ವಿದೇಶ

ಸರ್ಬಿಯಾದಲ್ಲಿ ಮತ್ತೊಂದು ಗುಂಡಿನ ದಾಳಿ: 8 ಮಂದಿ ದಾರುಣ ಸಾವು, 13 ಮಂದಿಗೆ ಗಾಯ

Shilpa D

ಸರ್ಬಿಯಾ: ಮೊನ್ನೆಯಷ್ಟೇ ಸರ್ಬಿಯಾದ ಶಾಲೆಯೊಂದಲ್ಲಿ ನಡೆದ ಭೀಕರ ಗುಂಡಿನ ದಾಳಿ ಘಟನೆ ಹಸಿಯಾಗಿರುವಾಗಲೇ ಮತ್ತೊಂದು ಭೀಕರ ಗುಂಡಿನ ದಾಳಿ ಆ ದೇಶದಲ್ಲಿ ನಡೆದಿದೆ.

ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಿಂದ 60 ಕಿಮೀ ದೂರ ಇರುವ ಮಾಲೊ ಪ್ರಾಂತ್ಯದ ಮ್ಲಾಡೆನೋವಾಕ್ ಎಂಬ ಪಟ್ಟಣದ ಬಳಿ ಆಗಂತುಕನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದರಿಂದ 8 ಜನ ಮೃತಪಟ್ಟು 13 ಜನ ಗಂಭೀರವಾಗಿ ಗಾಯಗೊಂಡಿರು ಘಟನೆ ಗುರುವಾರ ಸಂಜೆ ನಡೆದಿದೆ.

ಸ್ವಯಂಚಾಲಿತ ಗನ್‌ನೊಂದಿಗೆ ರಸ್ತೆಗೆ ಇಳಿದಿದ್ದ ದಾಳಿಕೋರ ಚಲಿಸುವ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಸ್ಥಳದಲ್ಲೇ 8 ಜನ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಆರ್‌ಟಿಎಸ್ ವಾಹಿನಿ ಆಧರಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಸ್ಥಳದಲ್ಲಿ ಹೆಲಿಕಾಪ್ಟರ್‌ನೊಂದಿಗೆ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಬೀಡು ಬಿಟ್ಟಿದ್ದು, ದಾಳಿ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಪ್ರಯತ್ನ ಪಡುತ್ತಿದ್ದಾರೆ. ಬೆಲ್‌ಗ್ರೇಡ್‌ನ ಶಾಲೆಯೊಂದರಲ್ಲಿ 13 ವರ್ಷದ ಬಾಲಕನೊಬ್ಬ ತನ್ನ ತಂದೆಯ ಬಂದೂಕು ಬಳಸಿ ತನ್ನ ಎಂಟು ಸಹ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಯನ್ನು ಕೊಂದ ಒಂದು ದಿನದ ನಂತರ ಮತ್ತೊಂದು ಗುಂಡಿನ ದಾಳಿ ನಡೆದಿದೆ.

SCROLL FOR NEXT