ಸುರೇಶ್ ರೈನಾ ರೆಸ್ಟೋರೆಂಟ್ 
ವಿದೇಶ

ಆ್ಯಮ್ ಸ್ಟರ್ ಡ್ಯಾಮ್ ನಲ್ಲಿ 'ರೈನಾ' ರೆಸ್ಟೋರೆಂಟ್!

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಯುರೋಪ್‌’ನ ನೆದರ್ಲೆಂಡ್ಸ್‌’ನ ರಾಜಧಾನಿ ಆಮ್‌ಸ್ಟರ್‌ಡ್ಯಾಮ್‌’ನಲ್ಲಿ ನೂತನ ರೆಸ್ಟೋರೆಂಟ್ ತೆರೆದಿದ್ದಾರೆ.

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಯುರೋಪ್‌’ನ ನೆದರ್ಲೆಂಡ್ಸ್‌’ನ ರಾಜಧಾನಿ ಆಮ್‌ಸ್ಟರ್‌ಡ್ಯಾಮ್‌’ನಲ್ಲಿ ನೂತನ ರೆಸ್ಟೋರೆಂಟ್ ತೆರೆದಿದ್ದಾರೆ.

ಹೌದು.. ಈ ವಿಚಾರವನ್ನು ಸ್ವತಃ ಸುರೇಶ್ ರೈನಾ ಅವರೇ ಟ್ವಿಟರ್ ನಲ್ಲಿ ತಿಳಿಸಿದ್ದು,‘ಆಮ್‌ಸ್ಟರ್‌ಡ್ಯಾಮ್‌’ ನ ಹೃದಯ ಭಾಗದಲ್ಲಿ ಇಂಡಿಯನ್ ರೆಸ್ಟೋರಂಟ್ ಪರಿಚಯಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಭೋಜನದ ಮೇಲಿನ ನನ್ನ ಪ್ರೀತಿಯನ್ನು ನೀವು ಈಗಾಗಲೇ ನೋಡಿದ್ದೀರಿ. ಭಾರತದ ಬಹುಬಗೆಯ ನಿಜವಾದ ರುಚಿಗಳನ್ನು ಇಲ್ಲಿರುವ ಭಾರತೀಯರು ಸೇರಿದಂತೆ ಯುರೋಪ್ ಜನರಿಗೆ ತಲುಪಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಈ ವಿಶೇಷ ಹೊಟೆಲ್ ಗೆ ‘ರೈನಾ ಇಂಡಿಯನ್ ರೆಸ್ಟೋರಂಟ್’ ಎಂದು ಹೆಸರಿಡಲಾಗಿದೆ.

ಉತ್ತರಪ್ರದೇಶ ಮೂಲದ ಸುರೇಶ್ ರೈನಾ ಅವರು 2022 ರಲ್ಲಿ ಎಲ್ಲ ಪ್ರಕಾರದ ಕ್ರಿಕೆಟ್‌’ಗಳಿಗೆ ವಿದಾಯ ಹೇಳಿ ಹೋಟೆಲ್ ಉದ್ಯಮ ಸ್ಥಾಪಿಸಿದ್ದಾರೆ. ಅದರ ಭಾಗವಾಗಿ ಅವರು ನೆದರ್ಲ್ಯಾಂಡ್‌’ನಲ್ಲಿ ಈ ಹೋಟೆಲ್ ತೆರೆದಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮುತಾಕಿ ಭಾರತ ಭೇಟಿ ನಡುವೆ ಅಫ್ಘಾನ್ ಗಡಿಯಲ್ಲಿ ಮಾರಣಹೋಮ: 23 ಪಾಕ್ ಸೈನಿಕರು, 200 ತಾಲಿಬಾನ್ ಗಳ ಹತ್ಯೆ!

ಕೇರಳ: ಬಾವಿಗೆ ಹಾರಿದ ಮಹಿಳೆ ರಕ್ಷಿಸಲು ಹೋಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಮೂವರು ಸಾವು!

ಆದಾಯವೇ ಇಲ್ಲ, ಸಚಿವ ಸ್ಥಾನ ಬೇಡ- ನಾನು ಮತ್ತೆ ನಟನೆ ಮಾಡ್ತೇನೆ: ಸಾರ್ವಜನಿಕ ಕಾರ್ಯಕ್ರಮದಲ್ಲೇ ಸುರೇಶ್‌ ಗೋಪಿ ಘೋಷಣೆ

ಸರ್ಕಾರಿ ಸ್ಥಳಗಳಲ್ಲಿ RSS ನಿರ್ಬಂಧಕ್ಕೆ ಪ್ರಿಯಾಂಕ್ ಖರ್ಗೆ ಆಗ್ರಹ: ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗಳಿಗೆ CM ಸೂಚನೆ

ಅಧಿಕಾರದ ಅಮಲು ನೆತ್ತಿಗೇರಿದೆ, ಚುನಾಯಿತ ಶಾಸಕರನ್ನು ಕರಿಟೋಪಿ MLA ಎಂದು ಸಂಬೋಧಿಸುವುದು ಎಷ್ಟು ಸರಿ?

SCROLL FOR NEXT