ಕಿಂಗ್ ಚಾರ್ಲ್ಸ್ III 
ವಿದೇಶ

ಇಂದು ಲಂಡನ್ ನಲ್ಲಿ ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ: ಉಪ ರಾಷ್ಟ್ರಪತಿ ಭಾಗಿ

ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಇಂದು ಶನಿವಾರ ಕಿಂಗ್ ಚಾರ್ಲ್ಸ್ IIIರ (King Charles III) ಪಟ್ಟಾಭಿಷೇಕ ಸಮಾರಂಭ ನಡೆಯಲಿದ್ದು, ವೈಭೋವೇಪೇತ ಸಮಾರಂಭ ಸಾವಿರ ವರ್ಷಗಳ ಹಿಂದಿನ ಧಾರ್ಮಿಕ ಸಮಾರಂಭವನ್ನು ನೆನಪಿಸಲಿದೆ.

ಲಂಡನ್: ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಇಂದು ಶನಿವಾರ ಕಿಂಗ್ ಚಾರ್ಲ್ಸ್ IIIರ (King Charles III) ಪಟ್ಟಾಭಿಷೇಕ ಸಮಾರಂಭ ನಡೆಯಲಿದ್ದು, ವೈಭೋವೇಪೇತ ಸಮಾರಂಭ ಸಾವಿರ ವರ್ಷಗಳ ಹಿಂದಿನ ಧಾರ್ಮಿಕ ಸಮಾರಂಭವನ್ನು ನೆನಪಿಸಲಿದೆ.

ಲಂಡನ್ ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯು 1066 ಇಸವಿಯಲ್ಲಿ ವಿಲಿಯಂ ದಿ ಕಾಂಕರರ್‌ನಿಂದ ಹಿಡಿದು ಪ್ರತಿ ಬ್ರಿಟಿಷ್ ರಾಜನ ಪಟ್ಟಾಭಿಷೇಕದ ಸ್ಥಳವಾಗಿದೆ. ಕಿಂಗ್ ಚಾರ್ಲ್ಸ್ III ಮತ್ತು ಅವರ ಪತ್ನಿ ರಾಣಿ ಕ್ಯಾಮಿಲ್ಲಾ ಈ ಭವ್ಯ ಸಂಪ್ರದಾಯದ ಹೆಜ್ಜೆಗಳನ್ನು ಅನುಸರಿಸುತ್ತಾರೆ.

ಸೆಂಟ್ರಲ್ ಲಂಡನ್‌ನಲ್ಲಿ ಮೆರವಣಿಗೆ ಮಾರ್ಗದಲ್ಲಿ ಸಾರ್ವಜನಿಕರಿಗೆ ತೆರೆದಿರುವ ಪ್ರದೇಶದಲ್ಲಿ ವೀಕ್ಷಣೆಗೆ ಅವಕಾಶವಿರುತ್ತದೆ. ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ ಬಕಿಂಗ್ಹ್ಯಾಮ್ ಅರಮನೆಯಿಂದ ಅಬ್ಬೆಗೆ ಪಟ್ಟಾಭಿಷೇಕ ಸಂದರ್ಭದಲ್ಲಿ ಮೆರವಣಿಗೆ ಸಾಗಲಿದ್ದಾರೆ. ಕುದುರೆ-ಎಳೆಯುವ ಡೈಮಂಡ್ ಜುಬಿಲಿ ಸ್ಟೇಟ್ ಕೋಚ್‌ನಲ್ಲಿ ಪ್ರಯಾಣಿಸುತ್ತಾರೆ. ಈ ಸಮಯದಲ್ಲಿ ರಾಜನ ಅಂಗರಕ್ಷಕ, ಹೌಸ್‌ಹೋಲ್ಡ್ ಕ್ಯಾವಲ್ರಿ ಸದಸ್ಯರೊಂದಿಗೆ ಪ್ರಯಾಣಿಸುತ್ತಾರೆ.

ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಮತ್ತು ಅವರ ಪತ್ನಿ ಡಾ ಸುದೀಪ್ ಧಂಖರ್ ಅವರು ಐತಿಹಾಸಿಕ ಸಂದರ್ಭದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇತರ ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಜೊತೆಯಲ್ಲಿ ಸಮಾರಂಭದಲ್ಲಿ ಕುಳಿತುಕೊಳ್ಳಲಿದ್ದಾರೆ.

ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಎರಡು ಗಂಟೆಗಳ ಅವಧಿಯ ಸಮಾರಂಭವು ಘಂಟೆಗಳ ನಾದದೊಂದಿಗೆ ಮುಕ್ತಾಯಗೊಳ್ಳುತ್ತದೆ. ಹೊಸದಾಗಿ ಕಿರೀಟಧಾರಿಯಾದ ರಾಜ ಮತ್ತು ರಾಣಿ ಮತ್ತೊಂದು ಕಾಯುವ ಕುದುರೆ-ಎಳೆಯುವ ಐತಿಹಾಸಿಕ ಗೋಲ್ಡ್ ಸ್ಟೇಟ್ ಕೋಚ್‌ಗೆ ದಾರಿ ಮಾಡಿಕೊಡುತ್ತಾರೆ.

70 ವರ್ಷಗಳ ಹಿಂದೆ ಕಿಂಗ್ ಚಾರ್ಲ್ಸ್ III ಅವರ ತಾಯಿ ಎಲಿಜಬೆತ್ ಪಟ್ಟಾಭಿಷೇಕಗೊಂಡಾಗ ಅನೇಕ ದೇಶದ ಗಣ್ಯರು, ಜನರು, ರಾಜಮನೆತನಗಳು, ಸರ್ಕಾರಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು, ಆದರೆ ಇದೀಗ ಮತ್ತೆ ಅದೇ ಸಂಭ್ರಮಕ್ಕೆ ಅನೇಕ ದೇಶದ ಗಣ್ಯರು ಸಾಕ್ಷಿಯಾಗಲಿದ್ದಾರೆ. 

ಈ ಸಂಭ್ರಮದ ನಿರೂಪಣೆಯನ್ನು ಮಾಡಲು ಬಾಲಿವುಡ್​​ ನಟಿ ಸೋನಮ್ ಕಪೂರ್ ಭಾಗವಹಿಸಲಿದ್ದಾರೆ ಎಂದು ವೆರೈಟಿ ವರದಿ ಮಾಡಿದೆ. ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಅವರು ಪಟ್ಟಾಭಿಷೇಕ ಸಮಾರಂಭದಲ್ಲಿ ಬೈಬಲ್‌ನ ಕೊಲೊಸ್ಸಿಯನ್ಸ್ ಪುಸ್ತಕವನ್ನು ಬೋಧಿಸಲಿದದ್ದು, ಪ್ರಧಾನಿ ಅವರ ಪತ್ನಿ ಅಕ್ಷತಾ ಮೂರ್ತಿ ಕೂಡ ಧ್ವಜಾರೋಹಣದಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT