ಐಸ್ ಲ್ಯಾಂಡ್ ನಲ್ಲಿ ಭೂಕಂಪ 
ವಿದೇಶ

ಐಸ್‌ಲ್ಯಾಂಡ್ ನಲ್ಲಿ 14 ಗಂಟೆಗಳಲ್ಲಿ 800 ಬಾರಿ ಭೂಕಂಪನ: ತುರ್ತು ಪರಿಸ್ಥಿತಿ ಘೋಷಣೆ

ದೇಶದ ನೈರುತ್ಯ ಭಾಗದಲ್ಲಿರುವ ರೇಕ್ಯಾನೆಸ್ ಪರ್ಯಾಯ ದ್ವೀಪದಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿದ ಬಳಿಕ ಐಸ್‌ಲ್ಯಾಂಡ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಜ್ವಾಲಾಮುಖಿ ಸ್ಫೋಟಕ್ಕೆ ಪೂರ್ವಭಾವಿಯಾಗಿ ಈ ಭೂಕಂಪನಗಳು ಸಂಭವಿಸಿರುವ ಸಾಧ್ಯತೆಯಿದೆ.

ರೇಕ್ಯಾವಿಕ್: ದೇಶದ ನೈರುತ್ಯ ಭಾಗದಲ್ಲಿರುವ ರೇಕ್ಯಾನೆಸ್ ಪರ್ಯಾಯ ದ್ವೀಪದಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿದ ಬಳಿಕ ಐಸ್‌ಲ್ಯಾಂಡ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಜ್ವಾಲಾಮುಖಿ ಸ್ಫೋಟಕ್ಕೆ ಪೂರ್ವಭಾವಿಯಾಗಿ ಈ ಭೂಕಂಪನಗಳು ಸಂಭವಿಸಿರುವ ಸಾಧ್ಯತೆಯಿದೆ.

ಕಳೆದ 14 ಗಂಟೆಗಳಲ್ಲಿ ಸುಮಾರು 800 ಬಾರಿ ಭೂಮಿ ಕಂಪಿಸಿದ್ದರಿಂದ ಐಸ್‍ಲ್ಯಾಂಡ್‍ನಲ್ಲಿ  ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಪರಿಸ್ಥಿತಿ  ಘೋಷಿಸಲಾಗಿದೆ. ಈಗ ಸಂಭವಿಸಿರುವುದಕ್ಕಿಂತ ಹೆಚ್ಚು ಪ್ರಬಲ ಭೂಕಂಪನಗಳು ಉಂಟಾಗಬಹುದು ಮತ್ತು ಸರಣಿ ಭೂಕಂಪನಗಳು ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು ಎಂದು ಅಡಳಿತವು ಎಚ್ಚರಿಕೆ ನೀಡಿದೆ.

ಶುಕ್ರವಾರ ನಸುಕಿನ ಜಾವ 2 ಗಂಟೆಗೆ ಸರಣಿ ಭೂಕಂಪಗಳಾಗಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಇದು ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು. ಇದು ಮುಂದುವರೆದರೆ ಹಲವಾರು ಸಮಸ್ಯೆಗಳು ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ ಅಂತ್ಯದಿಂದ ಇಲ್ಲಿಯವರೆಗೂ ದ್ವೀಪದಲ್ಲಿ ಸುಮಾರು 24,000 ಭೂಕಂಪಗಳು ದಾಖಲಾಗಿವೆ.

ಐಸ್‍ಲ್ಯಾಂಡ್‍ನ ಅತಿದೊಡ್ಡ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಬ್ಲೂ ಲಗೂನ್ ಜಿಯೋಥರ್ಮಲ್ ಸ್ಪಾ ಜ್ವಾಲಾಮುಖಿ ಸಾಧ್ಯತೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೇ ಜನರ ರಕ್ಷಣೆ ಸಲುವಾಗಿ ಭೂಕಂಪನ ಸ್ಥಳಗಳಲ್ಲಿ ಸೇನಾ ಹಡಗುಗಳು ಕಾರ್ಯ ನಿರ್ವಹಿಸುತ್ತಿವೆ.

ಪ್ರವಾಸಿ ತಾಣಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆ ನಿರಾಶ್ರಿತರ ತಾಣಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಪರ್ಯಾಯ ದ್ವೀಪದಲ್ಲಿಯ,ಸುಮಾರು 4,000 ಜನರು ವಾಸವಾಗಿರುವ ಗ್ರಿಂಡ್‌ವಿಕ್ ಸರಣಿ ಭೂಕಂಪನಗಳು ದಾಖಲಾದ ಪ್ರದೇಶದಿಂದ ಸುಮಾರು ಮೂರು ಕಿ.ಮೀ.ಅಂತರದಲ್ಲಿದೆ. ಜ್ವಾಲಾಮುಖಿ ಸ್ಫೋಟಗೊಂಡರೆ ಜನರನ್ನು ತೆರವುಗೊಳಿಸಲು ಯೋಜನೆಯನ್ನು ಆಡಳಿತವು ರೂಪಿಸಿದೆ.

ಸರಣಿ ಭೂಕಂಪನಗಳ ಪೈಕಿ ಅತ್ಯಂತ ಪ್ರಬಲ ಭೂಕಂಪನ 5.2ರಷ್ಟು ತೀವ್ರತೆಯನ್ನು ಹೊಂದಿದ್ದು,ಗ್ರಿಂಡ್‌ವಿಕ್ ಗ್ರಾಮದ ಉತ್ತರದಲ್ಲಿ ಸಂಭವಿಸಿತ್ತು. ಗ್ರಿಂಡ್‌ವಿಕ್‌ಗೆ ತೆರಳುವ ರಸ್ತೆಗೆ ಹಾನಿಯಾಗಿರುವುದರಿಂದ ಅದನ್ನು ಮುಚ್ಚಲಾಗಿದೆ. ಐಎಂಒ ಪ್ರಕಾರ ಅಕ್ಟೋಬರ್ ಕೊನೆಯ ವಾರದಿಂದ ಪರ್ಯಾಯ ದ್ವೀಪದಲ್ಲಿ ಸುಮಾರು 24,000 ಕಂಪನಗಳು ದಾಖಲಾಗಿದ್ದು, ಶುಕ್ರವಾರ ಮಧ್ಯರಾತ್ರಿಯಿಂದ ಅಪರಾಹ್ನ ಎರಡು ಗಂಟೆಯ ನಡುವೆ 800 ಭೂಕಂಪನಗಳು ಸಂಭವಿಸಿವೆ. ಸುಮಾರು ಐದು ಕಿ.ಮೀ.ಆಳದಲ್ಲಿ ಶಿಲಾಪಾಕವು ಸಂಗ್ರಹಗೊಂಡಿದೆ. ಅದು ಮೇಲ್ಮೈನತ್ತ ಚಲಿಸಲು ಆರಂಭಿಸಿದರೆ ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು ಎಂದು ಎಎಂಒ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT