ್ದೆ ದಾಳಿ ನಡೆದಿದೆ.

SCROLL FOR NEXT