ಮೃತ ಯುವತಿ ಲಹರಿ 
ವಿದೇಶ

ಟೆಕ್ಸಾಸ್: ಭಾರತ ಮೂಲದ ಮಹಿಳೆ ಅಮೆರಿಕದಲ್ಲಿ ನಿಗೂಢ ಸಾವು

ಭಾರತ ಮೂಲದ ಮಹಿಳೆಯೊಬ್ಬರು ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ವರದಿಯಾಗಿದೆ.

ಹೂಸ್ಟನ್: ಭಾರತ ಮೂಲದ ಮಹಿಳೆಯೊಬ್ಬರು ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ವರದಿಯಾಗಿದೆ.

ಅಮೆರಿಕದ ಟೆಕ್ಸಾಸ್‌ನಿಂದ ಈ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ 25 ವರ್ಷ ವಯಸ್ಸಿನ ಭಾರತ ಮೂಲದ ಮಹಿಳೆಯ ಮೃತದೇಹ ಒಕ್ಲಹೋಮಾ ರಾಜ್ಯದಲ್ಲಿ ಪತ್ತೆಯಾಗಿದೆ. ಒಕ್ಲಹೋಮ ರಾಜ್ಯದಲ್ಲಿ ಸುಮಾರು 322 ಕಿಲೋಮೀಟರ್ ದೂರದಲ್ಲಿ ಲಹರಿ ಶವ ಪತ್ತೆಯಾಗಿದೆ. ನಿಗೂಢವಾಗಿ ಸಾವಿಗೀಡಾಗಿರುವ ಯುವತಿ ಭಾರತ ಮೂಲದ ಲಹರಿ ಪಟಿವಾಡ ಎಂದು ತಿಳಿದುಬಂದಿದೆ. ಲಹರಿ ಕೊನೆಯ ಬಾರಿ ಮೆಕ್‌ಕಿನ್ಲೆ ಉಪನಗರದಲ್ಲಿ ಕಪ್ಪು ಟೊಯೋಟಾ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂದಿತ್ತು.

ಈ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಲಹರಿ ಅವರ ಕಾರಿನ ಕುರಿತು ಮಾಹಿತಿ ಕಲೆಹಾಕಿದ್ದು, ಟೆಕ್ಸಾಸ್‌ನ ಕೊಲಿನ್ಸ್ ಕೌಂಟಿಯ ಮೆಕ್‌ಕಿನ್ಲೆ ನಿವಾಸಿಯಾಗಿದ್ದ ಲಹರಿ ಪಟಿವಾಡ ಮೇ 12ರಂದು ಕೆಲಸಕ್ಕೆ ತೆರಳಿ, ವಾಪಸ್ಸಾಗದೇ ಇದ್ದ ಬಗ್ಗೆ ಅವರ ಕುಟುಂಬ ಆತಂಕ ವ್ಯಕ್ತಪಡಿಸಿತ್ತು. ಆಕೆಯ ಫೋನ್ ಒಕ್ಲಹೋಮಾದಲ್ಲಿ ಟ್ರ್ಯಾಕ್ ಆದ ಬಗ್ಗೆ ಸ್ನೇಹಿತರು ಮಾಹಿತಿ ಹಂಚಿಕೊಂಡ ಬಳಿಕ ದೂರು ನೀಡಲಾಗಿತ್ತು ಎಂದು ಹೇಳಿದ್ದಾರೆ.

ಟೆಕ್ಸಾಸ್‌ನ ಡಬ್ಲ್ಯುಓಡಬ್ಲ್ಯು ಸಮುದಾಯ ಗುಂಪು ಮಹಿಳೆಯ ಬಗೆಗಿನ ಮಾಹಿತಿ ಹಂಚಿಕೊಂಡಿದ್ದು, ಮೇ 13ರಂದು ಯುವತಿಯ ಮೃತದೇಹ ಪತ್ತೆಯಾದ ಸನ್ನಿವೇಶದ ಬಗ್ಗೆ ಯಾವುದೇ ವಿವರ ಹಂಚಿಕೊಂಡಿಲ್ಲ. ಈ ನಿಗೂಢ ಸಾವು ಅವರ ಕುಟುಂಬ, ಸ್ನೇಹಿತರು ಹಾಗೂ ಸ್ಥಳೀಯ ಸಮುದಾಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಮನರಂಜನಾ ತಾಣಗಳಲ್ಲಿ ಸುರಕ್ಷಾ ಕ್ರಮಗಳ ಅಗತ್ಯತೆಯನ್ನು ಈ ಪ್ರಕರಣ ಎತ್ತಿ ತೋರಿಸಿದೆ.

ಓವರ್‌ಲ್ಯಾಂಡ್ ಪಾರ್ಕ್ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ ಉದ್ಯೋಗದಲ್ಲಿದ್ದ ಲಹರಿ ಪಟಿವಾಡ ಅವರು ಕಾನ್ಸಾಸ್ ವಿವಿಯಿಂದ ಪದವಿ ಪಡೆದಿದ್ದು ಬ್ಲೂ ವ್ಯಾಲಿ ವೆಸ್ಟ್ ಹೈಸ್ಕೂಲ್‌ನಲ್ಲಿ ಅಧ್ಯಯನ ನಡೆಸಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT