ವಿದೇಶ

'ವಿಶ್ವ ಗುರು ಭಾರತ': ಪ್ರಧಾನಿ ಮೋದಿ ಪಾದ ಮುಟ್ಟಿದ ಪಪುವಾ ನ್ಯೂಗಿನಿ ಪ್ರಧಾನಿ ಮರಾಪೆ; ವಿಡಿಯೋ!

Vishwanath S

ಪೆಸಿಫಿಕ್ ನಾಯಕರೊಂದಿಗೆ ಮಾತುಕತೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಪಪುವಾ ನ್ಯೂಗಿನಿಯಾಗೆ ಆಗಮಿಸಿದರು. ಭಾರತವು ಬೆಳೆಯುತ್ತಿರುವ ಚೀನಾದ ಪ್ರಾದೇಶಿಕ ಪ್ರಭಾವವನ್ನು ತಗ್ಗಿಸಲು ಯತ್ನದಲ್ಲಿ ದ್ವೀಪ ರಾಷ್ಟ್ರಕ್ಕೆ ಭಾರತದ ಪ್ರಧಾನ ಮಂತ್ರಿಯ ಮೊದಲ ಭೇಟಿಯಾಗಿದೆ.

ರಾಜಧಾನಿ ಪೋರ್ಟ್ ಮೊರೆಸ್ಬಿಯಲ್ಲಿ ಸ್ಥಳೀಯ ಕಾಲಮಾನ ರಾತ್ರಿ 10 ಗಂಟೆ ಸುಮಾರಿಗೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ, ಅಭೂತಪೂರ್ವವಾಗಿ ಮೋದಿ ಅವರನ್ನು ಬರಮಾಡಿಕೊಳ್ಳಲಾಯಿತು. ಪಪುವಾ ನ್ಯೂಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ ಅವರು ಮೋದಿಯವರ ಪಾದ ಮುಟ್ಟಿ ಬರಮಾಡಿಕೊಂಡರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, ಇದನ್ನು 'ಗಮನಾರ್ಹ ಗೆಸ್ಚರ್' ಎಂದು ಕರೆದಿದ್ದಾರೆ. ಪಪುವಾ ನ್ಯೂಗಿನಿಯ ಪ್ರಧಾನಿ ಭಾರತದ ಪ್ರಧಾನಿ ಅವರ ಪಾದಗಳನ್ನು ಸ್ಪರ್ಶಿಸುವ ಮೂಲಕ ಗೌರವ ಸಲ್ಲಿಸುತ್ತಾರೆ. ಈ ಆಳವಾದ ದೃಶ್ಯವು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತದ ಬೆಳವಣಿಗೆ ಮತ್ತು ಪ್ರಭಾವವನ್ನು ತೋರಿಸುತ್ತದೆ ಎಂದು ಪತ್ರಾ ಟ್ವೀಟ್ ಮಾಡಿದ್ದಾರೆ.

SCROLL FOR NEXT