ಗೂಗಲ್ ಸಿಇಒ ಮತ್ತು ಅಮೆಜಾನ್ ಸಿಇಒ ಭೇಟಿ ಮಾಡಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ 
ವಿದೇಶ

ಭಾರತದಲ್ಲಿ ಬೃಹತ್ ಹೂಡಿಕೆಗೆ ಗೂಗಲ್, ಅಮೆಜಾನ್ ಮುಂದು: ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಸುಂದರ್ ಪಿಚ್ಚೈ

ಇಂಟರ್ನೆಟ್ ದೈತ್ಯ ಸಂಸ್ಥೆ ಗೂಗಲ್ ತನ್ನ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ಸ್ಥಾಪಿಸಲಿದೆ ಎಂದು ಅದರ ಸಿಇಒ ಸುಂದರ್ ಪಿಚೈ ಘೋಷಿಸಿದ್ದಾರೆ. ನಿನ್ನೆ ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಈ ವಿಷಯ ಹೇಳಿದ್ದಾರೆ. 

ವಾಷಿಂಗ್ಟನ್ ಡಿಸಿ: ಇಂಟರ್ನೆಟ್ ದೈತ್ಯ ಸಂಸ್ಥೆ ಗೂಗಲ್ ತನ್ನ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ಸ್ಥಾಪಿಸಲಿದೆ ಎಂದು ಅದರ ಸಿಇಒ ಸುಂದರ್ ಪಿಚೈ ಘೋಷಿಸಿದ್ದಾರೆ. ನಿನ್ನೆ ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಈ ವಿಷಯ ಹೇಳಿದ್ದಾರೆ. 

ಕಂಪೆನಿಯು 10 ಬಿಲಿಯನ್ ಡಾಲರ್ ಭಾರತ  ಡಿಜಿಟಲೀಕರಣ ನಿಧಿಯ ಮೂಲಕ ಭಾರತದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದೆ ಎಂದು ಪಿಚೈ ಹೇಳಿದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 21 ರಿಂದ ಜೂನ್ 24 ರವರೆಗೆ ಅಮೆರಿಕಕ್ಕೆ ಪ್ರವಾಸ ಕೈಗೊಂಡು ಅನೇಕ ಉದ್ಯಮಿಗಳನ್ನು ಭೇಟಿ ಮಾಡಿ ಶ್ವೇತಭವನದಲ್ಲಿ ಔತಣ ಕೂಟದಲ್ಲಿ ಭಾಗವಹಿಸಿದ್ದರು. ಪಿಚೈ ಅವರಲ್ಲದೆ, ಪ್ರಧಾನ ಮಂತ್ರಿಗಳು ಉನ್ನತ ಸಿಇಒಗಳೊಂದಿಗೆ ಸಂವಾದದಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಆಪಲ್ ಸಿಇಒ ಟಿಮ್ ಕುಕ್, ಓಪನ್ಎಐ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್ ಮತ್ತು ಎಎಮ್‌ಡಿ ಸಿಇಒ ಲಿಸಾ ಸು ಮೊದಲಾದವರನ್ನು ಭೇಟಿ ಮಾಡಿದ್ದಾರೆ.

ಇಂದು ನಾವು ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ನಮ್ಮ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ತೆರೆಯುವುದಾಗಿ ಘೋಷಿಸುತ್ತಿದ್ದೇವೆ. ಇದು ಭಾರತದ ಫಿನ್‌ಟೆಕ್ ನಾಯಕತ್ವವನ್ನು ಭದ್ರಪಡಿಸುತ್ತದೆ, ಯುಪಿಐ ಮತ್ತು ಆಧಾರ್‌ಗೆ ಧನ್ಯವಾದಗಳು. ಅಡಿಪಾಯದಡಿ ನಾವು ನಿರ್ಮಾಣ ಮಾಡಿ ಜಾಗತಿಕ ಮಟ್ಟದಲ್ಲಿ ತೆಗೆದುಕೊಂಡು ಹೋಗುತ್ತೇವೆ ಎಂದರು.

