ವಿದೇಶ

ಆತಂಕಕಾರಿ ಅಂಶಗಳ ಬಗ್ಗೆ ಮೋದಿ ಬಳಿ ನೇರವಾಗಿ ವಿಷಯ ಪ್ರಸ್ತಾಪಿಸಿ: ಬೈಡನ್ ಗೆ ಅಮೇರಿಕಾ ಶಾಸಕರು

Srinivas Rao BV

ವಾಷಿಂಗ್ ಟನ್: ಅಮೇರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರ ಬಳಿ ದ್ವಿಪಕ್ಷೀಯ ಮಾತುಕತೆ ವೇಳೆ, ಆತಂಕಕ್ಕೆ ಕಾರಣವಾಗಿರುವ ವಿಷಯಗಳನ್ನು ನೇರವಾಗಿ ಪ್ರಸ್ತಾಪಿಸಲು ಮನವಿ ಮಾಡಿ ಅಧ್ಯಕ್ಷ ಜೋ ಬೈಡನ್ ಗೆ ಅಮೇರಿಕಾ ಶಾಸಕರು ಪತ್ರ ಬರೆದಿದ್ದಾರೆ.

ಅಮೇರಿಕಾ- ಭಾರತದ ನಡುವೆ ದೀರ್ಘಾವಧಿ, ಬಲಿಷ್ಠ, ಯಶಸ್ವಿ ಸಂಬಂಧಕ್ಕಾಗಿ ಮುಖ್ಯವಾಗಿರುವ ಅಂಶಗಳನ್ನು ಚರ್ಚೆ ಮಾಡಬೇಕು ಎಂದು ಅಮೇರಿಕಾ ಶಾಸಕರು ಹೇಳಿದ್ದಾರೆ.

ಸ್ನೇಹಿತರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ, ಪ್ರಾಮಾಣಿಕವಾಗಿ ಚರ್ಚೆ ಮಾಡಬೇಕೆಂಬುದನ್ನು  
ಅಮೇರಿಕಾ- ಭಾರತದ ಬಲಿಷ್ಠ ಸಂಬಂಧದ ಬೆಂಬಲಿಗರಾಗಿ ನಾವು ನಂಬುತ್ತೇವೆ ಎಂದು ಸಂಸದರಾದ ಪ್ರಮೀಳಾ ಜಯಪಾಲ್ ಹೇಳಿದ್ದಾರೆ.

ಭಾರತ ಮತ್ತು ಯುಎಸ್ ನಡುವಿನ ಪರಸ್ಪರ ಹಿತಾಸಕ್ತಿಗಳ ಹಲವು ಕ್ಷೇತ್ರಗಳ ಜೊತೆಗೆ - ನೀವು ನೇರವಾಗಿ ಆತಂಕ ಇರುವ ಕ್ಷೇತ್ರಗಳ ಬಗ್ಗೆಯೂ ಪ್ರಧಾನಿ ಮೋದಿಯವರ ಬಳಿ  ಪ್ರಸ್ತಾಪಿಸಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದು ಸಂಸದರು ಪತ್ರದಲ್ಲಿ ಬರೆದಿದ್ದಾರೆ.

SCROLL FOR NEXT