ವಿದೇಶ

ಕ್ವಾಡ್ ನಾಯಕರ ಸಭೆ ರದ್ದು, ಆದರೆ ಮೋದಿ ಪ್ರವಾಸ ಇದ್ದೇ ಇದೆ: ಆಸ್ಟ್ರೇಲಿಯಾ ಪ್ರಧಾನಿ

Srinivas Rao BV

ಸಿಡ್ನಿ: ಸಿಡ್ನಿಯಲ್ಲಿ ನಡೆಯಬೇಕಿದ್ದ ಕ್ವಾಡ್ ನಾಯಕರ ಸಭೆ ರದ್ದುಗೊಂಡಿದ್ದರೂ ಪ್ರಧಾನಿ ಮೋದಿ ಆಸ್ಟ್ರೇಲಿಯಾ ಪ್ರವಾಸ ಇದ್ದೇ ಇರಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಅಂಟೋನಿ ಅಲ್ಬನೀಸ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇನೆ ಎಂದು ಆಲ್ಬೆನೀಸ್ ಹೇಳಿದ್ದಾರೆ. ಕ್ವಾಡ್ ನಾಯಕರ ಸಭೆ ರದ್ದುಗೊಂಡಿದ್ದು ಪ್ರಧಾನಿ ಮೋದಿ ಅವರು ಮೇ.24 ರಂದು ಸಿಡ್ನಿಗೆ ಬರಲಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಆಸ್ಟ್ರೇಲಿಯಾ ಪ್ರಧಾನಿ ಆಲ್ಬೆನೀಸ್ ಉತ್ತರಿಸುತ್ತಿದ್ದರು. 

ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಆಸ್ಟ್ರೇಲಿಯಾ ಪ್ರವಾಸವನ್ನು ಮುಂದೂಡಿದ್ದು, ಆಲ್ಬೆನೀಸ್, ಮೋದಿ, ಬೈಡನ್, ಜಪಾನ್ ಪ್ರಧಾನಿ ಫುಮಿಯೋ ಕಿಷಿದಾ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಬೇಕಿತ್ತು. 

ಪ್ರಧಾನಿ ಮೋದಿ ಮುಂದಿನ ವಾರ ಇಲ್ಲಿಗೆ ಆಗಮಿಸಲಿದ್ದು, ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ಎಬಿಸಿ ರೇಡಿಯೋಗೆ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ವ್ಯಾಪಾರ ಸಭೆಗಳನ್ನು ನಡೆಸಲಿದ್ದಾರೆ ಮತ್ತು ಸಿಡ್ನಿಯ ಒಲಿಂಪಿಕ್ ಸೈಟ್‌ನಲ್ಲಿರುವ ಹೋಮ್‌ಬುಷ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
 

SCROLL FOR NEXT