ನ್ಯೂಯಾರ್ಕ್ ನಲ್ಲಿ ಎಲೋನ್ ಮಸ್ಕ್-ಪಿಎಂ ಮೋದಿ ಭೇಟಿ 
ವಿದೇಶ

'ನಾನು ಮೋದಿಯವರ ಬಹಳ ದೊಡ್ಡ ಅಭಿಮಾನಿ, ಭಾರತದ ಭವಿಷ್ಯ ಉಜ್ವಲವಾಗಿದೆ': ಟೆಸ್ಲಾ ಸಿಇಒ ಎಲೋನ್ ಮಸ್ಕ್

ಭಾರತವು ಇತರ ದೊಡ್ಡ ದೇಶಗಳಿಗಿಂತ ಭವಿಷ್ಯದ ಮಟ್ಟಿಗೆ ನೋಡಿದರೆ ಹೆಚ್ಚಿನ ಭರವಸೆಯನ್ನು ಹೊಂದಿದೆ. ಭಾರತದ ಭವಿಷ್ಯದ ಬಗ್ಗೆ ನೋಡಲು ಹಾಗೂ ತಿಳಿದುಕೊಳ್ಳಲು ತೀವ್ರ ಉತ್ಸುಕನಾಗಿದ್ದೇನೆ ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹೇಳಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನ ಮಂತ್ರಿ ನ್ಯೂಯಾರ್ಕ್ ನಲ್ಲಿ ಎಲೋನ್ ಮಸ್ಕ್ ಸೇರಿದಂತೆ 

ನ್ಯೂಯಾರ್ಕ್: ಭಾರತವು ಇತರ ದೊಡ್ಡ ದೇಶಗಳಿಗಿಂತ ಭವಿಷ್ಯದ ಮಟ್ಟಿಗೆ ನೋಡಿದರೆ ಹೆಚ್ಚಿನ ಭರವಸೆಯನ್ನು ಹೊಂದಿದೆ. ಭಾರತದ ಭವಿಷ್ಯದ ಬಗ್ಗೆ ನೋಡಲು ಹಾಗೂ ತಿಳಿದುಕೊಳ್ಳಲು ತೀವ್ರ ಉತ್ಸುಕನಾಗಿದ್ದೇನೆ ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹೇಳಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನ ಮಂತ್ರಿ ನ್ಯೂಯಾರ್ಕ್ ನಲ್ಲಿ ಎಲೋನ್ ಮಸ್ಕ್ ಸೇರಿದಂತೆ ವಿವಿಧ ಉದ್ಯಮಿಗಳನ್ನು ಭೇಟಿ ಮಾಡಿದ್ದು ಅವರಾಡಿರುವ ಮಾತುಗಳು ಭಾರೀ ವೈರಲ್ ಆಗುತ್ತಿವೆ.

ನಿನ್ನೆ ಅವರು ನ್ಯೂಯಾರ್ಕ್ ನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್, ತಮ್ಮ ಸಾಮಾಜಿಕ ಮಾಧ್ಯಮ ಸಂಸ್ಥೆ ಟ್ವಿಟರ್‌ಗೆ ಸ್ಥಳೀಯ ಸರ್ಕಾರವನ್ನು ಅನುಸರಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲ ಅಥವಾ ಅದನ್ನು ಮುಚ್ಚಬೇಕಾಗುತ್ತದೆ ಎಂದರು. ಟ್ವಿಟ್ಟರ್ ಕಂಪನಿಯ ಮಾಜಿ ಮಾಲೀಕ ಮತ್ತು ಸಿಇಒ ಜಾಕ್ ಡಾರ್ಸೆ ಅವರ ಇತ್ತೀಚಿನ ಭಾರತ ಸರ್ಕಾರದ ವಿರುದ್ಧದ ಆರೋಪದ ಬಗ್ಗೆ ಕೇಳಿದಾಗ ಎಲೋನ್ ಮಸ್ಕ್ ಈ ರೀತಿ ಹೇಳಿದ್ದಾರೆ. 

ನಾವು ಯಾವುದೇ ದೇಶದಲ್ಲಿರಲಿ ಅಲ್ಲಿನ ಕಾನೂನು, ರೀತಿ ನೀತಿಗಳನ್ನು ಅನುಸರಿಸುವುದು ನಾವು ಮಾಡಬಹುದಾದ ಅತ್ಯುತ್ತಮ ಕೆಲಸವಾಗಿದೆ. ಅದಕ್ಕಿಂತ ಹೆಚ್ಚು ನಮಗೆ ಮಾಡಲು ಸಾಧ್ಯವಿಲ್ಲ. ವಿವಿಧ ರೀತಿಯ ಸರ್ಕಾರಗಳಿಗೆ ವಿಭಿನ್ನ ನಿಯಮಗಳು ಮತ್ತು ನಿಬಂಧನೆಗಳು ಇರುತ್ತವೆ. ಕಾನೂನಿನಡಿಯಲ್ಲಿ ಮುಕ್ತವಾಗಿ ವ್ಯವಹರಿಸಲು ನಮ್ಮ ಕೈಲಾದ ಪ್ರತ್ನ ಮಾಡುತ್ತೇವೆ ಎಂದರು.

ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆಯೇ ಎಂಬ ಪ್ರಶ್ನೆಗೆ, ಮುಂದಿನ ವರ್ಷ ಭಾರತ ದೇಶಕ್ಕೆ ಭೇಟಿ ನೀಡಲು ಯೋಜಿಸುತ್ತಿರುವುದಾಗಿ ಮಸ್ಕ್ ಹೇಳಿದರು. ಸದ್ಯದಲ್ಲಿಯೇ ಭಾರತದಲ್ಲಿನ ಯೋಜನೆ ಬಗ್ಗೆ ಘೋಷಿಸುತ್ತೇವೆ, ಅದಕ್ಕೆ ಅಲ್ಲಿನ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಕೊನೆಗೂ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ; ಜುಲೈ 1 ರಿಂದ ಜಾರಿ

IPL 2026: 82 ರನ್‌ಗಳಿಂದ SRH ಮಣಿಸಿದ Gujarat Titans; RCB ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಗಿಲ್ ಪಡೆ!

ಬಂಗಾಳದಲ್ಲಿ ಶುದ್ಧೀಕರಣ ಶುರು ಮಾಡಿದ ಸಿಎಂ ಸುವೇಂದು: TMC ನೇಮಕ ಮಾಡಿದ್ದ ಗ್ರೂಪ್ ಎ ಶ್ರೇಣಿಯ 232 ಅಧಿಕಾರಿಗಳ ವಜಾ!

ಒಂದೇ ಒಂದು ದಾಳಿ ನಡೆದರೂ ಯುರೇನಿಯಂ ದಾಸ್ತಾನು ಶಸ್ತ್ರಾಸ್ತ್ರ ದರ್ಜೆಗೆ ಸಂವರ್ಧನೆ- ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ!

Gruha Lakshmi | ದಕ್ಷಿಣ ಕನ್ನಡದಲ್ಲಿ ಮೃತ ಫಲಾನುಭವಿಗಳ ಖಾತೆಗೆ 22 ಕೋಟಿ ರೂ ಗೃಹಲಕ್ಷ್ಮಿ ಹಣ ಜಮೆ!

SCROLL FOR NEXT