ವಿದೇಶ

ಗ್ರೀಸ್ ನಲ್ಲಿ ಭೀಕರ ರೈಲು ಅಪಘಾತ: ಕನಿಷ್ಠ 43 ಮಂದಿ ಸಾವು, ಸಚಿವರ ರಾಜೀನಾಮೆ

Sumana Upadhyaya

ಗ್ರೀಸ್: ಉತ್ತರ ಗ್ರೀಸ್‌ನಲ್ಲಿ ಅನೇಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲು ವೇಗವಾಗಿ ಬರುತ್ತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟವರ ಸಂಖ್ಯೆ 43ಕ್ಕೇರಿದೆ. 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಹೆದ್ದಾರಿ ಅಂಡರ್‌ಪಾಸ್‌ನಿಂದ ಪ್ರಯಾಣಿಕ ರೈಲು ಹೊರಬರುತ್ತಿದ್ದಾಗ ಟೆಂಪೆ ಪಟ್ಟಣದ ಬಳಿ ಮಂಗಳವಾರ ಮಧ್ಯರಾತ್ರಿಯ ಸಮಯದಲ್ಲಿ ರೈಲುಗಳ ಮಧ್ಯೆ ಘರ್ಷಣೆ ನಡೆದಿದ್ದು, ನಂತರ ಬಹು ಕಾರುಗಳು ಹಳಿತಪ್ಪಿದವು ಮತ್ತು ಅಪಘಾತದ ರಭಸಕ್ಕೆ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡವು. 

ಅಥೆನ್ಸ್‌ನಿಂದ ಥೆಸಲೋನಿಕಿ ರೈಲಿನಲ್ಲಿದ್ದ ಅನೇಕ ಪ್ರಯಾಣಿಕರು ದೀರ್ಘ ವಾರಾಂತ್ಯದಲ್ಲಿ ಕಾರ್ನೀವಲ್ ಆಚರಿಸಿದ ನಂತರ ಮನೆಗೆ ಹಿಂದಿರುಗಿದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ರೈಲಿನಲ್ಲಿದ್ದರು. 

"ಇದು ಭೀಕರ ದುರಂತವಾಗಿದ್ದು ಅದನ್ನು ಗ್ರಹಿಸಲು ಕಷ್ಟ" ಎಂದು ಉಪ ಆರೋಗ್ಯ ಸಚಿವ ಮಿನಾ ಗಾಗಾ ಹೇಳಿದ್ದಾರೆ. ಡಿಕ್ಕಿಯ ರಭಸಕ್ಕೆ ಹಲವಾರು ಪ್ರಯಾಣಿಕರು ರೈಲು ಬೋಗಿಗಳ ಕಿಟಕಿಗಳ ಮೂಲಕ ಎಸೆಯಲ್ಪಟ್ಟರು ಎಂದು ಬದುಕುಳಿದವರು ಹೇಳಿದ್ದಾರೆ. ಅಥೆನ್ಸ್‌ನ ಉತ್ತರಕ್ಕೆ ಸುಮಾರು 380 ಕಿಲೋಮೀಟರ್ ಕಮರಿಯ ಸಮೀಪವಿರುವ ಗದ್ದೆಗೆ ಅಪ್ಪಳಿಸಿದ ಪ್ರಯಾಣಿಕರ ರೈಲು ತಮ್ಮವರಿಗಾಗಿ ಬಿಡಿಸಲು ಹೋಗಿದ್ದಾರೆ. 

ಠಾಣಾಧಿಕಾರಿ ಬಂಧನ; ಸಚಿವರ ರಾಜೀನಾಮೆ: ಲಾರಿಸ್ಸಾ ನಗರದಲ್ಲಿ ರೈಲಿನ ಕೊನೆಯ ನಿಲ್ದಾಣದಲ್ಲಿ ಅಧಿಕಾರಿಗಳು ಸ್ಟೇಷನ್‌ಮಾಸ್ಟರ್‌ನನ್ನು ದುರ್ಘಟನೆ ಸಂಭವಿಸಿದ ಹಿನ್ನೆಲೆ ಯಲ್ಲಿ ಬಂಧಿಸಿದ್ದಾರೆ. ಆ ವ್ಯಕ್ತಿಯ ಹೆಸರು ಅಥವಾ ಬಂಧನಕ್ಕೆ ಕಾರಣವನ್ನು ಬಹಿರಂಗಪಡಿಸಲಿಲ್ಲ, ಆದರೆ ಹಳಿ ತಪ್ಪಲು ಸ್ಟೇಷನ್‌ಮಾಸ್ಟರ್ ಜವಾಬ್ದಾರರಾಗಿರುತ್ತಾರೆ ಎಂದು ಬಂಧಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಸಾರಿಗೆ ಸಚಿವ ಕೋಸ್ಟಾಸ್ ಕರಮನ್ಲಿಸ್ ಅವರು ರಾಜೀನಾಮೆ ನೀಡಿದ್ದಾರೆ. "ಇಷ್ಟು ಅನ್ಯಾಯವಾಗಿ ಮೃತಪಟ್ಟ ಜನರ ಸ್ಮರಣೆಗೆ ಗೌರವದ ಮೂಲಭೂತ ಸೂಚನೆಯಾಗಿ ಸಚಿವ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದು ಹೇಳಿದ್ದಾರೆ. 

SCROLL FOR NEXT