ವಿದೇಶ

ದೀಪಾವಳಿಗೆ ನ್ಯೂಯಾರ್ಕ್‌ ನಗರದ ಶಾಲೆಗಳಿಗೆ ಸಾರ್ವಜನಿಕ ರಜೆ ಘೋಷಣೆ

Lingaraj Badiger

ನ್ಯೂಯಾರ್ಕ್: ನ್ಯೂಯಾರ್ಕ್ ನಗರದಲ್ಲಿ ದಕ್ಷಿಣ ಏಷ್ಯಾ ಮತ್ತು ಇಂಡೋ-ಕೆರಿಬಿಯನ್ ಸಮುದಾಯಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನ್ಯೂಯಾರ್ಕ್ ನಗರದ ಶಾಲೆಗಳಿಗೆ ದೀಪಾವಳಿಯಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ ಎಂದು ಮೇಯರ್ ಎರಿಕ್ ಆಡಮ್ಸ್ ಅವರು ಸೋಮವಾರ ತಿಳಿಸಿದ್ದಾರೆ.

ದೀಪಗಳ ಹಬ್ಬ ಎಂದು ಕರೆಯಲ್ಪಡುವ ದೀಪಾವಳಿಯು ಅಕ್ಟೋಬರ್ ಅಥವಾ ನವೆಂಬರ್ ಬರುತ್ತದೆ. ಆದರೆ ದೀಪಾವಳಿ ಈ ವರ್ಷ ಭಾನುವಾರ, ನವೆಂಬರ್ 12 ರಂದು ಬಂದಿದ್ದು, 2023-2024 ಶಾಲಾ ಕ್ಯಾಲೆಂಡರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಹಿಂದೂಗಳು, ಸಿಖ್ಖರು, ಜೈನರು ಮತ್ತು ಕೆಲವು ಬೌದ್ಧರು ಸೇರಿದಂತೆ ಸುಮಾರು 2 ಲಕ್ಷ ನ್ಯೂಯಾರ್ಕ್ ನಗರದ ನಿವಾಸಿಗಳು ದೀಪಾವಳಿಯನ್ನು ಆಚರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಗಳ ಸಾರ್ವಜನಿಕ ರಜೆ ಪಟ್ಟಿಗೆ ಇದೀಗ ದೀಪಾವಳಿಯು ಸೇರಿಕೊಂಡಿದೆ ಎಂದು ಘೋಷಿಸಿದ ಆಡಮ್ಸ್, "ಇದು ನಿರಂತರವಾಗಿ ಬದಲಾಗುತ್ತಿರುವ ನಗರವಾಗಿದ್ದು, ಪ್ರಪಂಚದಾದ್ಯಂತ ಎಲ್ಲಾ ಸಮುದಾಯಗಳನ್ನು ನಿರಂತರವಾಗಿ ಸ್ವಾಗತಿಸುತ್ತಿದೆ" ಎಂದು ಹೇಳಿದ್ದಾರೆ.

SCROLL FOR NEXT