ವಿಶೇಷವಾಗಿ ಡಿಜಿಟಲ್ ಇಂಡಿಯಾದ ದೃಷ್ಟಿ ಮತ್ತು ಆರ್ಥಿಕ ಅವಕಾಶದ ಸುತ್ತ ದೇಶವು ಸಾಧಿಸಿರುವ ಪ್ರಗತಿಯನ್ನು ನೋಡಲು ಉತ್ಸುಕವಾಗಿದೆ ಎಂದು ಭಾರತೀಯ ಮೂಲದ ಸಿಇಒ ಸುಂದರ್ ಪಿಚ್ಚೈ ಹೇಳಿದರು.

ನಾನು ಡಿಸೆಂಬರ್‌ನಲ್ಲಿ ಪ್ರಧಾನ ಮಂತ್ರಿಯನ್ನು ಭೇಟಿಯಾದೆ. ಗೂಗಲ್ ಇಂಡಿಯಾ ಡಿಜಿಟಲೀಕರಣ ನಿಧಿಯಲ್ಲಿ USD 10 ಶತಕೋಟಿ ಹೂಡಿಕೆ ಮಾಡುತ್ತಿದೆ. ಕೃತಕ ಬುದ್ಧಿಮತ್ತೆಯಲ್ಲಿ ಕೆಲಸ ಮಾಡುವ ಕಂಪನಿಗಳು ಸೇರಿದಂತೆ ನಾವು ಹೂಡಿಕೆಯನ್ನು ಮುಂದುವರಿಸುತ್ತಿದ್ದೇವೆ. ಅದರ ಭಾಗವಾಗಿ , ನಾವು 100-ಭಾಷೆಯ ಉಪಕ್ರಮವನ್ನು ಹೊಂದಿದ್ದೇವೆ. ನಾವು ಶೀಘ್ರದಲ್ಲೇ ಹೆಚ್ಚಿನ ಭಾರತೀಯ ಭಾಷೆಗಳಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತೇವೆ ಎಂದರು. 

ಇ-ಕಾಮರ್ಸ್ ದೈತ್ಯ ಅಮೆಜಾನ್ ಭಾರತದಲ್ಲಿ 15 ಶತಕೋಟಿ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ, ಇದು ದೇಶದಲ್ಲಿ ತನ್ನ ಒಟ್ಟು ಹೂಡಿಕೆಯನ್ನು 26 ಶತಕೋಟಿ ಡಾಲರ್ ಗೆ ತೆಗೆದುಕೊಂಡುಹೋಗುತ್ತದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುಎಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಅಮೆಜಾನ್ ಸಿಇಒ ಆಂಡಿ ಜಾಸ್ಸಿ, ಕಂಪನಿಯು ಈಗಾಗಲೇ ಭಾರತದಲ್ಲಿ 11 ಬಿಲಿಯನ್ ಯುಎಸ್‌ಡಿ ಹೂಡಿಕೆ ಮಾಡಿದೆ ಎಂದು ಹೇಳಿದರು.

ಅಮೆಜಾನ್ ಭಾರತದ ಅತಿದೊಡ್ಡ ಹೂಡಿಕೆದಾರರಲ್ಲಿ ಒಂದಾಗಿದೆ. ನಾವು ಇಲ್ಲಿಯವರೆಗೆ 11 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದೇವೆಯ ಮತ್ತಷ್ಟು 15 ಶತಕೋಟಿ ಡಾಲರ್ ಹೂಡಿಕೆ ಮಾಡಲು ಉದ್ದೇಶಿಸಿದ್ದೇವೆ. ಇದು ಒಟ್ಟು 26 ಶತಕೋಟಿ ಡಾಲರ್ ಗೆ ತಲುಪಿಸುತ್ತದೆ. ಪಾಲುದಾರಿಕೆ ಭವಿಷ್ಯವನ್ನು ಎದುರು ನೋಡುತ್ತಿದ್ದೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT