ಹಮಾಸ್ ದಾಳಿಯಿಂದ ಗಾಯಗೊಂಡವರನ್ನು ರಕ್ಷಿಸುತ್ತಿರುವ ಚಿತ್ರ 
ವಿದೇಶ

ಹಮಾಸ್ ಬಂಡುಕೋರರ ದಾಳಿಯಿಂದ 1,200 ಜನರ ಸಾವು, ಇಸ್ರೇಲ್ ಪರಿಷ್ಕೃತ ಅಂಕಿ ಅಂಶದ ವಿವರ ಪ್ರಕಟ!

ದಕ್ಷಿಣ ಇಸ್ರೇಲ್‌ನಲ್ಲಿ ಇಸ್ರೇಲಿ ಸಮುದಾಯಗಳು ಮತ್ತು ಸೇನಾ ನೆಲೆಗಳ ಮೇಲೆ ಅಕ್ಟೋಬರ್ 7 ರಿಂದ ಹಮಾಸ್ ಬಂಡುಕೋರರ ದಾಳಿಯಿಂದ ಮೃತಪಟ್ಟವರ ಸಂಖ್ಯೆಯನ್ನು ಪರಿಷ್ಕರಿಸಿರುವುದಾಗಿ ಇಸ್ರೇಲ್ ಶುಕ್ರವಾರ ಘೋಷಿಸಿದೆ.

ಇಸ್ರೇಲ್:  ದಕ್ಷಿಣ ಇಸ್ರೇಲ್‌ನಲ್ಲಿ ಇಸ್ರೇಲಿ ಸಮುದಾಯಗಳು ಮತ್ತು ಸೇನಾ ನೆಲೆಗಳ ಮೇಲೆ ಅಕ್ಟೋಬರ್ 7 ರಿಂದ ಹಮಾಸ್ ಬಂಡುಕೋರರ ದಾಳಿಯಿಂದ ಮೃತಪಟ್ಟವರ ಸಂಖ್ಯೆಯನ್ನು ಪರಿಷ್ಕರಿಸಿರುವುದಾಗಿ ಇಸ್ರೇಲ್ ಶುಕ್ರವಾರ ಘೋಷಿಸಿದೆ.

ಪರಿಷ್ಕೃತ ಅಂಕಿ ಅಂಶದ ಪ್ರಕಾರ ಸುಮಾರು 1,400 ರಿಂದ 1,200 ಜನರು ಮೃತಪಟ್ಟಿದ್ದಾರೆ. ಇದನ್ನು ವಿದೇಶಾಂಗ ಸಚಿವಾಲಯದ ವಕ್ತಾರ ಲಿಯರ್ ಹೈಯತ್ ಒದಗಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. 

ದುರಂತ ಘಟನೆಗಳು ಸಂಭವಿಸಿದ ಐದು ವಾರಗಳ ನಂತರ, ಎಲ್ಲಾ ಮೃತರನ್ನು ಗುರುತಿಸಲು ಇಸ್ರೇಲ್ ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತಿರುವುದರಿಂದ ಪರಿಷ್ಕರಣೆ ಮಾಡಲಾಗುತ್ತಿದೆ.  ಪರಿಷ್ಕೃತ ಅಂಕಿಅಂಶಗಳ ಕಾರಣದ ಬಗ್ಗೆ ಹೈಯತ್ ಯಾವುದೇ ವಿವರ ನೀಡಿಲ್ಲ.  ಆದಾಗ್ಯೂ, ಇಸ್ರೇಲಿನಲ್ಲಿ ಮೃತಪಟ್ಟವರಿಗಿಂತ ಹೆಚ್ಚು ಸುಮಾರು 1,500 ಭಯೋತ್ಪಾದಕರು ದಾಳಿಯ ಸಮಯದಲ್ಲಿ ಭದ್ರತಾ ಪಡೆಗಳಿಂದ ಮೃತಪಟ್ಟಿರುವುದಾಗಿ ನಂಬಲಾಗಿದೆ. 

ಕಳೆದ ಒಂದು ತಿಂಗಳಿನಿಂದ ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್  ದಾಳಿಯಿಂದಾದ ಮೃತಪಟ್ಟವರನ್ನು ಗುರುತಿಸಲು ಅಧಿಕಾರಿಗಳು ನಿರಂತರವಾಗಿ ಕೆಲಸ ಮಾಡಿದ್ದಾರೆ. ಅಲ್ಲಿ ಸಾವಿರಾರು ಭಯೋತ್ಪಾದಕರು ಗಡಿ ಬೇಲಿಯನ್ನು ಭೇದಿಸಿ, ಅವರ ಮನೆಗಳು ಮತ್ತು ಬೀದಿಗಳಲ್ಲಿ ಕುಟುಂಬಗಳ ಮೇಲೆ ದಾಳಿ ಮಾಡಿ ಕೊಂದಿದ್ದಾರೆ. ಕೆ

ಲವರು ಚಿತ್ರಹಿಂಸೆ, ಅತ್ಯಾಚಾರ, ಸುಡುವಿಕೆಯಂತಹ ಭಯಾನಕ ಕಿರುಕುಳ ಅನುಭವಿಸಿದ್ದಾರೆ.ದಾಳಿಕೋರರು ಗಡಿಯ ಸಮೀಪದಲ್ಲಿ ನೆಲೆಸಿದ್ದ ನೂರಾರು ಸೈನಿಕರನ್ನು ಕೊಂದಿರುವುದಾಗಿ ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT