ಭಾರತೀಯ ಮೂಲದ ಎಂಜಿನಿಯರ್ ಐಶ್ವರ್ಯಾ 
ವಿದೇಶ

ಅಮೆರಿಕಾದಲ್ಲಿ ಶೂಟೌಟ್: ಹೈದ್ರಾಬಾದ್ ಮಹಿಳೆ ಸೇರಿದಂತೆ 9 ಮಂದಿಯ ಹತ್ಯೆ

ಅಮೆರಿಕಾದ ದಲ್ಲಾಸ್ ನಲ್ಲಿ ಶನಿವಾರ ನಡೆದ ಶೂಟೌಟ್ ನಲ್ಲಿ ಹೈದ್ರಾಬಾದ್ ಮೂಲದ ಮಹಿಳೆ ಸೇರಿದಂತೆ 9 ಮಂದಿ ಹತ್ಯೆಯಾಗಿದ್ದಾರೆ. ದಲ್ಲಾಸ್ ನ ಮಾಲ್ ವೊಂದರ ಹೊರಗೆ ಬಂದೂಕು ದಾರಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ನಂತರ ಹತ್ಯೆಗೀಡಾದ ಒಂಬತ್ತು ಜನರ ಪೈಕಿ ಭಾರತೀಯ ಮೂಲದ ಇಂಜಿನಿಯರ್ ಐಶ್ವರ್ಯಾ ತಾಟಿಕೊಂಡ ಕೂಡ ಒಬ್ಬರಾಗಿದ್ದಾರೆ.

ದಲ್ಲಾಸ್: ಅಮೆರಿಕಾದ ದಲ್ಲಾಸ್ ನಲ್ಲಿ ಶನಿವಾರ ನಡೆದ ಶೂಟೌಟ್ ನಲ್ಲಿ ಹೈದ್ರಾಬಾದ್ ಮೂಲದ ಮಹಿಳೆ ಸೇರಿದಂತೆ 9 ಮಂದಿ ಹತ್ಯೆಯಾಗಿದ್ದಾರೆ. ದಲ್ಲಾಸ್ ನ ಮಾಲ್ ವೊಂದರ ಹೊರಗೆ ಬಂದೂಕು ದಾರಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ನಂತರ ಹತ್ಯೆಗೀಡಾದ ಒಂಬತ್ತು ಜನರ ಪೈಕಿ ಭಾರತೀಯ ಮೂಲದ ಇಂಜಿನಿಯರ್ ಐಶ್ವರ್ಯಾ ತಾಟಿಕೊಂಡ ಕೂಡ ಒಬ್ಬರಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ತಾಟಿಕೊಂಡ ಹೈದರಾಬಾದ್‌ನ ಸರೂರ್‌ನಗರ ನಿವಾಸಿಯಾಗಿದ್ದು, ಭಾರತದಿಂದ ಅಮೆರಿಕಕ್ಕೆ ತೆರಳಿದ್ದರು. 27 ವರ್ಷದ ತಾಟಿಕೊಂಡ ದಲ್ಲಾಸ್ ಹೊರವಲಯ ಅಲ್ಲೆನ್ ಪ್ರೀಮಿಯಂನ ಮಳಿಗೆಯೊಂದರಲ್ಲಿ ಶಾಫಿಂಗ್ ಮಾಡುತ್ತಿದ್ದಾಗ ಬಂದೂಕುದಾರಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಹಂತಕನನ್ನು ಮಾರಿಸಿಯೊ ಗಾರ್ಸಿಯಾ ಎಂದು ಗುರುತಿಸಲಾಗಿದೆ. ನಂತರ ಪೊಲೀಸ್ ಅಧಿಕಾರಿಯೊಬ್ಬರು ಗುಂಡಿಕ್ಕಿ ಆತನನ್ನು ಕೊಂದಿದ್ದಾರೆ. ತಾಟಿಕೊಂಡ ಟೆಕ್ಸಾಸ್‌ನ ಮೆಕಿನ್ನಿಯಲ್ಲಿ ವಾಸಿಸುತ್ತಿದ್ದರು. ಆಕೆಯ  ಕುಟುಂಬ ಭಾರತದಲ್ಲಿತ್ತು ಎಂದು ವಾಹಿನಿಯೊಂದು ವರದಿ ಮಾಡಿದೆ.  

ದಲ್ಲಾಸ್ ನಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ತಾಟಿಕೊಂಡ ಮಾಲ್ ವೊಂದರಲ್ಲಿ ಆಕೆ ಶಾಫಿಂಗ್ ಮಾಡುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ಆಕೆಯ ಸ್ನೇಹಿತೆ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಟಿಕೊಂಡ ಮೃತದೇಹವನ್ನು ಭಾರತಕ್ಕೆ ತರಲು ಆಕೆಯ ಕುಟುಂಬ ಯೋಜನೆ ಮಾಡುತ್ತಿದೆ ಎಂದು ಪ್ರತಿನಿಧಿಯೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT