ವಿದೇಶ

ಜೂನ್ 21ರಿಂದ ಪ್ರಧಾನಿ ಮೋದಿ ಅಮೆರಿಕ ಭೇಟಿ: ಗ್ರೀನ್ ಕಾರ್ಡ್ ನಿಯಮಗಳನ್ನು ಸರಳಗೊಳಿಸಿದ ಬೈಡನ್ ಸರ್ಕಾರ

Sumana Upadhyaya

ವಾಷಿಂಗ್ಟನ್: ಅಮೆರಿಕದ ಜೋ ಬೈಡನ್ ಆಡಳಿತವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿಯ ಮೊದಲು ಮಹತ್ವದ ತೀರ್ಮಾನ ಕೈಗೊಂಡಿದೆ. ಅಮೆರಿಕದಲ್ಲಿ ಕೆಲಸ ಮಾಡಲು ಮತ್ತು ಅಲ್ಲಿ ಉಳಿಯಲು ಗ್ರೀನ್ ಕಾರ್ಡ್‌ಗಳಿಗಾಗಿ ಕಾಯುತ್ತಿರುವವರಿಗೆ ಅರ್ಹತಾ ಮಾನದಂಡಗಳ ಕುರಿತು ನೀತಿ ಮಾರ್ಗದರ್ಶನವನ್ನು ಬಿಡುಗಡೆ ಮಾಡುವ ಮೂಲಕ ನಿಯಮಗಳನ್ನು ಸರಳಗೊಳಿಸಿದೆ. 

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಅಮೆರಿಕಾದ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್ 21-24 ರವರೆಗೆ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ.

ಜೂನ್ 22 ರಂದು ಅಮೆರಿಕ ಅಧ್ಯಕ್ಷರು ಪ್ರಧಾನಿಯವರಿಗೆ ಔತಣಕೂಟ ಏರ್ಪಡಿಸುತ್ತಿದ್ದಾರೆ. ಈ ಭೇಟಿಯು ಜೂನ್ 22 ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣವನ್ನು ಒಳಗೊಂಡಿದೆ.

ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು (USCIS) ನೀಡಿದ ಮಾರ್ಗದರ್ಶನವು ಉದ್ಯೋಗದ ಅಧಿಕೃತ ದಾಖಲೆಗಾಗಿ (EAD) ಆರಂಭಿಕ ಮತ್ತು ನವೀಕರಣ ಅರ್ಜಿಗಳ ಅರ್ಹತಾ ಮಾನದಂಡಗಳ ಬಗ್ಗೆ ಸಾವಿರಾರು ಭಾರತೀಯ ತಂತ್ರಜ್ಞಾನ ವೃತ್ತಿಪರರಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. 

ವಲಸೆ ಕಾನೂನು ಪ್ರತಿ ವರ್ಷ ಸರಿ ಸುಮಾರು 1 ಲಕ್ಷದ 40 ಸಾವಿರ ಉದ್ಯೋಗ ಆಧಾರಿತ ಹಸಿರು ಕಾರ್ಡ್‌ಗಳನ್ನು ನೀಡುತ್ತದೆ.  ಹಸಿರು ಕಾರ್ಡ್‌ಗಳಲ್ಲಿ ಕೇವಲ ಏಳು ಪ್ರತಿಶತ ಮಾತ್ರ ವಾರ್ಷಿಕವಾಗಿ ಒಂದೇ ದೇಶದ ವ್ಯಕ್ತಿಗಳಿಗೆ ಹೋಗಬಹುದು.

USCIS ಮಾರ್ಗದರ್ಶನವು ನಿರ್ದಿಷ್ಟ ಅಗತ್ಯತೆಗಳನ್ನು ವಿವರಿಸುತ್ತದೆ, ಇದು ಬಲವಾದ ಸಂದರ್ಭಗಳ ಆಧಾರದ ಮೇಲೆ ಆರಂಭಿಕ EAD ಗೆ ಅರ್ಹತೆ ಪಡೆಯಲು ಅರ್ಜಿದಾರರು ಪೂರೈಸಬೇಕು.

SCROLL FOR NEXT